ದಾವಣಗೆರೆ: ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು 14ನೇ ವಾರ್ಡ್‍ನ ನಾಗರೀಕರಿಗಾಗಿ ನಗರದ ಬಂಬೂಬಜಾರ್‍ನ ಶ್ರೀಕಲ್ಲೇಶ್ವರ ರೈಸ್ ಮಿಲ್‍ನಲ್ಲಿ ಹಾಗೂ 7-8ನೇ ವಾರ್ಡ್‍ನ ನಾಗರೀಕರಿಗಾಗಿ ಜಾಲಿನಗರದ ದಿ|| ಶಾಮನೂರು ಬಸವರಾಜಪ್ಪ ಉದ್ಯಾನವನದಲ್ಲಿ ನಡೆಯಿತು.
ಲಸಿಕಾ ಕೇಂದ್ರಗಳಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಭೇಟಿ ನೀಡಿ ಲಸಿಕೆ ಪಡೆದ ನಾಗರೀಕರ ಆರೋಗ್ಯ ವಿಚಾರಿಸಿ ಸರ್ಕಾರ ಲಸಿಕೆ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ತಾರತಮ್ಯ ಮಾಡದೇ ಎಲ್ಲರ ಜೀವ ಒಂದೇ ಎಂಬ ಆಲೋಚನೆಯಿಂದ ಜೀವ ಉಳಿಸುವ ಕೆಲಸ ಮಾಡಲಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಕೆ.ಚಮನ್ ಸಾಬ್, ವಿನಾಯಕ ಪೈಲ್ವಾನ್, ಮಾಜಿ ಸದಸ್ಯ ಎಸ್.ಎನ್.ಚಂದ್ರಪ್ಪ, ಮುಖಂಡರುಗಳಾದ ಉಮೇಶ್ ಸಾಳಂಕಿ, ಸೊಸೈಟಿ ಮಂಜುನಾಥ್, ರಹಮತ್, ಮನೋಹರ್ ಪೈಲ್ವಾನ್, ಎಸ್.ಎನ್.ತಿಪ್ಪೇಸ್ವಾಮಿ, ಅನಿಲ್ ಕುಮಾರ್, ಸಲೀಂ, ಅಲೆಕ್ಸಾಂಡರ್(ಜಾನ್) ಮತ್ತಿತರರು ಉಪಸ್ಥಿತರಿದ್ದರು.