ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ
ಆಕ್ಸಿಜನ್ ಪ್ಲಾಂಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಗುರುವಾರ
ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೂತನ ಆಕ್ಸಿಜನ್ ಘಟಕದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ
ಭೈರತಿ ಬಸವರಾಜ್ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ
ಮತ್ತು ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು
ಮಾಹಿತಿ ನೀಡಿದರು.
ಕೆಎಸ್‍ಡಿಎಲ್ ನಿಗಮದ ರೂ.1 ಕೋಟಿಗಳ ಅನುದಾನದಲ್ಲಿ ಆಕ್ಸಿಜನ್
ಪ್ಲಾಂಟ್, ಜನರೇಟರ್ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದ್ದು, ಆಕ್ಸಿಜನ್
ಪ್ಲಾಂಟ್ ಇಂದು ಸಂಜೆ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸರ್ಕಾರಿ ಆಸ್ಪತ್ರೆಗೆ 63 ಕೆವಿ ವಿದ್ಯುತ್ ವ್ಯವಸ್ಥೆಯಿದ್ದು,
ಆಕ್ಸಿಜನ್ ಪ್ಲಾಂಟ್ ಗೆ ಅವಶ್ಯವಿರುವ 150 ಕಿಲೋ ವ್ಯಾಟ್ ಆಂಪಿಯರ್ ವಿದ್ಯುತ್
ಸಂಪರ್ಕ ಕಲ್ಪಿಸಲು ಕೆಇಬಿ ಎಂಜಿನಿಯರ್‍ಗೆ ಸೂಚಿಸಲಾಗಿದೆ. ಆಕ್ಸಿಜನ್ ಪ್ಲಾಂಟ್

ಒಂದು ನಿಮಿಷಕ್ಕೆ 500 ಕೆ.ಎಲ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮಥ್ರ್ಯ
ಹೊಂದಿದ್ದು, ಇದರಿಂದ ಪದೇ ಪದೇ ಉಂಟಾಗುತ್ತಿದ್ದ ಆಕ್ಸಿಜನ್ ಸಮಸ್ಯೆ
ನಿವಾರಣೆಯಾಗಲಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ
ಇಳಿಮುಖವಾಗುತ್ತಿದ್ದು, ಲಾಕ್‍ಡೌನ್ ನಲ್ಲಿ ಕೆಲವು ನಿರ್ಬಂಧಗಳನ್ನು
ಸಡಿಲಗೊಳಿಸಿದ್ದರೂ ಸಾರ್ವಜನಿಕರು ಸರ್ಕಾರದ ಕೋವಿಡ್
ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಾಲ್ಲೂಕಿನಲ್ಲಿ ಕೋವಿಡ್
ನಿರೋಧಕ ಲಸಿಕೆ ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮ
ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.


ಟ್ರೈಯಿನ್ ಕಂಪೆನಿಯ ಆಕ್ಸಿಜನ್ ಪ್ಲಾಂಟ್ ಟೆಕ್ನಿಕಲ್ ಎಂಜಿನಿಯರ್
ನಾಗೇಂದ್ರ ಪ್ರಸಾದ್ ಮಾತನಾಡಿ ರೂ.1 ಕೋಟಿ ವೆಚ್ಚದಲ್ಲಿ
ನಿರ್ಮಾಣವಾಗುತ್ತಿರುವ ಪ್ಲಾಂಟ್ 3015 ವಿಸ್ತೀರ್ಣದ ಪ್ರದೇಶದಲ್ಲಿ 177*9
ವಿಸ್ತೀರ್ಣದಲ್ಲಿ ಆಕ್ಸಿಜನ್ ಪ್ಲಾಂಟ್ ಕೂರಿಸಲಾಗುತ್ತಿದ್ದು ಯಾವುದೇ ವಿದ್ಯುತ್
ಅವಘಡ ಸಂಭವಿಸದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ
ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಕ್ಸಿಜನ್ ಪ್ಲಾಂಟ್ ನಿರ್ವಹಣೆಗಾಗಿ
2 ವೈದ್ಯರುಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಿ ದಿನದ 24
ಗಂಟೆಯೂ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಗುವುದು,
ಯಾವುದೇ ಸಮಸ್ಯೆಯುಂಟಾದರೆ ನಮ್ಮ ಕಂಪನೆಯ
ಮುಖಾಂತರ ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಲಾಗುವುದು
ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ತಹಶೀಲ್ದಾರ್
ಬಸನಗೌಡ ಕೋಟೂರ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರಪ್ಪ,
ಭೂಸೇನಾ ನಿಗಮದ ಕೆಂಚಪ್ಪ, ದಂತ ವೈದ್ಯೆ ಡಾ.ಲೀಲಾವತಿ, ಸಿಬ್ಬಂದಿ
ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *