ಕುರುಬ
ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.
? ಇತಿಹಾಸ ಪೂರ್ವ
ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು.
?ಭಾರತ ಇತಿಹಾಸ
ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಕುರಿಗಾಹಿಯಾಗಿದ್ದು, ಆಗಿನ ನಂದ ದೊರೆಗಳ ವಿರುದ್ಧ ಸಿಡಿದೆದ್ದು ತನ್ನದೇ ಆದ ಸಾಮ್ರಾಜ್ಯವನ್ನು ಚಾಣಕ್ಯನ ಸಹಾಯದಿಂದ ಕಟ್ಟಿದನು. ಇದರು ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯಾ ಪಾರ್ಲಿಮೆಂಟ್ ಕಟ್ಟಡದ ೫ನೆ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ , ಅದರ ಕೆಳಗೆ ” ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತಿರುವುದು” ಎಂದು ಬರಿಯಲಾಗಿದೆ. ನಂತರ ಕದಂಬರು ರಾಷ್ಟ್ರಕೂಟ, ಪಲ್ಲವ, ಹೊಯ್ಸಳ, ದೇವಗಿರಿಯ ಯಾದವ, ಹೊಲ್ಕರ್ ರಾಜರು ಮತ್ತು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದರು.
?ಇತರೆ ಹೆಸರುಗಳು.
ಕುರುಬರು, ಹಾಲುಮತ, ಹೆಗಡೆಗೌಡ, ಕುರುಬ ಗೌಡರು, ಗೌಡ.
?ಕರ್ನಾಟಕದ ಕುರುಬ ಗೌಡರು.
ಕರ್ನಾಟಕದ ೩ನೆ ಅತಿ ದೊಡ್ಡ ಸಮುದಾಯ, ಕುರುಬ ಸಮುದಾಯ. ಕರ್ನಾಟಕದ ಪ್ರಮುಖ ಸಾಮ್ರಾಜ್ಯಗಳನ್ನು ಕಟ್ಟಿದವರು ಕುರುಬ ಗೌಡರು. ರಾಷ್ಟ್ರಕೂಟ , ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯ ಪ್ರಮುಖವಾದವು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಿಂದ ದಕ್ಷಿಣ ಭಾರತದಲ್ಲಿ ಹಿಂದೂ ಸಂಸ್ಕೃತಿ ಉಳಿಯುವಂತೆ ಆಯಿತು, ಹಿಂದೂಸಂಸ್ಕೃತಿ ಉಳಿಯಲು ಕಾರಣವಾದವರು ಕುರುಬ ಗೌಡ ಸಹೋದರರಾದ ಹಕ್ಕ ರಾಯ ಮತ್ತು ಬುಕ್ಕ ರಾಯ.
?ಕುರುಬ ಗೌಡರ ಸಂಪ್ರದಾಯ.
ಕುರುಬ ಗೌಡರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿ ಕೊಂಡು ಬಂದವರು, ಕಲ್ಲನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ , ಅದೇ ಸಂಸ್ಕೃತಿ ಬರ ಬರುತ್ತಾ ಶಿವ ಲಿಂಗ ಪೂಜೆಯಾಗಿ ಮಾರ್ಪಟ್ಟಿತು.ಶ್ರೀ ಜಗದ್ಗುರು ರೇವಣ ಸಿದ್ದೇಶ್ವರರು, ಮತ್ತು ಶ್ರೀ ಜಗದ್ಗುರು ಶಾಂತಿಮಯ್ಯ ಒಡೆಯರು ಈ ಜನಾಂಗದ ಆದಿ ಗುರುಗಳು. ಇವರು ಶಿವನ್ನನ್ನು ಬೀರೇಶ್ವರ , ಮೈಲಾರಲಿಂಗ , ಮಾದೇಶ್ವರ , ಮಲ್ಲಪ್ಪ , ಮಲ್ಲಿಕಾರ್ಜುನ ಮುಂತಾದ ಹೆಸರಿನಲ್ಲಿ ಪುಜಿಸುತಾರೆ. ಎಲ್ಲಮ್ಮ , ಭೀಮವ್ವ , ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿ ದೇವಿಯನ್ನು ಪುಜಿಸುತಾರೆ. ಕರ್ನಾಟಕ ಮತ್ತು ಅಂದ್ರ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯವಿರುತ್ತೆ , ಈ ದೇವಾಲಯಗಳ ಪೂಜಾರಿಗಳು ಕುರುಬಗೌಡರಾಗಿರುತ್ತಾರೆ.ಹಾಗು ಹರಿಗೆ ಸೇವೆ ಮತ್ತು ಭೂತ್ತಪ್ಪ ದೇವರನ್ನು ಪೂಜಿಸುತ್ತಾರೆ
?ಕುರುಬ ಗೌಡರ ಹಬ್ಬಗಳು.
ಶ್ರೀರೇವಣ ಸಿದ್ಡೇಶ್ವರ ಜಾತ್ರೆ ಹೊಳೆ ಸೇವೆ
ಮೈಲಾರ ಜಾತ್ರೆ
ಮಾದೇಶ್ವರ ಜಾತ್ರೆ
ಬೀರೆದೇವರ ಜಾತ್ರೆ
ಕನಕದಾಸ ಜಯಂತಿ
ಕಾರ್ಣಿಕೊತ್ಸವ
ಮಾರಿ ಹಬ್ಬ
ಬಿಳಿಗಿರಿ ರಂಗನಾಥ ಸ್ವಾಮಿ ಜಾತ್ರೆ
ದೊಡ್ಡ ದ್ಯವರ ಜಾತ್ರೆ
ತೆಂಗಿನಕಾಯಿ ಪವಾಡ
?ಕುರುಬ ಉಪ ಜಾತಿಗಳು .
ಕಾಡು ಕುರುಬ
ಜೇನು ಕುರುಬ
ಸಂಚಾರಿ ಕುರುಬ
ಗೊಂಡ ಕುರುಬ
ಬೆಟ್ಟ ಕುರುಬ
?ಕುರುಬ ಗೌಡರ ಇತಿಹಾಸ ಕತೆಗಳು ಸಂಪಾದಿಸಿ
ಹಾಲುಮತ ಕುರುಬ ಪುರಾಣ
ಮಾದೇಶ್ವರ ಪುರಾಣ
ಕಾಟಮರಾಜುವಿನ ಕಥೆ
?ಕುರುಬ ಗೌಡರ ಜನಪದ ಕಲೆಗಳು.
ಕಂಸಾಳೆ
ಡೊಳ್ಳು ಕುಣಿತ
ಗೊರವರ ಕುಣಿತ
ಬೀರೆದೇವರ ಕುಣಿತ
ವೀರಗಾಸೆ
?ಕುರುಬ ಗೌಡರ ಧರ್ಮಕ್ಷೇತ್ರಗಳು.
ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಸರವೂರು, ಬಿಜಾಪುರ ಜಿಲ್ಲೆ
ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಅಣತಿ, ಹಾಸನ ಜಿಲ್ಲೆ
ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ
ಮಾದೇಶ್ವರ ಬೆಟ್ಟ
ಮೈಲಾರ
ಕಾಗಿನೆಲೆ
ಹಂಪಿ
ದೆವರ ಆದಿಹಲ್ಲಿ ಹಿರೆ ಬೀರಪ್ಪ ಅರಸಿಕೆರೆ
ಶ್ರಿ ರಂಗನಾಥ
ಗುಡ್ಡದ ಮಲ್ಲಯ್ಯ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು)
ಬಲ್ಲೂರಪ್ಪ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು)
?ಕುರುಬ ಗೌಡರ ಇತಿಹಾಸ ಪುರುಷರು.
ಜಗದ್ಗುರು ಶಾಂತ ಮುತ್ತಯ್ಯ (ಶಾಂತಿಮಯ್ಯ)ಒಡೆಯರ್
ಮಹಾಕವಿ ಕಾಳಿದಾಸ
ದಾಸ ಶ್ರೇಷ್ಟ ಕನಕದಾಸ
ಸಂಗೊಳ್ಳಿ ರಾಯಣ್ಣ
ಹಕ್ಕ ರಾಯ
ಬುಕ್ಕ ರಾಯ
ಕಾಕ ನಾಯಕ
ಜುಂಜೆ ಗೌಡ
ಚಂದ್ರಗುಪ್ತ ಮೌರ್ಯ
(ಛತ್ರಪತಿ ಶಿವಾಜಿ)
(ಸಾಮ್ರಾಟ್ ಅಶೋಕ)
(ಸೊಲ್ಲಾಪುರದ ಸಿದ್ದರಾಮೇಶ್ವರರು)
(ವಚನಕಾರ ವೀರ ಗೊಲ್ಲಾಳ)
(ವಚನಕಾರ ಬೋಮ್ಮಗೊಂಡೇಶ್ವರ)…