ದಾವಣಗೆರೆ ನಗರದಲ್ಲಿ ಅಕ್ರಮವಾಗಿ ಗಾಂಜಾ ಹೊಂದಿದ್ದ
ಆರೋಪಿಗಳಿಬ್ಬರನ್ನು ಅಬಕಾರಿ ಇಲಾಖೆಯಿಂದ ಬಂಧಿಸಿ, 400 ಗ್ರಾಂ ಒಣ ಗಾಂಜಾ
ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ
ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು, ದಾವಣಗೆರೆ
ನೂತನ್ ಕಾಲೇಜ್ ರಸ್ತೆಯ, ಸ್ವಾಮಿ ವಿವೇಕಾನಂದ ಬಡಾವಣೆಯ 8 ನೇ
ಕ್ರಾಸ್ನಲ್ಲಿ ಅಕ್ರಮವಾಗಿ ಬಲೇನೋ ವಾಹನ ನೋಂದಣಿ ಸಂಖ್ಯೆ ಎ-29/ಎನ್-
5344 ರಲ್ಲಿ ಅಕ್ರಮವಾಗಿ ಒಂದು ಕೆಂಪು ಬಣ್ಬದ ಪ್ಲಾಸ್ಟಿಕ್ ಕವರ್ನಲ್ಲಿ 400
ಗ್ರಾಂ ಒಣ ಗಾಂಜಾವನ್ನು ಹೊಂದಿರುವುದನ್ನು ಪತ್ತೆ ಹಚ್ಚಿ,
ವಾಹನದಲ್ಲಿದ್ದ ಆರೋಪಿ, ಬಾಗಲಕೋಟೆ ಜಿಲ್ಲೆಯ ನವನಗರದÀ
ನಾಗರಾಜ್ನಾಯ್ಕರ್ ಬಿನ್ ಸೋಮಪ್ಪನಾಯ್ಕರ್, 21 ವರ್ಷ.
ಸೀಮೆಕೆರೆಯ ಶಂಕರ್ ಬಿನ್ ಸಿದ್ದಪ್ಪ, 24 ವರ್ಷ, ಸೇರಿದಂತೆ ಇಬ್ಬರು
ಆರೋಪಿಯನ್ನು ದಸ್ತಗಿರಿ ಮಾಡಿ, ಎನ್.ಡಿ.ಪಿ.ಸಿ ಕಾಯ್ದೆಯಡಿ ಪ್ರಕರಣ ದಾಖಲಿಸಿ
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ವಶಪಡಿಸಿಕೊಂಡ 400 ಗ್ರಾಂ ಒಣ ಗಾಂಜಾದ ಅಂದಾಜು ಮೌಲ್ಯ
ರೂ.4000 ಗಳು ಮತ್ತು ವಾಹನದ ಮೌಲ್ಯ ರೂ . 7,00,000 ಒಟ್ಟು ರೂ.
7,04,000 ಗಳಾಗಿರುತ್ತದೆ.
ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಇವರ ಮಾರ್ಗದರ್ಶನ,
ದಾವಣಗೆರೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಎಲ್.ನಾಗರಾಜ್,
ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ರಶ್ಮಿ ಕೆ.ಆರ್, ಹಾಗೂ ಇತರೆ
ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ದಾವಣಗೆರೆ ಜಿಲ್ಲೆಯ
ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.