ಇಂದು ಶ್ರೀ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಅವರ ನೇತ್ರತ್ವದಲ್ಲಿ ದಾವಣಗೆರೆ ಯುವ ಕಾಂಗ್ರೆಸ್ ವತಿಯಿಂದ ಲೊಕ್ಡೌನ್ ಇಂದ ಸಂಕಷ್ಟಕ್ಕೆ ಸಿಲಿಕಿರುವ ಮಂಗಳಮುಖಿಯರಿಗೆ ದಿನಸಿ ಕಿಟ್ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ದಾವಣಗೆರೆ ಉಸ್ತುವಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಿತಾ ರಘು, ರಾಜ್ಯ ಕಾರ್ಯದರ್ಶಿ ಇಲಾಹಿ ಸಿಕಂದರ್, ದಾವಣಗೆರೆ ನಗರಪಾಲಿಕೆ ಮಾಜಿ ಮೇಯರ್ ಡಿ. ಬಸವರಾಜ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಕಾರ್ಪೊರೇಟರ್ ಆ. ನಾಗರಾಜ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್ ಜೋಗಪ್ಪನವರ್, ದಾವಣಗೆರೆ ಉತ್ತರ ಪ್ರಧಾನ ಕಾರ್ಯದರ್ಶಿಗಳಾದ ನವೀನ ನಳವಾಡಿ, ದಾವಣಗೆರೆ ದಕ್ಷಿಣ ಪ್ರಧಾನ ಕಾರ್ಯದರ್ಶಿಗಳಾದ ಮಹಬೂಬ್ ಭಾಷಾ, ಮುಬಾರಕ್, ಜಬೀವುಲ್ಲಾ, ಯುವ ಕಾಂಗ್ರೆಸ್ ಸದಸ್ಯರಾದ ತಿಪ್ಪೇಶ್, ಸಾಗರ್ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.