ನ್ಯಾಮತಿ : ಅಸಹಾಯಕ ಸ್ಥಿತಿಯಲ್ಲಿರುವ 33 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಿದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಕಾರ್ಯಕ್ಕೂ ನಿಜಕ್ಕೂ ಶ್ಲಾಘನೀಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ 33 ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿ ಅವರು ಮಾತನಾಡಿದರು. ಸಾಕಷ್ಟು ಜನರು ನಮಗೂ ಸರ್ಕಾರಕ್ಕೆ ಸಂಬಂದ ಇಲ್ಲಾ ಎಂಬುವಂತ್ತಿದ್ದು, ಪ್ರತಿಯೊಬ್ಬರೂ ಲಾಕ್‍ಡೌನ್ ಸಮಯದಲ್ಲಿ ಈ ರೀತಿ ಮುಂದೆ ಬಂದು ಅಸಹಾಯಕ ಸ್ಥಿತಿಯಲ್ಲಿರುವ ಸಹಾಯ ಮಾಡಿದ್ದೇ ಆದರೇ ಸರ್ಕಾರಕ್ಕೂ ಹೊರೆ ಕಡಿಮೆಯಾಗಲಿದೆ ಎಂದರು.
ಅಂಗನವಾಡಿ ಕಾರ್ಯಕರ್ತರು,ಸಹಾಯಕಿಯರು ಮಕ್ಕಳ ಲಾಲನೆ ಪೋಷಣೆಯಂತಹ ಮಹತ್ತರ ಕಾರ್ಯ ಮಾಡುವುದರ ಜೊತೆಗೆ ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡುತ್ತಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವವರು ಏನಾದರೂ ಸಹಾಯ ಮಾಡ ಬೇಕೆಂದು ಮುಂದೆ ಬಂದು ಅಗತ್ಯ ವಸ್ತುಗಳನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಆರುಂಡಿ ಗ್ರಾಮಕ್ಕೆ ಭೇಟಿ : ಆರುಂಡಿ ಗ್ರಾಮದಲ್ಲಿ 45 ವರ್ಷ ಮೇಲ್ಟಪ್ಪಟ್ಟವರಿಗೆ ಮೊದಲು ಹಾಗೂ ಎರಡನೇ ಡೇಸ್ ಒಟ್ಟು 170 ಲಸಿಕೆಯನ್ನು ನೀಡಿದ್ದು ಇಂದು ಗ್ರಾಮಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಲಸಿಕೆಯ ಬಗ್ಗೆ ಮಾಹಿತಿ ಪಡೆದರು ಅಷ್ಟೇ ಅಲ್ಲದೇ ಪ್ರತಿಯೊಬ್ಬರೂ ಕೂಡ ಲಸಿಕೆ ಪಡೆಯುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬರಲಿದೆ ಎಂದು ಹೇಳುತ್ತಿದ್ದು ಈಗಾಗಲೇ ತಾಲೂಕು ಆಡಳಿತ ಸಕಲೆ ಸಿದ್ದತೆ ಮಾಡಿಕೊಂಡಿದ್ದರೂ ಕೂಡ ಪ್ರತಿಯೊಬ್ಬರೂ ಕೂಡ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.

Leave a Reply

Your email address will not be published. Required fields are marked *