ಯೋಗ ದಿನಾಚರಣೆ
ದಾವಣಗೆರೆ: ಯೋಗ ಮಾಡುವ ಮೂಲಕ ರೋಗ
ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಯೋಗ ಶಿಕ್ಷಕ
ಬಿ.ಎಸ್ ನೀಲಪ್ಪ ತಿಳಿಸಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ದಾವಣಗೆರೆ ಜಿಲ್ಲಾ
ಕಾಂಗ್ರೆಸ್ ಕಛೇರಿಯಲ್ಲಿ (ಡಾ. ಶಾಮನೂರು ಶಿವಶಂಕರಪ್ಪ
ಭವನ) ಏರ್ಪಡಿಸಿದ್ದ ಅಂತರಾಷ್ಟ್ರೀಯ ಯೋಗ
ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮನುಕುಲದ ಮಾನಸಿಕ-ದೈಹಿಕ ಸದೃಢತೆಗಾಗಿ
ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ
ಮನ್ನಣೆ ದೊರೆತಿದೆ. ಏಕಾಗ್ರತೆ ಮತ್ತು ಬೆಳವಣಿಗೆಗೆ
ಇದು ಹೆಚ್ಚು ಪರಿಣಾಮಕಾರಿ&quoಣ; ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್
ಮಾತನಾಡಿ ಯೋಗವು ಯಾವುದೇ ದೇಶ, ಜಾತಿ,
ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ
ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉನ್ನತಿಗೆ
ಕೊಂಡೊಯ್ಯಲು ನಮ್ಮ ಹಿರಿಯರು ಸಂಶೋಧಿಸಿದ
ವಿಜ್ಞಾನವೇ ಯೋಗ. ಯೋಗ ಜಗತ್ತಿನ ಪ್ರತಿಯೊಬ್ಬರ
ಜೀವನ ಶೈಲಿ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ದಿನೇಶ್.ಕೆ.ಶೆಟ್ಟಿ, ಮಹಿಳಾ ಕಾಂಗ್ರೆಸ್ನ ದ್ರಾಕ್ಷಾಯಣಮ್ಮ,
ರಾಜೇಶ್ವರಿ, ಸಿದ್ದೇಶ್ ಚಂದ್ರ, ಶ್ರೀಕಾಂತ್ ಬಗರೆ, ದಾದಾಪೀರ್,
ಗಂಗಾಧರ್, ಗೋವಿಂದ ಹಾಲೇಕಲ್ಲು, ಸೊಸೈಟಿ
ವೆಂಕಟೇಶ ನಾಯ್ಕ, ಅಲೆಕ್ಸಾಂಡರ್(ಜಾನ್), ಮೊಟ್ಟೆ ದಾದಾಪೀರ್
ಮತ್ತಿತರರಿದ್ದರು.