ಆಯ್ಕೆಗೆ ಅರ್ಜಿ ಆಹ್ವಾನ

ನೇರ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರ್ಲಿಗೆ ತಾಂಡಾದಲ್ಲಿ
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜ್‍ಗಾರ್ ಮಿತ್ರ
ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು
ಆಹ್ವಾನಿಸಲಾಗಿದೆ. ತಾಂಡಾಗಳಲ್ಲಿನ ಪ್ರತಿ 250 ರಿಂದ 300 ಮನೆಗಳಿಗೆ

ಒಬ್ಬರಂತೆ ತಾಂಡಾ ರೋಜ್‍ಗಾರ್ ಮಿತ್ರರನ್ನು ಆಯ್ಕೆ
ಮಾಡಲಾಗುವುದು.
ತಾಂಡ ರೋಜ್‍ಗಾರ್ ಮಿತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಕನಿಷ್ಠ 10ನೇ
ತರಗತಿ ಉತ್ತೀರ್ಣರಾಗಿರಬೇಕು. ಮಹಿಳೆಯರಿಗೆ ಮೊದಲ ಆದ್ಯತೆ
ನೀಡಲಾಗುವುದು. ಮಹಿಳೆಯರು ಲಭ್ಯವಿಲ್ಲದಿದ್ದಲ್ಲಿ
ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು. ನರೇಗಾ
ಕಾಮಗಾರಿಗಳಲ್ಲಿ ಕೆಲಸ ಮಾಡಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ 45 ವರ್ಷ ಮೀರಿರಬಾರದು. ತಾಂಡಾ ನಿವಾಸಿ ಆಗಿರಬೇಕು. ಓದು
ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು. ಕನ್ನಡ ಮತ್ತು ಲಂಬಾಣಿ
ಭಾಷೆ ತಿಳಿದಿರಬೇಕು. ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ
ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ
ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು. ತಾಂಡಾ ರೋಜ್‍ಗಾರ್
ಮಿತ್ರರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ದಿಷ್ಟ
ಸಮಯವನ್ನು ನೀಡಬೇಕಾಗಿದ್ದು. ಇದಕ್ಕೆ ತಾಂಡಾರೋಜ್ ಗಾರ್
ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.
ತಾಂಡಾ ರೋಜ್‍ಗಾರ್ ಮಿತ್ರರಿಗೆ ಕರ್ನಾಟಕ ತಾಂಡಾ ಅಭಿವೃದ್ಧಿ
ನಿಗಮದಿಂದ ಮಾಸಿಕ ರೂ. 3000/- ಹಾಗೂ ಮಹಾತ್ಮಗಾಂಧಿ ನರೇಗಾ
ಯೋಜನೆಯಡಿ ರೂ. 3000/- ವರೆಗೂ ಪ್ರೋತ್ಸಾಹ ಧನ
ನೀಡಲಾಗುವುದು.
ತಾಂಡಾ ರೋಜ್‍ಗಾರ್ ಮಿತ್ರರನ್ನು ಮಹಾತ್ಮಗಾಂಧಿ ನರೇಗಾ
ಯೋಜನೆಯಡಿ ಐ.ಇ.ಸಿ ಚಟುವಟಿಕೆಯ ಭಾಗವಾಗಿ 06 ತಿಂಗಳ ಅವಧಿಗೆ
ಮಾತ್ರ ತೊಡಗಿಸಿಕೊಳ್ಳಲಾಗುತ್ತದೆ. ತಾಂಡಾ ರೋಜ್‍ಗಾರ್ ಮಿತ್ರರು
ಸ್ವಯಂ ಪ್ರೇರಿತ ಕಾರ್ಯಕರ್ತರು ಮಾತ್ರ ಆಗಿದ್ದು, ಗ್ರಾಮ
ಪಂಚಾಯಿತಿಯ ಖಾಯಂ ಅಥವಾ ತಾತ್ಕಾಲಿಕ ನೌಕರರಾಗಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ
ಅರ್ಜಿ ಸಲ್ಲಿಸಬೇಕು. ಜೂ.30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ನಂತರ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ
ಮಾಹಿತಿಗೆ ನೇರ್ಲಿಗೆ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸಬಹುದೆಂದು
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *