ಹೂನ್ನಾಳಿ:- ಪಟ್ಟಣದ ಉರ್ದು ಪ್ರೌಢಶಾಲೆಯಲ್ಲಿ ಇಂದು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಹೆಚ್ ಮಂಜುನಾಥ ಅಕ್ಷರ ದಾಸೋಹದ ಬಾಬ್ತು ಪ್ರತಿ ವಿದ್ಯಾರ್ಥಿಗೆ 2ಲೀ ಗೋಲ್ಡ್ ವಿನ್ನರ್ ಅಡುಗೆ ಎಣ್ಣೆ, ಬೇಳೆ, ಅಕ್ಕಿ ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್-19 ರ ಎರಡನೆ ಅಲೆಯ ಕಾರಣದಿಂದ ಬದಲಾಗಿರುವ ಎಸ್ಎಸ್ ಎಲ್ ಸಿ ಪರೀಕ್ಷಾ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರೌಢಶಾಲಾ ಶಿಕ್ಷಕರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಲಾಕ್ಡೌನ್ ಕಾರಣದಿಂದ ವಿದ್ಯಾರ್ಥಿಗಳು ನೇರವಾಗಿ ಶಾಲಾ ಪಾಠ ಪ್ರವಚನಗಳಲ್ಲಿ ಭಾಗವಹಿಸಿಲ್ಲ. ಅನ್ ಲೈನ್ ಮೂಲಕ ಗರಿಷ್ಠ ಪ್ರಮಾಣದಲ್ಲಿ ಪಾಠಗಳು ಮಾಡಲಾಗಿದೆ. ಒಎಂಆರ್ ಶೀಟ್ ತುಂಬುವುದು ಪ್ರಶ್ನೆ ಪತ್ರಿಕೆ, ಉತ್ತರ ಬರೆಯುವ ಬಗ್ಗೆ ತಿಳುವಳಿಕೆ ನೀಡಬೇಕು, ಮಕ್ಕಳು ಅತಂಕ ಇಲ್ಲದೆ ಪರೀಕ್ಷೆ ಬರೆಯುವಂತೆ ಸಿದ್ಧಗೊಳಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಪುಷ್ಪಲತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ ಆರ್ ರುದ್ರಪ್ಪ, ಮುಖ್ಯೋಪಾಧ್ಯಾಯರಾದ ಶಕೀಲ್ ಅಹ್ಮದ್, ಶಿಕ್ಷಕರಾದ ಸಾಯಿರಾ ಬಾನು, ಶಂಶಾದ್ ಬೇಗಂ, ಆಯಾತ್ ಉಲ್ಲಾ, ಸುತಾರ್, ಕುಮಾರ್ ದೇವಾಂಗದ, ಸುಭಾನ್ ಸಾಬ್ ಉಪಸ್ಥಿತರಿದ್ದರು