ಎಸ್.ಪಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ
ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ
ಆಶ್ರಯದಲ್ಲಿ ಆಯೋಜಿಸಿರುವ 7ನೇ ಅಂತರಾಷ್ಟ್ರೀಯ ಯೋಗ
ದಿನಾಚರಣೆಯ ಪ್ರಯುಕ್ತ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ
ಆನ್‍ಲೈನ್ ಮೂಲಕ 8 ವರ್ಷದ ಮೇಲ್ಪಟ್ಟವರಿಗೆ ಯೋಗ ಸ್ಪರ್ಧೆ
ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಿ.ಬಿ.ರಿಷ್ಯಂತ್ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭ್ಯರ್ಥಿಗಳ ಯೋಗ
ಸ್ಪರ್ಧೆಗೆ ಚಾಲನೆ ನೀಡಿ, ಸ್ಫರ್ಧಿಗಳ ಯೋಗಾಸನವನ್ನು ವೀಕ್ಷಿಸಿದ
ಅವರು, ಯೋಗಾಭ್ಯಾಸಗಳನ್ನು ಎಲ್ಲರೂ ಮತ್ತಷ್ಟು ಕರಗತ
ಮಾಡಿಕೊಂಡು ಜಿಲ್ಲೆಗೆ ಕೀರ್ತಿ ತಂದುಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಳಿಗೆ ಉದ್ಯಮಿ
ಬಿ.ಸಿ.ಉಮಾಪತಿ, ದಾವಣಗರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ
ಕಾರ್ಯದರ್ಶಿ ವಾಸುದೇವ್ ರಾಯ್ಕರ್, ಜಿಲ್ಲಾ ಆಯುಷ್ ಅಧಿಕಾರಿ
ಡಾ.ಶಂಕರಗೌಡ, ಹಾಗೂ ಆಯುಷ್ ಇಲಾಖೆ ಮತ್ತು ಯೋಗ
ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.