ಶಿಕಾರಿಪುರ
ಕೊ ರೋ ನಾ ಮಾಹಾಮಾರಿ ಬಂದು ಜನರ ಜೀವ ಜೀವನವನ್ನು ಹಾಳುಮಾಡಿತ್ತಿರುವಾಗ ಸರ್ಕಾರ ಮತ್ತು ಬೇರೆ ಬೇರೆ ಸಂಘಟನೆಗಳು ಹಲವಾರು ವರ್ಗದವರಿಗೆ ಸಹಾಯ ಮಾಡಿದೆ .ಆದರೆ ನಾಟಕಗಳ ಮೂಲಕ .ಗಾಯನದ ಮೂಲಕ ಅರಿವಿನ ಸಂದೇಶವನ್ನು ನೀಡುವ ಮನರಂಜನೆ ನೀಡುವ .ಸಂಗೀತದಿಂದ ಉಲ್ಲಾಸ ನೀಡುವ ನಮ್ಮ ಕಲಾವಿದರನ್ನು ಗುರುತಿಸಿ ಕೊನೆಯ ಪಕ್ಷ ಆಹಾರ ಸಾಮಗ್ರಿಗಳ ಕಿಟ್ ಕೂಡ ಯಾರು ನೀಡಿಲ್ಲ .ಕಲಾವಿದರು ಸಮಾಜದ ಮನರಂಜನಾ ಆರೋಗ್ಯದಾಯಕ ಶಕ್ತಿ ಅದು ಹಾಗೂ ಅವರು ನಶಿಸದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮ ಕೆಲಸ .ಯಾರು ಮರೆತರೂ ಎಲ್ಲೂ ದೂರದಲ್ಲಿರುವ ಅಜೀಂ ಪ್ರೇಮ್ ಜಿ ಪೌಂಡೇಶನ್ ನಮ್ಮ ಕಲಾವಿದರನ್ನು ಗುರುತಿಸಿ ಸಹಾಯ ವಂಚಿತ ರಾದವರಿಗೆ ಆಹಾರ ಧಾನ್ಯಗಳ ಕಿಟ್. ನೀಡುತ್ತಿರುವುದು ಶ್ಲಾಘನೀಯ ಎಂದು ತಾಲೂಕ್ ಜಾನಪದ ಪರಿಷತ್ ಅಧ್ಯಕ್ಷ ರೂ ಹಾಗೂ ಕಲಾ ಆರಾಧಕರು ಮತ್ತು ಶಿಕ್ಷಕರು ಅದ ಪಾಪಯ್ಯ ತಮ್ಮ ಮನದಾಳದ ಅಭಿಪ್ರಾಯದ ಮಾತುಗಳನ್ನು ಆಡಿದರು.
ಅವರು ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ .ಅಜೀಂ ಪ್ರೇಂಜಿ ಫೌಂಡೇಶನ್ .ತಾ.ಜಾ.ಪರಿಷತ್.ತಾ.ಕ. . ಸಾಹಿತ್ಯ ಸಾ .ವೇದಿಕೆ ಮತ್ತು ಬಾಪೂಜಿ ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ಕೊಡುವ ಕಾರ್ಯಕ್ರಮದಲ್ಲಿ ಕಿಟ್ ನೀಡುವುದರ ಮೂಲಕ ಕಾರ್ಯಕ್ರ ಮ ಚಾಲನೆ ನೀಡಿ ಮಾತನಾಡಿದರು.
ಕಲಾವಿದರಿಗೆ ಕಾರ್ಯಕ್ರಮಗಳು ಸಿಗದೆ ಹತಾಶರಾಗಿ ಜೀವನ ಸಾಗಿಸುವುದೇ ಕಷ್ಟ್ಟಕರ್ ಅವರನ್ನು ಉಳಿಸಿ ಬೆಳೆಸಲು ಎಲ್ಲರೂ ಇಂಥ ಸಂದರ್ಭದಲ್ಲಿ ಕೈ ಜೋಡಿಸಿ ಸಹಕರಿಸಿ ಕಲಾವಿದರನ್ನು ಉಳಿಕೊಳ್ಳಬೇಕು.ಕಲಾವಿದರು ಅರಿವಿನ ಸಂದೇಶ ನೀಡುವ ರೂವಾರಿಗಳು
ಎಂದು ಬಣ್ಣಿಸಿದರು.ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಈ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ತಾಲೂಕ್ ಜಾನಪದ ಪರಿಷತ್ ಕಾರ್ಯದರ್ಶಿ ಸತ್ಯಾ ನಾರಾಯಣ M.H. ಮಾತನಾಡಿ ನಮ್ಮ ತಾಲೂಕಿನ ಕಲಾವಿದರು ರಾಜ್ಯ .ರಾಷ್ಟ್ರ .ಮಟ್ಟ ಅಂತರ್ ರಾಜ್ಯ ಮಟ್ಟದಲ್ಲಿ ಬಾಗವಹಿಸಿ ದ ಕಲಾವಿದರ ಸಮೂಹವೇ ಶಿಕಾರಿಪುರ ತಲೂಕಿನ ಲ್ಲಿದೆ.ಈ ಪಾಲಾ ನು ಭವಿಗಳು ಇನ್ನೂ ಟೆಂಟ್ ಗಳಲ್ಲಿ ವಾಸಮಾಡುತ್ತಿದಾರೆ. ಜಾನಪದ ಹಾಡುತ್ತಾ ಜೀವನ ಪಯಣ ನಡೆಸುವ ಶಿಕಾರಿಪುರದ ಅರ್ಜುನಪ್ಪ.ಬೈರಪ್ಪ.ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಡೊಳ್ಳಿನ ಕಲಾವಿದ ಕೊಟ್ಟದ ಹುಚ್ಚಪ್ಪ.ಅಂಬಾರಾಗೊಪ್ಪದ ವೀರಗಾಸೆ ಕಲಾವಿದರು.ಕಪ್ಪನಹಳ್ಳಿ ತಮಟೆ ಕಲಾವಿದರು.ಗಾಮದ ನಾಟಕ ರಂಗ ಭೂಮಿ ಕಲಾವಿದರು ಬಾಗಿಯಾಗಿದ್ದು ಅವರಿಗೆ ಕಿಟ್ ನೀಡಲಾಗುವುದು ಬೇರೆ ಬಡ ಕಲಾವಿದ ರು ಕಂಡು ಬಂದರೆ ದಾನಿ ಗಳು ಉದಾರವಾಗಿ ಕಿಟ್ ನೀಡಿದಲ್ಲಿ ಕಲಾವಿದರ ಮನೆ ಗೆ ತಲುಪಿಸುವ ಕೆಲಸ ಈ ಸಂಘಟನೆ ಮಾಡುವುದಾಗಿ ತಿಳಿಸಿದರು.ಈ ಸಂದರ್ಬದಲ್ಲಿ ದೇಣಿಗೆಯ ಕೊಂಡಿಯಾಗಿ ಕೆಲಸ ಮಾಡಿದ ಕಲಾವಿದ ಮಂಜು ರವರನ್ನು ಗೌರವಿಸಲಾಯಿತು . ತಾ ಕ .ಸಾಹಿತ್ಯ .ಸಾಂ ವೆದೇಕೆಯ ಅಧ್ಯಕ್ಷರಾದ ಹುಚ್ರಾಯಪ್ಪ ಮಾತನಾಡಿ
ಕಲಾವಿದರ ಬದುಕು ಬೀದಿಗೆ ಬಿದ್ದ ಪರಿಸ್ತಿಯನ್ನು ಅರಿತು ದೂರದ ಊರಿನ ಅಜೀಂ ಪ್ರೇಮ್ ಪೌಂಡೇಶನ್ ಅದಕ್ಕೆ ಪೂರಕವಾಗಿ ಕೆಲಸಮಾಡಿ ಮಂಜುರವರಿ ಗೆ.ಅಭಿನಂದನೆ ತಿಳಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಲಾವಿದರನ್ನು ಗುರುತಿಸಿ ಸಹಾಯ ಹಸ್ತ ನೀಡಿ ಅವರ ಅವರಲ್ಲಿ ಭಗವಂತ ನನ್ನು ಕಾಣುವ ಕೆಲಸವಾಗಲಿ ಎಂದರು.: ಈಸಂದರ್ಭದಲ್ಲಿ ಮೂವತ್ತು ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು ಜಿಲ್ಲೆಯಲ್ಲಿ ಎರಡು ನೂರಕ್ಕೂ ಅಧಿಕ ಕಲಾವಿದರನ್ನು ಗುರುತಿಸಿ ಸಹಾಯ ಮಾಡಿದ ಕೀರ್ತಿ ಈ ಸಂಸ್ಥೆಯಾದ್ದು.ಈ ಕಾರ್ಯಕ್ರಮದಲ್ಲಿ ಮಾದ್ಯಮ ಮಿತ್ರ ಜಿ ಕೆ ಹೆಬ್ಬಾರ್.ಗಾಯಕ ಶ್ರೀಧರ್.ಕಲಾವಿದೆ ಜೊ ತಿ.ಗಾಮಾದ ಕಲ್ಪನಾ ಇತರರು ಉಪಸ್ಥಿತರಿದ್ದರು ಕಲಾವಿದ ಬೈರಪ್ಪನವರ ಗಿ ಗಿ ಪದದಿಂದ ಕಾರ್ಯಕ್ರಮವನ್ನು ರಂಗು ಕಾಣಿಸಿದರು

Leave a Reply

Your email address will not be published. Required fields are marked *