ಶಿವಮೊಗ್ಗ :- ನಗರದ ರುಪ್ಸಾ ಕರ್ನಾಟಕದ ವತಿಯಿಂದ ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆನ್‍ಲೈನ್ ಫ್ಲಾಟ್ ಫಾರಂ ಒದ ಗಿಸುವ ಕುರಿತು ಹಲವು ನಿರ್ಣಯ ಗಳನ್ನು ಕೈಗೊಂಡಿದ್ದು, ಈ ಕುರಿತು ರುಪ್ಸಾ ಸಂಜೀವಿನಿ ಸ್ಟೇಟ್ ಟಾಸ್ಕ್ ಫೆÇೀರ್ಸ್ ಸಮಿತಿ ಕಾರ್ಯೋನ್ಮುಖ ವಾಗಿದ್ದು, ಇದೀಗ ಗೂಗಲ್ ಆನ್‍ಲೈನ್ ರಜಿಸ್ಟೇಷನ್ ಫಾರಂನಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಯವರು ಇದರಲ್ಲಿ ನೊಂದಾಯಿಸಿಕೊಂಡು ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ಪ್ರಾರಂಭಿಸಬಹುದು. ಆಸಕ್ತರು ಮೊ. 9845495233ರಲ್ಲಿ ವ್ಯಾಟ್ಸಫ್ ನಂಬರ್ ಕಳುಹಿಸಿದರೆ ಗೂಗಲ್ ಲಿಂಕ್ ಕಳುಹಿಸಿಕೊಡಲಾಗುವುದು