ತೆರೆಯಲು ಅನುಮತಿ
ಜಿಲ್ಲೆಯಲ್ಲಿ ಜೂನ್ 21 ರಿಂದ ಲಾಕ್‍ಡೌನ್ ಮುಂದುವರಿದಿದ್ದು ಕೆಲ
ಸೇವೆಗಳಿಗಾಗಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿ
ತೆರೆಯಲು ಅನುಮತಿ ನೀಡಲಾಗಿತ್ತು. ಇವುಗಳ ಜೊತೆಗೆ ಇದೀಗ
ಪುಸ್ತಕ ಮತ್ತು ಸ್ಟೇಷನರಿ ಅಂಗಡಿಗಳು ಹಾಗೂ ಮೊಬೈಲ್
ಅಂಗಡಿಗಳು ತೆರೆಯಲು ಕೂಡ ಅವಕಾಶ ನೀಡಲಾಗಿದೆ ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಮುಂದುವರೆದು ಕೈಗಾರಿಕಾ ಚಟುವಟಿಕೆಗಳಿಗೆ ವಿಧಿಸಿರುವ
ನಿರ್ಬಂಧತೆಯು ರಾತ್ರಿ ಕಫ್ರ್ಯೂ ಮತ್ತು ವಾರಂತ್ಯದ ಕಫ್ರ್ಯೂ
ಅವಧಿಯಲ್ಲಿಯೂ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.