ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು
ಬಂಧಿಸಿರುವ ಪೊಲೀಸರು ಸುಮಾರು ರೂ. 2 ಸಾವಿರ ಮೌಲ್ಯದ 198 ಗ್ರಾಂ ಒಣ
ಗಾಂಜಾ ಹಾಗೂ ರೂ. 60 ಸಾವಿರ ಮೌಲ್ಯದ ವಾಹನ ವಶಪಡಿಸಿಕೊಂಡಿದ್ದಾರೆ.
ಹರಿಹರ ನಗರದ ಅಬ್ಬಾಸ್ ಖಾನ್(38 ವರ್ಷ), ಹಾಗೂ ಮಂಜುನಾಥ್ (35
ವರ್ಷ) ಬಂಧಿತ ಆರೋಪಿಗಳು.
  ದಾವಣಗೆರೆ ನಗರದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಬರುವ
ಕರೂರು ರಸ್ತೆ ಪಕ್ಕದ ಟೀ ಹೋಟೆಲ್ ಮುಂಭಾಗದಲ್ಲಿ ಅವೆಟರ್
ವಾಹನದಲ್ಲಿ (ನೋಂದಣಿ ಸಂಖ್ಯೆ: ಎಂಹೆಚ್-07/ಎಎಲ್-4501) ಅಕ್ರಮವಾಗಿ ಒಂದು
ತಿಳಿ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್‍ನಲ್ಲಿ 198 ಗ್ರಾಂ ಒಣ ಗಾಂಜಾವನ್ನು
ಹೊಂದಿರುವುದನ್ನು ಪತ್ತೆ ಹಚ್ಚಿ, ಇಬ್ಬರು ಆರೋಪಿತರನ್ನು ದಸ್ತಗಿರಿ
ಮಾಡಿ, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಆರೋಪಿತರನ್ನು ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ವಿಭಾಗದ ಅಬಕಾರಿ ಜಂಟಿ
ಆಯುಕ್ತರ ನಿರ್ದೇಶನದಂತೆ ಜೂ.20 ರಂದು ದಾವಣಗೆರೆ ಅಬಕಾರಿ ಉಪ
ಆಯುಕ್ತ ಬಿ.ಶಿವಪ್ರಸಾದ್ ಹಾಗೂ ಅಬಕಾರಿ ಉಪ ಅಧೀಕ್ಷಕ ಕೆ.ಎಲ್.ನಾಗರಾಜ್
ಇವರ ಮಾರ್ಗದರ್ಶದಲ್ಲಿ ದಾವಣಗೆರೆ ಉಪ ವಿಭಾಗದ ಅಬಕಾರಿ ನಿರೀಕ್ಷಕಿ ವಿದ್ಯಾ
ಜಿ.ಬಿ ಅವರ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಕಿರಣ್ ಅಪ್ಪಸಾಬ್ ಜುಲ್ಪಿ,
ದಾವಣಗೆರೆ ಉಪ ವಿಭಾಗದ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಅಬಕಾರಿ
ಉಪ ಆಯುಕ್ತ ಬಿ. ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ.ಪಿ. ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ದಾವಣಗೆರೆ, ಜೂ.23 (ಕರ್ನಾಟಕ ವಾರ್ತೆ) :
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ
ಎಂ.ಪಿ.ರೇಣುಕಾಚಾರ್ಯ ಅವರು ಜೂ.24 ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
 ಎಂ.ಪಿ. ರೇಣುಕಾಚಾರ್ಯ ಅವರು ಜೂ. 24 ರಂದು ಬೆಳಿಗ್ಗೆ 10.30 ರಿಂದ
ಮಧ್ಯಾಹ್ನ 1-30 ಗಂಟೆಯವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ
ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಗಳು ಮತ್ತು
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19
ಸೋಂಕಿತರ ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮಗಳನ್ನು
ವೀಕ್ಷಿಸುವರು ಹಾಗೂ ಕೋವಿಡ್-19 ಹರಡುವಿಕೆ ತಡೆಗಟ್ಟುವ ಕುರಿತು

ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ
ಮತ್ತು ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವರು.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು
ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.


Leave a Reply

Your email address will not be published. Required fields are marked *