ಪಟ್ಟಣದ ಗುರುಭವನದಲ್ಲಿ ಸರ್ಕಾರಿ ನೌಕರರು ಹಾಗೂ ಶಿಕ್ಷಕರೂ,ಅವರ ಕುಟುಂಬಸ್ಥರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಸಿಕೆಯಲ್ಲಿ ಯಾವುದೇ ರಾಜಕೀಯ ಇಲ್ಲಾ ಎಲ್ಲರಿಗೂ ಆರೋಗ್ಯ ನೀಡಲು, ರಾಜ್ಯವನ್ನು ಕೊರೊನಾ ಮುಕ್ತವಾಗಿ ಮಾಡಲು ಲಸಿಕೆ ನೀಡುತಿದ್ದು ಎಲ್ಲರೂ ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದಿಂದ ಲಸಿಕೆ ನೀಡುವಂತೆ ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಒಂದು ಸಾವಿರ ಕೋವ್ಯಾಕ್ಸಿನ್ ಲಸಿಕೆಯನ್ನು ಸರ್ಕಾರಿ ನೌಕರರಿಗೆ ಹಾಗೂ ಮೂರು ಸಾವಿರ ಕೋವಿಶೀಲ್ಡ್ ಲಸಿಕೆಯನ್ನು ಅವಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ನೀಡಲಾಗಿದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 45 ವರ್ಷ ಮೇಲ್ಪಟ್ಟವರಿ ಮೊದಲ ಡೋಸ್ 41,329 ಜನರಿಗೆ ನೀಡಿದ್ದು ಎರಡನೇ ಡೋಸ್ 9029 ಜನರಿಗೆ ನೀಡಲಾಗಿದೆ ಎಂದ ಶಾಸಕರು 59,967 ಟಾರ್ಗೆಟ್ ಇದ್ದು ಅದರಲ್ಲಿ 50,358 ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದರು. ಇನ್ನು ಹದಿನೆಂಟು ವರ್ಷ ಮೇಲ್ಪಟ್ಟವ 5066 ಜನರಿಗೆ ಲಸಿಕೆ ಹಾಕಿಸಿದ್ದು ಹಂತಹಂತವಾಗಿ ಎಲ್ಲರಿಗೂ ಲಸಿಕೆ ಹಾಕಲಾಗುವುದು ಎಂದರು. ರಾಜ್ಯದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಹದಿನೆಂಟು ವರ್ಷ ಮೇಲ್ಪಟ್ಟ, 45 ವರ್ಷ ಮೇಲ್ಪಟ್ಟ1,71,940 ಜನರನ್ನು ನಿಗದಿ ಪಡಿಸಿದ್ದು ಅದರಲ್ಲಿ ಅದರಲ್ಲಿ 55,452 ಜನರಿಗೆ ಈಗಾಗಲೇ ಲಸಿಕೆ ಹಾಕಿದ್ದು, ಇನ್ನು 1,16,489 ಜನರಿಗೆ ಲಸಿಕೆ ನೀಡ ಬೇಕಿದ್ದು ಹಂತಹಂತವಾಗಿ ಎಲ್ಲರಿಗೂ ಲಸಿಕೆ ಹಾಕಲಾಗುವುದು ಎಂದರು.
ಆರಂಭದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಯಾರೂ ಕೂಡ ಲಸಿಕೆ ಹಾಕಿಸಿಕೊಳ್ಳು ಮುಂದೆ ಬರಲಿಲ್ಲಾ. ಕೊರೊನಾದಿಂದ ಸಾವು ನೋವುಗಳು ಹೆಚ್ಚಾದ ಮೇಲೆ ಜನರು ಜಾಗೃತರಾಗಿ ಲಸಿಕೆ ಹಾಕಿಸಿಕೊಳ್ಳಲು ಈಗ ಮುಂದೆ ಬರುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದ ಶಾಸಕರು 2ನೇ ಅಲೆ ಕ್ಷೀಣಿಸುತ್ತಿದೆ ಆದರೂ ಎಲ್ಲರು ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಕೊರೊನಾ ಕ್ಷೀಣಿಸಿದೆ ಎಂದು ಮೈಮರೆಯಬಾರದು ಮಾಸ್ಕ್ ಧರಿಸುವವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬಾರದು ಎಂದು ಹೇಳಿದರು.