ಯುವ ನೇತಾರ ಮಾಜಿ ಎಐಸಿಸಿ ಅಧ್ಯಕ್ಷರಾದ ರಾಹುಲಗಾಂಧಿ ಅವರ 51ನೇ ಜನ್ಮ ದಿನದ ಅಂಗವಾಗಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 51 ಸಸಿ ನೆಡುವ ಕಾರ್ಯಕ್ರಮ.
ದಿನಾಂಕ 21.06.2021ರಂದು ಮು.11.00 ಗಂಟೆಗೆ ಸ್ಥಳ ದಿ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಇರುವ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿ ಹತ್ತಿರ ಯುವ ನೇತಾರ ಮಾಜಿ ಎಐಸಿಸಿ ಅಧ್ಯಕ್ಷರಾದ ರಾಹುಲ ಗಾಂಧಿ ಅವರ 51ನೇ ಜನ್ಮ ದಿನದ ಅಂಗವಾಗಿ *ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿವತಿಯಿಂದ 51 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಗದಗ-ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ.ಜಿ ಎಸ ಪಾಟೀಲಜಿ ಚಾಲನೆಯನ್ನು ನೀಡಲಿದ್ದಾರೆ.
ಆದಕಾರಣ ಈ ಕಾರ್ಯಕ್ರಮಕ್ಕೆ ಯಾವತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ಪಕ್ಷದ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ, ಗ್ರಾಮ ಪಂಚಾಯತ, ಹಾಗೂ ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಅಧ್ಯಕ್ಷರುಗಳು, ಹಾಗೂ ಸದಸ್ಯರುಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ವಿದ್ಯಾಥರ್ಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಎಸ್ಸಿ/ಎಸ್ಟಿ, ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು ಹಾಗೂ ಅಧ್ಯಕ್ಷರುಗಳು, ರಾಜೀವಗಾಂಧಿ ಪಂಚಾಯತ ರಾಜ್ ಸಂಘಟನೆ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ .ಅಶೋಕ ಮಂದಾಲಿಯವರು ಆಗಮಿಸಲು ವಿನಂತಿಸಿದ್ದಾರೆ