ದಾವಣಗೆರೆ ಜಿಲ್ಲೆಯಲ್ಲಿ ಜೂ. 24 ರಿಂದ 18 ವರ್ಷದಿಂದ ಎಲ್ಲ
ವಯೋಮಿತಿಯವರಿಗೂ ಮೊದಲನೆ ಹಾಗೂ ಎರಡನೆ ಡೋಸ್ ಕೋವಿಡ್
ನಿರೋಧಕ ಲಸಿಕೆಯನ್ನು ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ
ನೀಡಲಾಗುವುದು.
ಲಸಿಕೆ ಪಡೆಯಲು ಬರುವವರು ಆನ್‍ಲೈನ್‍ನಲ್ಲಿ ನೊಂದಣಿ ಮಾಡಿ
ಮಾಡಿಕೊಂಡು ಲಸಿಕಾ ಕೇಂದ್ರಕ್ಕೆ ಬರಬೇಕು, ನೊಂದಣಿ ಮಾಡಿಕೊಳ್ಳದೆ
ಬರುವವರಿಗೂ ಕೂಡ ಲಸಿಕಾ ಕೇಂದ್ರದಲ್ಲಿಯೇ ನೊಂದಣಿ ಮಾಡಿ ಲಸಿಕೆ
ನೀಡಲಾಗುವುದು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದ್ದಾರೆ.