ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ರೂ. 585 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದ್ದಾರೆ.
ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಮಂಗಳವಾರ ಸೋಂಕಿತರಿಗೆ ಮದ್ಯಾಹ್ನದ ಊಟ ಬಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 94 ಕರೆಗಳನ್ನು ತುಂಬಿಸಲು ರೂ.460 ಕೋಟಿ ಹಾಗೂ ಸಾಸ್ವೇಹಳ್ಳಿ ಏತ ನೀರಾವರಿಗೆ ಹೆಚ್ಚುವರಿಯಾಗಿ ರೂ 161 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದರು.
ಇದರ ಜೊತೆಗೆ ಬೆನಕನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 24 ಕರೆಗಳನ್ನು ತುಂಬಿಸುವ ಯೋಜನೆಗೆ ರೂ 51 ಕೋಟಿ ಸೇರಿದಂತೆ, ಫಲವನಹಳ್ಳಿ-ಹೊಸಕೊಪ್ಪ ಸೇರಿದಂತೆ 61 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ರೂ 68 ಕೋಟಿ, ಹೊಸಹಳ್ಳಿ ಸೇರಿದಂತೆ 21 ಹಳ್ಳಿಗಳಿಗೆ ಶುದ್ದಕುಡಿಯುವ ನೀರು ನೀಡುವ ದೃಷ್ಟಿಯಿಂದ 34.9 ಕೋಟಿ ಹಾಗೂ ಹೊಸದೇವರಹೊನ್ನಾಳಿ ಸೇರಿದಂತೆ 16 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ನೀಡಲು ರೂ 17.6 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಹೊನ್ನಾಳಿ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಗೆ ರೂ 60 ಕೋಟಿ ಹಾಗೂ ಹೊನ್ನಾಳಿ ನಗರಕ್ಕೆ ತುಂಗಭದ್ರಾ ನದಿಯಿಂದ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ರೂ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು. ನ್ಯಾಮತಿ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು 25 ಕೋಟಿ, ಹಾಗೂ ಒಳಚರಂಡಿ ವ್ಯವಸ್ಥೆಗೆ 35 ಕೋಟಿ ಕೇಳಿದ್ದು ಸದ್ಯದರಲ್ಲೆ ಬಿಡುಗಡೆಯಾಗಲಿದೆ ಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳೆಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವಿಶೇಷ ಪ್ರೀತಿ ಈ ಹಿನ್ನೆಲೆಯಲ್ಲಿ ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅವಳಿ ತಾಲೂಕಿನ ಅಭಿವೃದ್ದಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದು ಅವರಿಗೆ ನಾನು ಸದಾ ಚಿರಋಣಿ ಎಂದರು.
ಶಾಲೆಗಳ ಅಭಿವೃದ್ದಿ, ಕಾಲೇಜು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಅವಳಿ ತಾಲೂಕಿಗೆ ಬಿಡುಗಡೆ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಪರವಾಗಿ ಮಾತನಾಡುವುದು ತಪ್ಪಾ..?
ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪನವರು ನಮ್ಮ ಮುಖ್ಯಮಂತ್ರಿಗಳು ಅವರ ಪರವಾಗಿ ಮಾತನಾಡುವ ಬಡಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಪರವಾಗಿ ಮಾತನಾಡ ಬೇಕಾ ಎಂದು ಪ್ರಶ್ನೇ ಮಾಡಿದ ಶಾಸಕರು, ಯಡಿಯೂರಪ್ಪನವರು ನಮ್ಮ ನಾಯಕರು ಹಾಗಾಗಿ ನಾವು ಅವರ ಪರವಾಗಿ ಮಾತನಾಡಿದ್ದೇನೆ ಎಂದರು. ನಾನು ಅವರ ಪರವಾಗಿ ಮಾತನಾಡಿದ್ದಕ್ಕೆ ಅವರು ಅನುದಾನ ಬಿಡೆಗಡೆ ಮಾಡಿಲ್ಲಾ, ಅವಳಿ ತಾಲೂಕಿನ ಕರೆಗಳನ್ನು ತುಂಬಿಸುವ ಯೋಜನೆಗೆ ಮನವಿ ಸಲ್ಲಿಸಿದ್ದು ನಮ್ಮ ಮನವಿಗೆ ಸ್ಪಂಧಿಸಿ ಅನುದಾನ ಬಿಡೆಗಡೆ ಮಾಡಿದ್ದಾರೆ ಎಂದರು.