ಪ್ರವೇಶಾತಿಗೆ ಅರ್ಜಿ ಆಹ್ವಾನ
2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೌಲಾನಾ ಆeóÁದ್
ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಆಂಗ್ಲ
ಮಾಧ್ಯಮದಲ್ಲಿ ವ್ಯಾಸಂಗ ಮಾಡಲು 6ನೇ ತರಗತಿಯ
ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ಸಮವಸ್ತ್ರ,
ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು
ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ
ನೀಡಲಾಗುತ್ತದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳಿಗೆ
ಶೇ.75 ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ, ಇತರೆ
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಪ್ರವೇಶ
ಲಭ್ಯವಿದೆ.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ದಾಖಲಾತಿಗಾಗಿ ಪೋಷಕರ
ಆದಾಯ ಮಿತಿ ರೂ.2.50 ಲಕ್ಷಗಳಿಗೆ ಮೀರಬಾರದು.
ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಜೂ.21 ರಿಂದ ಜು.10
ರೊಳಗಾಗಿ ಅಲ್ಪಸಂಖ್ಯಾತರ ಮೌಲಾನಾ ಆeóÁದ್ ಆಂಗ್ಲ
ಮಾಧ್ಯಮ ಮಾದರಿ ಶಾಲೆಗಳಲ್ಲಿ ಕಚೇರಿ ವೇಳೆಯಲ್ಲಿ
ಅರ್ಜಿಗಳನ್ನು ಪಡೆದು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಳಿಗಾಗಿ
ಅಲ್ಪಸಂಖ್ಯಾತರ ಮೌಲಾನಾ ಆeóÁದ್ ಆಂಗ್ಲ ಮಾಧ್ಯಮ ಮಾದರಿ
ಶಾಲೆ ಕೆ.ಆರ್ ಮಾರ್ಕೇಟ್ (ಮೊ:9916828601), ಅಲ್ಪಸಂಖ್ಯಾತರ
ಮೌಲಾನಾ ಆeóÁದ್ ಆಂಗ್ಲ ಮಾಧ್ಯಮ ಮಾದರಿ ಶಾಲೆ ಬೀಡಿ ಲೇಔಟ್,
(ಮೊ:9916828601), ಅಲ್ಪಸಂಖ್ಯಾತರ ಮೌಲಾನಾ ಆeóÁದ್ ಆಂಗ್ಲ
ಮಾಧ್ಯಮ ಮಾದರಿ ಶಾಲೆ ಹರಿಹರಟೌನ್, (ಮೊ:9449487515),
ಅಲ್ಪಸಂಖ್ಯಾತರ ಮೌಲಾನಾ ಆeóÁದ್ ಆಂಗ್ಲ ಮಾಧ್ಯಮ ಮಾದರಿ
ಶಾಲೆ ಜಗಳೂರು ಟೌನ್, (ಮೊ:8296909570) ಮತ್ತು
ಅಲ್ಪಸಂಖ್ಯಾತರ ಮೌಲಾನಾ ಆeóÁದ್ ಆಂಗ್ಲ ಮಾಧ್ಯಮ ಮಾದರಿ
ಶಾಲೆ ಸಂತೆಬೆನ್ನೂರು ಗ್ರಾಮ, ಚನ್ನಗಿರಿ (ಮೊ:9880509916)
ಇವರಿಗೆ ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.