ಹೊನ್ನಾಳಿ : ತೋಟಗಾರಿಕೆ ಇಲಾಖೆಯಲ್ಲಿ ಬಹಳಷ್ಟು ದೂರು ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಗಳನ್ನು ಸಂಪೂರ್ಣವಾಗಿ ಬದಲಾಯಿಸಿ, ನೂತನ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು, ರೈತರಿಂದ ಯಾವುದೇ ದೂರು ಬರದಂತೆ ಕೆಲಸ ಮಾಡ ಬೇಕೆಂದು ಸಿಬ್ಬಂದಿಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಖಡಕ್ ಎಚ್ಚರಿಕೆ ನೀಡಿದರು.
ಮಂಗಳವಾರ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯಲ್ಲಿ ರೈತರಿಂದ ಹಣ ಪಡೆಯಲಾಗುತ್ತಿದೇ ಎಂಬ ದೂರುಗಳು ಕೇಳಿ ಬರುತ್ತಿದ್ದು ಈ ರೀತಿ ದೂರುಗಳು ಬಂದರೆ ಅಂತಹ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರು ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಕೆಲಸಗಳನ್ನು ಮಾಡಿಸಿಕೊಂಡು ಹೋಗಬೇಕು, ಅದನ್ನು ಬಿಟ್ಟು ಮದ್ಯವರ್ತಿಗಳ ಮುಖಾಂತರ ಕೆಲಸಗಳನ್ನು ಮಾಡಿಕೊಟ್ಟ ಬಗ್ಗೆ ದೂರು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತರಿಗಾಗಿ ಸರ್ಕಾರ ನೀಡುವ ಯಾವುದೇ ಯೋಜನೆಗಳಿರಲಿ ಅಂತಹ ಯೋಜನೆಗಳು ರೈತರಿಗೆ ನೇರವಾಗಿ ಮುಟ್ಟುಂತಾಗಬೇಕು,ಅದಕ್ಕಾಗಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕೊರೊನಾದಿಂದ ಸಾಕಷ್ಟು ರೈತರು ಬೆಳೆ ಹಾಳಾಗಿದ್ದು ಅಂತಹ ರೈತರನ್ನು ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ರೇಣುಕಾಚಾರ್ಯ ಆದಷ್ಟು ಬೇಗ ಅಂತಹ ರೈತರಿಗೆ ಹಣ ಬಿಡುಗಡೆ ಮಾಡಿಸುವ ಬರವಸೆ ನೀಡಿದರು.
ಕೃಷಿ ಇಲಾಖೆಗೆ ಬೇಟಿ ನೀಡಿದ ರೇಣುಕಾಚಾರ್ಯ ಅಧಿಕಾರಿಗಳಿಂದ ಬಿತ್ತನೆ ಬೀಜ, ಗೊಬ್ಬರದ ದಾಸ್ತನುಗಳ ಬಗ್ಗೆ ಮಾಹಿತಿ ಪಡೆದರು. ಈ ಬಾರೀಯ ಅಂಗಾಮಿನಲ್ಲಿ ಎಷ್ಟು ಬಿತ್ತನೆಯಾಗಿದೇ, ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ,ಗೊಬ್ಬರ ದೊರೆತಿದೆಯಾ ಎಂದು ಮಾಹಿತಿ ಕಲೆ ಹಾಕಿದರು. ಇನ್ನು ಗೊಬ್ಬರವನ್ನು ಜಾಸ್ತಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದ್ದು ಯಾರೇ ಗೊಬ್ಬರ ಜಾಸ್ತಿ ಬೆಲೆಗೆ ಮಾರಾಟ ಮಾಡಿದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ನಾನು ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರನಲ್ಲಿ ಹೆಚ್ಚು ಕಾರ್ಯ ಪ್ರವೃತ್ತನಾಗಿದ್ದೆ. ಈಗ ಕೊರೊನಾ ಕ್ಷೀಣಿಸಿದ ಕಾರಣ ಅಭಿವೃದ್ಧಿ ಕಡೆಗೆ ಒತ್ತು ನೀಡಿ ಎಲ್ಲಾ ಕಚೇರಿಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು
ಆಸ್ಪತ್ರೆಗೆ ಭೇಟಿ : ಆಸ್ಪತ್ರೆ ಆವರಣದಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು ಕೂಡಲೆ ಹಂದಿಗಳನ್ನು ಆಸ್ಪತ್ರೆ ಆವರಣದಲ್ಲಿನ ಹಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಹಂದಿ ಮಾಲೀಕರಿಗೆ ತಿಳಿಸಿ ಎಂದು ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್ ಅವರಿಗೆ ಸೂಚಿಸಿದರು.