ತೋಟಗಾರಿಕೆ ಇಲಾಖೆಯಿಂದ ಶಿಕಾರಿಪುರ ತಾಲ್ಲೂಕಿನ ತೋಟಗಾರಿಕೆ ಕ್ಷೇತ್ರ ಕಾಳೇನಹಳ್ಳಿಯಲ್ಲಿ ಸರ್ಕಾರ ನಿಗದಿಪಡಿಸಿದ ದರದಂತೆ ಪ್ರತಿ ತೆಂಗಿನ ಸಸಿಗೆ ರೂ.೭೦ ರಂತೆ ಜೂನ್ ೧೯ ರಿಂದ ತೆಂಗಿನ ಸಸಿ ವಿತರಣೆ ಪ್ರಾರಂಭಿಸಲಾಗಿದೆ.
ಕ್ಷೇತ್ರದಲ್ಲಿ ಲಭ್ಯವಿರುವ ಸಸಿಗಳನ್ನು ಮೊದಲು ಬಂದAತಹ ರೈತರಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು. ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯ ನರ್ಸರಿಯಲ್ಲಿರುವ ತೆಂಗಿನ ಸಸಿಗಳನ್ನು ಜುಲೈ ತಿಂಗಳಿನ ಅಂತ್ಯದಲ್ಲಿ ಮೇಲೆ ತಿಳಿಸಿರುವ ದರದಲ್ಲಿ ಸಸಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ ತಾಲ್ಲೂಕು ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಬಹುದೆAದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.