ರೈತರಿಗೆ ಸೂಚನೆ
ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ
ಬೆಳೆ ವಿಮಾ ಯೋಜನೆ ( ಆರ್-ಡಬ್ಲೂಬಿಸಿಐಎಸ್) ಯಡಿಯಲ್ಲಿ ದಾವಣಗೆರೆ,
ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಹರಿಹರ ಮತ್ತು ಜಗಳೂರು
ತಾಲ್ಲೂಕುಗಳಿಗೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ,
ವೀಳ್ಯದೆಲೆ, ಕಾಳುಮೆಣಸು ಹಾಗೂ ಮಾವು ಬೆಳೆಗಳಿಗೆ ಮುಂಗಾರು
ಹಂಗಾಮಿನ ಬೆಳೆಗಳ ಸಂಯೋಜನೆಗಳನ್ನು ಅಧಿಸೂಚಿಸಲಾಗಿದ್ದು,
ವಿಮೆ ನೋಂದಣಿ ಮಾಡಿಸಲು ಸರ್ಕಾರವು ಆದೇಶವು ಹೊರಡಿಸಿದೆ. ಅಡಿಕೆ,
ದಾಳಿಂಬೆ, ವೀಳ್ಯದೆಲೆ, ಕಾಳುಮೆಣಸು ಬೆಳೆಗಳ ವಿಮೆ ನೊಂದಣಿಗೆ
ಜೂ.30 ಮತ್ತು ಮಾವು ಬೆಳೆ ವಿಮೆಗೆ ನೊಂದಣಿ ಮಾಡಿಸಲು ಜುಲೈ 31
ಕೊನೆಯ ದಿನಾಂಕವಾಗಿರುತ್ತದೆ ಎಂದು ಜಿ.ಪಂ ತೋಟಗಾರಿಕೆ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.