ಶಿಬಿರ
ಸರ್ಕಾರದ ಘೋಷಣೆ
ಮಾತ್ರ; ಸಮರ್ಪಕ
ಲಸಿಕೆ ಸಿಗದಿರುವುದಕ್ಕೆ
ಡಾ|| ಎಸ್ಸೆಸ್ ಬೇಸರ
ದಾವಣಗೆರೆ: ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್
ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು ನಗರದ
ಶಿವಪಾರ್ವತಿ ಕಲ್ಯಾಣಮಂಟಪದಲ್ಲಿ ನಡೆಯಿತು.
ಸ್ಥಳಕ್ಕೆ ಭೇಟಿ ನೀಡಿದ ಡಾ|| ಶಾಮನೂರು
ಶಿವಶಂಕರಪ್ಪನವರು ಕೇಂದ್ರ ಸರ್ಕಾರ ಇಂದಿನಿಂದ 18
ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಉಚಿತ ಲಸಿಕೆ
ನೀಡುವುದಾಗಿ ಹೇಳಿತ್ತು. ಆದರೆ ಇಂದು ದಾವಣಗೆರೆಯಲ್ಲಿ
ಹಲವು ಕಡೆ ಸರ್ಕಾರದಿಂದ ಲಸಿಕೆ ನಡೆಯುತ್ತಿದೆ. ಆದರೆ
ಎಲ್ಲೂ ಸಹ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿಲ್ಲ,
ವೈದ್ಯರನ್ನು ಕೇಳಿದರೆ ಇನ್ನು 18 ವರ್ಷ ಮೇಲ್ಪಟ್ಟವರಿಗೆ
ಲಸಿಕೆ ಬಂದಿಲ್ಲ ಎಂಬ ಉತ್ತರ ಬರುತ್ತಿದೆ ಎಂದರು.
ಸರ್ಕಾರದ ಘೋಷಣೆ ಕೇವಲ ಘೋಷಣೆಯಾಗೇ
ಉಳಿದಿದೆ. ಅದು ಜಾರಿಗೆ ಬರಬೇಕು. 18 ವರ್ಷ ಮೇಲ್ಪಟ್ಟ
ವಯೋಮಾನದವರಿಗೆ ಅದಷ್ಟು ಶೀಘ್ರ ಲಸಿಕೆ ನೀಡಬೇಕು
ಎಂದು ಆಗ್ರಹಿಸಿದ ಅವರು ನಾವು ಈಗಾಗಲೇ ಸುಮಾರು 7
ಸಾವಿರಕ್ಕೂ ಹೆಚ್ಚು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ
ನೀಡಿದ್ದೇವೆ ಎಂದರು.
ಸುಮಾರು 500ಕ್ಕೂ ಹೆಚ್ಚು ಯುವಕರಿಗೆ ಈ ವೇಳೆ
ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ನ
ಬಿ.ಸಿ.ಉಮಾಪತಿ, ಬಿ.ಸಿ.ಚಂದ್ರಶೇಖರ್, ಬಿ.ಸಿ.ಶಿವಕುಮಾರ್,
ಬಿ.ಯು.ಚಂದ್ರಶೇಖರ್, ಶೇಖರ್, ವಿವೇಕ್, ಜಿಲ್ಲಾ ಕಾಂಗ್ರೆಸ್
ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಆಕರ್ಷ್ ಎಂ.
ಶಾಮನೂರು ಮತ್ತಿತರರಿದ್ದರು.