ಭಾಲ್ಕಿಯ ವಿವಿಧೆಡೆ ಲಸಿಕಾ ಮೇಳಕ್ಕೆ ಶಾಸಕ ಈಶ್ವರ ಖಂಡ್ರೆ ಚಾಲನೆ || ಲಸಿಕೆ ಪಡೆದ ಜನರನ್ನು ಸನ್ಮಾನಿಸಿ ಹುರುದುಂಬಿಸಿದ ಶಾಸಕ ಖಂಡ್ರೆ
ಕೋವಿಡ್ ಲಸಿಕೆ ಬಗ್ಗೆ ಭಯ ಬೇಡ
ಭಾಲ್ಕಿ, ಪಟ್ಟಣ ಸೇರಿ ಗ್ರಾಮೀಣ ಭಾಗದ ವಿವಿಧೆಡೆ ಸೋಮವಾರ ಲಸಿಕಾ ಮೇಳಕ್ಕೆ ಶಾಸಕ ಶ್ರೀ ಈಶ್ವರ ಖಂಡ್ರೆ ಅವರು ಚಾಲನೆ ನೀಡಿದರು.
ಪಟ್ಟಣದ ಗಾಂಧಿ ವೃತ್ತದ ಪೊಲೀಸ್ ಚೌಕ್, ತರಕಾರಿ ಮಾರುಕಟ್ಟೆ, ಪೊಲೀಸ್ ವಸತಿ ಗೃಹ, ಭಾತಂಬ್ರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಮುಂತಾದ ಕಡೆಗಳಲ್ಲಿ ಲಸಿಕಾ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ ಎಲ್ಲ ವರ್ಗದ ಜನರನ್ನು ಲಸಿಕೆ ಪಡೆದು ಕೊಳ್ಳುವಂತೆ ಪ್ರೇರಪಿಸಿ, ಲಸಿಕೆ ಪಡೆದ ಜನರನ್ನು ಸನ್ಮಾನಿಸಿ, ಹುರುದುಂಬಿಸಿದರು.
ಕೋವಿಡ್ ಲಸಿಕೆ ಬಗ್ಗೆ ಭಯ ಬೇಡ. ಅನಗತ್ಯ ವದಂತಿಗಳಿಗೆ ಯಾರೂ ಕಿವಿಗೂಡಬಾರದು. ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಅರ್ಹರು ಕಡ್ಡಾಯವಾಗಿ ಲಸಿಕೆ ಪಡೆದು ತಾಲೂಕಿನಲ್ಲಿ ಲಸಿಕೆ ನಿಗದಿತ ಗುರಿ ಸಾಧನೆಗೆ ಸಹಕರಿಸಬೇಕು ಎಂದು ಶಾಸಕರು ತಿಳಿಸಿದರು.
ಕಲ್ಯಾಣ ಕರ್ನಾಟಕದ ಕನಸುಗಾರ ಶ್ರೀ ಈಶ್ವರ ಖಂಡ್ರೆ