ಅಂತರ್ಜಲ ಮಟ್ಟ ಅನೇಕ ಜಿಲ್ಲೆಯಲ್ಲಿ
ಕುಸಿಯುತ್ತಿದೆ, ಮಳೆ ಪ್ರಮಾಣ ಕಡಿಮೆ
ಇರುವ ಚಿತ್ರದುರ್ಗ, ಕೋಲಾರ, ಗುಲ್ಬರ್ಗ,
ಚಿಕ್ಕಬಳ್ಳಾಪುರ, ಬಳ್ಳಾರಿ, ದಾವಣಗೆರೆ,
ತುಮಕೂರುಗಳಲ್ಲಿ
ಕೊಳವೆಬಾವಿಗಳನ್ನು ಆಳಕ್ಕೆ
ಕೊರೆಯಲಾಗಿದೆ. ಬೆಂಕಿಬಿದ್ದಾಗ
ಬಾವಿತೋಡುವುದಕ್ಕಿಂತ, ನಾವು ಮಳೆ
ಬಂದಾಗಲೇ ಚೆನ್ನಾಗಿ ನೀರಿನ್ನ ಭೂಮಿಗೆ
ಹಿಂಗಿಸಬೇಕು. ಕೆರೆಕಟ್ಟೆಗಳು ಹೂಳು
ಎತ್ತಿ, ಮಳೆನೀರನ್ನು ತಡೆಹಿಡಿದು,
ಭೂಮಿಯ ಅಂತರ್ಜಲ ಹೆಚ್ಚಿಸಿಕೊಳ್ಳಬೇಕು
ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ
ನುಡಿದರು.
ಅವರು ನಗರದ ತರಳಬಾಳು ನಗರದ
ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ
ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ
ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ
“ಮಳೆ ನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಿ”
ಜನಜಾಗೃತಿ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಮಳೆ ನೀರು ಸಂಗ್ರಹ, ಇಂಗುಗುಂಡಿಗಳ
ಮಹತ್ವ ಮತ್ತು ಅಂತರ್ಜಲ ಹೆಚ್ಚಿಸುವ ಬಗ್ಗೆ
ಜನರಿಗೆ ಮನದಟ್ಟು ಮಾಡಿಕೊಡಬೇಕು.
ಸಾವಿರಾರು ಜನರು ತಾವೇ ಮುಂದಾಗಿ ಮಳೆ
ನೀರಿನ ಸಂಗ್ರಹದಲ್ಲಿ ಭಾಗವಹಿಸಬೇಕು.
ಜನರಲ್ಲಿ ಜಲಸಾಕ್ಷರತೆ ಹೆಚ್ಚಾಗಬೇಕು,
ಭೂಮಿಯ ಮೇಲ್ಮೆಯಲ್ಲಿ 71 ಭಾಗದಷ್ಟು
ನೀರಿನಿಂದ ಆವೃತ್ತವಾಗಿದೆ, 97 ಭಾಗ
ಸಮುದ್ರದಲ್ಲಿ ಉಪ್ಪುನೀರು, ಇನ್ನುಳಿದ 3
ಪರ್ಸೆಂಟು ಸಿಹಿನೀರ ಆಗಿದ್ದರೂ ಸಹ, ಅದರಲ್ಲಿ 2.4
ಪರ್ಸಂಟೇಜ್ ಧ್ರುವ ಪ್ರದೇಶಗಳಲ್ಲಿ ಹಿಮ
ಪರ್ವತಗಳಲ್ಲಿ ಬಂದಿಯಾಗಿದೆ, ನಮಗೆ 0.2
ಪರ್ಸಂಟೇಜ್ ಗಿಂತ ಕಡಿಮೆ ನೀರು ಸಿಗುತ್ತಿದೆ.
ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನೀರಿನ
ಬಳಕೆಯೂ ಹೆಚ್ಚಾಗುತ್ತಿದೆ, ಉದ್ಯಮಕ್ಕೆ,
ಕೃಷಿಗೆ, ದಿನನಿತ್ಯದ ಬಳಕೆಗೆ ನೀರಿನ ಬೇಡಿಕೆ
ಹೆಚ್ಚಾಗಿದೆ ಎಂದರು.
ನೀರನ್ನು ನಾವು ಮನೆಯಲ್ಲಿ ಅಥವಾ
ಕಾರ್ಖಾನೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ,
ಲಭ್ಯವಿರುವ ನೀರನ್ನು ನಾವು ಕೊಳಕು
ಮಾಡದೇ, ಕೆರೆ ನದಿಗಳನ್ನ ಮಾಲಿನ್ಯ
ಮಾಡದೇ, ಆಕಾಶದಿಂದ ಬೀಳುವ ಶುದ್ಧವಾದ
ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಮಳೆ
ನೀರಿನಲ್ಲೂ ಸಹ ಈಗ ಆಮ್ಲದ
ಮಳೆಯಾಗುತ್ತಿದೆ. ನಗರ
ಪ್ರದೇಶಗಳಲ್ಲಿ ಕೊಳಚೆ ನೀರನ್ನು
ಕೆರೆಗಳಿಗೆ, ಬಾವಿಗಳಿಗೆ, ಅಂತರ್ಜಲಕ್ಕೆ
ಕಳುಹಿಸುತ್ತಿದ್ದೇವೆ. ಕಲುಷಿತ ನೀರಿನಿಂದ
ರೋಗ ರುಜಿನಗಳು ಹೆಚ್ಚಾಗುತ್ತಿವೆ,
ದೇಹದಲ್ಲಿ 65 ಭಾಗ ನೀರಿದೆ, ಮಿದುಳಿನಲ್ಲಿ 70
ಭಾಗ, ರಕ್ತದಲ್ಲಿ 8 ಭಾಗ, ಶ್ವಾಸಕೋಶದಲ್ಲಿ
ತೊಂಬತ್ತು ಭಾಗ ನೀರಿದೆ, ನೀರಿಲ್ಲದೆ ನಾವು
ಒಂದು ದಿನವೂ ಬದುಕಲು ಸಾಧ್ಯವಿಲ.್ಲ ನೀರಿಗಾಗಿ
ನಾಳೆ ರಾಷ್ಟ್ರರಾಷ್ಟ್ರಗಳ ನಡುವೆ, ರಾಜ್ಯ
ರಾಜ್ಯಗಳ ನಡುವೆ, ಜಿಲ್ಲೆ ಜಿಲ್ಲೆಗಳ ನಡುವೆ,
ಹೋರಾಟಗಳು ನಡೆಯುತ್ತವೆ .
ಕಾರ್ಯಕ್ರಮದಲ್ಲಿ ಮಳೆಯಲ್ಲಿ ಮಕ್ಕಳು
ಛತ್ರಿ ಹಿಡಿದುಕೊಂಡು ಸಾಂಕೇತಿಕವಾಗಿ ಮಳೆ
ನೀರನ್ನು ಇಂಗಿಸಿ, ಅಂತರ್ಜಲ ಹೆಚ್ಚಿಸಿಕೊಳ್ಳಿ ಎಂದು
ಹಾಡಿನ ಮೂಲಕವೂ ಸಹÀ ಜಾಗೃತಿ
ಮೂಡಿಸಿದರು. ನೀರಿನ ಬಗ್ಗೆ ಭಿತ್ತಿ
ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ
ಸೌಂದರ್ಯ, ಅಂಶುಲ್, ಹೆಚ್.ಎಸ್.ರಚನ,
ಹೆಚ್.ಎಸ್. ಪ್ರೇರಣ, ಸಂಧ್ಯಾ, ಶ್ರೀನಿವಾಸ
ಹಾಜರಿದ್ದರು