ಹೊನ್ನಾಳಿ :ಜೂನ್ 21 ಹೊನ್ನಾಳಿ ಹಿರೇಕಲ್ಮಠದ ಶ್ರೀಗಳಾದ ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹೊನ್ನಾಳಿಯ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ ಸಿಪಿಐ ದೇವರಾಜ್ ಕೊರೋನಾ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿ ಕೊರೋನಾ ಸಂತ್ರಸ್ಥರಿಗೂ ಹಾಗೂ ಸಾರ್ವಜನಿಕರಿಗೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಲಾಕ್ ಡೌನ್ ಕೊರೋನಾ ಸಂದರ್ಭದಲ್ಲಿ ಪ್ರಾರಂಭದ ಹಂತದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕರೋನ ಸೋಂಕಿತರು ಆಕ್ಸಿಜನ್ ಇಲ್ಲದೆ ನರಳಾಡುತ್ತಿರುವ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೆ ಪೊಲೀಸ್ ಅಧಿಕಾರಿಗಳೊಂದಿಗೆ ತಾವು ಸಹ ಆಕ್ಸಿಜನ್ ಘಟಕಕ್ಕೆ ಹೋಗಿ ರೋಗಿಗಳಿಗೆ ಆಕ್ಸಿಜನ್ ತಂದುಕೊಡುವ ಮೂಲಕ ಸೋಂಕಿತರಿಗೆ ಆಕ್ಸಿಜನ್ ಸಮಯಕ್ಕೆ ತಂದು ಒದಗಿಸಿದ್ದಾರೆ.
ಪೋಲಿಸ್ ಅಧಿಕಾರಿಗಳು ಇಲ್ಲದೇ ಹೋದಲ್ಲಿ ಸೋಂಕಿತರು ಸಾವು ಬದುಕಿನ ಮಧ್ಯೆ ಹೋರಾಡಬೇಕಿತ್ತು ಇಂಥ ಸಂದರ್ಭದಲ್ಲಿ ಸಿಪಿಐ ದೇವರಾಜ್ ಮತ್ತು ಅವರ ತಂಡ ಅತ್ಯುತ್ತಮ ಕೆಲಸವನ್ನು ಮಾಡಿದೆ ಹಾಗೂ ಇದರ ಮಧ್ಯೆ ತಮ್ಮ ಪುತ್ರಿಯ ಪೂರ್ವಿಯ 11ನೇ ವರ್ಷದ ಹುಟ್ಟುಹಬ್ಬದಂದು ವಿಭಿನ್ನ ರೀತಿಯಲ್ಲಿ ಆಚರಿಸಿದರು ಅದೇನೆಂದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಂದ್ ಸೋಂಕಿತರ ಯೋಗಕ್ಷೇಮ ಅವರೊಟ್ಟಿಗೆ ಇದ್ದು ಸತ್ತವರಿಗೆ ಮಣ್ಣು ಮಾಡುವ ಕಾರ್ಯ ದಲ್ಲೂ ಸಹಕಾರಿಯಾಗಿದ್ದ ಮಂಜು ಪೈಲ್ವಾನ್. ಚೆನ್ನೇಶ. ಹರೀಶ್. ಮಂಜು ಜೆಸಿಪಿ. ಹನುಮಂತ. ಶ್ರೀಧರ್ ಇಂತಹ ಕೊರೋನಾ ವಾರಿಯರ್ಸ್ ಗಳಿಗೆ ತಮ್ಮ ಪುತ್ರಿಯ ಹುಟ್ಟುಹಬ್ಬದ ನೆನಪಿಗೆ ಇಂಥ ವಾರಿಯರ್ಸ್ ನ್ನು ಗುರುತಿಸಿ ಸಣ್ಣ ಹುಡುಗರೆ ಕೊಡುವ ಮೂಲಕ ಸೇವೆಯನ್ನು ಸಲ್ಲಿಸಿದರು ಹಾಗೂ ಹೊನ್ನಾಳಿಯ ಅಂದ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಆಹಾರ ಕಿಟ್ಟನ್ನು ನೀಡಿ ನನ್ನ ಪುತ್ರಿ ಪೂರ್ವಿಗೆ ಆಶೀರ್ವಾದ ಮಾಡಲು ವಿನಂತಿಸಿದರು.ಈ ಸಂದರ್ಭದಲ್ಲಿ ಪಿಎಸ್ ಐ ಬಸವರಾಜ್ ಬೀರದರ್.ಪೊಲೀಸ್ ಸಿಬ್ಬಂದಿ ವೆಂಕಟೇಶ್. ಹರೀಶ್.ಹೊಸಕೇರಿ ಸುರೇಶ್.ಮಠದ ಮೇಲ್ವಿಚಾರಕರಾದ ಎಂಪಿಎಂ ಚನ್ನಬಸಯ್ಯ ಮತ್ತು ಹಾಲಸ್ವಾಮಿ ಇನ್ನು ಮುಂತಾದವರಿದ್ದರು.