ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ
ಅವರು ಜೂ. 28 ಮತ್ತು 29 ರಂದು ಎರಡು ದಿನಗಳ ದಾವಣಗೆರೆ ಜಿಲ್ಲಾ
ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರು ಜೂ. 28 ರಂದು ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 10
ಗಂಟೆಗೆ ಚನ್ನಗಿರಿಗೆ ಆಗಮಿಸುವರು. ಬಳಿಕ ಚನ್ನಗಿರಿಯ ತಾಲ್ಲೂಕು
ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ನೂತನ ಆಕ್ಸಿಜನ್ ಪ್ಲಾಂಟ್
ಉದ್ಘಾಟಿಸುವರು. ಬೆಳಿಗ್ಗೆ 11 ಗಂಟೆಗೆ ಚನ್ನಗಿರಿ ತಾಲ್ಲೂಕಿನಲ್ಲಿ ಕೋವಿಡ್19
ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ
ಕ್ರಮಗಳ ಕುರಿತು ಇಲ್ಲಿನ ಮೌದ್ಗಿಲ್ ಆಂಜನೇಯಸ್ವಾಮಿ ಕಲ್ಯಾಣ
ಮಂದಿರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ
ನಡೆಸುವರು. ಮಧ್ಯಾಹ್ನ 12-30 ಗಂಟೆಗೆ ತೆರಳಿ ಕೋವಿಡ್‍ನಿಂದ
ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವ ಕಾರ್ಯದಲ್ಲಿ
ಭಾಗವಹಿಸುವರು. ಮಧ್ಯಾಹ್ನ 03 ಗಂಟೆಗೆ ಹೊನ್ನಾಳಿಗೆ ತೆರಳಿ ಇಲ್ಲಿನ
ತಾಲ್ಲೂಕು ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಆಕ್ಸಿಜನ್ ಪ್ಲಾಂಟ್
ಉದ್ಘಾಟಿಸುವರು. ಮಧ್ಯಾಹ್ನ 4-30 ಗಂಟೆಗೆ ಹರಿಹರಕ್ಕೆ ಆಗಮಿಸಿ
ತಾಲ್ಲೂಕು ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ
ನೆರವೇರಿಸುವರು. ಸಂಜೆ 6 ಗಂಟೆಗೆ ದಾವಣಗೆರೆಗೆ ಆಗಮಿಸಿ ವಾಸ್ತವ್ಯ
ಮಾಡುವರು.
ಜೂ. 29 ರಂದು ಬೆ. 10-30 ಗಂಟೆಗೆ ದಾವಣಗೆರೆಯ ಚಿಗಟೇರಿ ಜಿಲ್ಲಾ
ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಟ್ರಾಮಾ ಕೇರ್
(ತುರ್ತು ಚಿಕಿತ್ಸಾ ಘಟಕ) ಸೆಂಟರ್‍ನ ಭೂಮಿ ಪೂಜೆ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ಕೋವಿಡ್19
ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ
ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ
ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವರು. ಸಚಿವರು
ಅದೇ ದಿನ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು
ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.