ಕರೋನ 3ನೇ ಅಲೆ ಈಗಾಗಲೇ ಸಾವಿರಾರು
ಮಕ್ಕಳಿಗೆ ಬಂದಿದೆ. ಮಹಾನಗರಗಳಲ್ಲಿ
ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲು
ಸಜ್ಜುಗೊಳಿಸಲಾಗುತ್ತಿದೆ. ಮಕ್ಕಳ
ತಜ್ಞರು ಹಳ್ಳಿಗಳ ಕಡೆ ನೆಡೆ ಎಂಬ
ಕಾರ್ಯಕ್ರಮ
ಹಮ್ಮಿಕೊಳ್ಳತೊಡಗಿದ್ದಾರೆ. ಹಾಗಾಗಿ ಜನರು
ಈಗ ಮತ್ತೊಮ್ಮೆ ಹೆಚ್ಚೆತ್ತುಕೊಂಡು
ಮಕ್ಕಳನ್ನ ಕರೋನದಿಂದ
ರಕ್ಷಿಸಿಕೊಳ್ಳಬೇಕಿದೆ. ಮಕ್ಕಳಿಗೆ
ಕರೋನ ಬಂದಾಗ ಅವರು
ನೋಡಿಕೊಳ್ಳಲು ನರ್ಸ್‍ಗಳಿಗೆ, ವೈದ್ಯರಿಗೆ,
ಆಶಾ ಕಾರ್ಯಕರ್ತರಿಗೆ ತರಬೇತಿ
ನೀಡಬೇಕಾಗುತ್ತದೆ. ಮಕ್ಕಳ ಜತೆ ತಂದೆ
ತಾಯಂದಿರು ಸಹ ಇರಬೇಕಾಗುತ್ತದೆ.
ಅವರ ಖರ್ಚು ವೆಚ್ಚ ಕೂಡ
ಹೆಚ್ಚಾಗುತ್ತದೆ ಎಂದು ಕರ್ನಾಟಕ ಜ್ಞಾನ
ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್.
ಸ್ವಾಮಿ ನುಡಿದರು.
ಅವರು ನಗರದ ತರಳಬಾಳು
ನಗರದ ಒಂದನೇ ಮುಖ್ಯರಸ್ತೆಯಲ್ಲಿ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು
ಮಲ್ಲನಕಟ್ಟೆ ಗ್ರಾಮ ಸಂಘದ
ಸಹಯೋಗದೊಂದಿಗೆ ಆಯೋಜಿಸಿದ್ದ
“ಮಕ್ಕಳನ್ನ ರಕ್ಷಿಸಿಕೊಳ್ಳಿ” ಸಾರ್ವಜನಿಕರಿಗೆ
ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ
ಮಾತನಾಡಿದರು.

ರೂಪಾಂತರಿ ಕರೋನ ಡೆಲ್ಟಾ+ ರೂಪದಲ್ಲಿ
ಮತ್ತೊಮ್ಮೆ ಭಯ ಹುಟ್ಟಿಸುತ್ತಿದೆ.
ಮಕ್ಕಳನ್ನು ಶಾಲೆಗೆ ಕಳಿಸುವ ಮುಂಚೆ
ನಾವು ವ್ಯಾಕ್ಸಿನೇಷನ್ ಮಾಡಬೇಕಾಗಿದೆ.
ಕರೋನ ಬಗ್ಗೆ ಈಗಲೇ ಜನರ ಮತ್ತೆ
ಭಯಭೀತಿಯನ್ನು ತೊರೆದಿದ್ದಾರೆÉ.
ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ,
ರಸ್ತೆಗಳಲ್ಲಿ ಗುಂಪು ಸೇರುತ್ತಿದ್ದಾರೆ,
ಮಕ್ಕಳನ್ನು ರಸ್ತೆಬದಿಗಳಲ್ಲಿ ಆಟವಾಡಲು
ಬಿಡುತ್ತಿದ್ದಾರೆ, ಆಟೋಗಳಲ್ಲಿ ಐದಾರು ಜನ
ಓಡಾಡುತ್ತಿದ್ದಾರೆ ಮತ್ತು
ಮಾರುಕಟ್ಟೆಗಳಲ್ಲಿ ಜನಸಂದಣಿ
ಹೆಚ್ಚಾಗಿದೆ. ಕಚೇರಿಗಳ ಮುಂದೆ,
ಆಫೀಸ್‍ಗಳ ಮುಂದೆ ಜನಜಂಗುಳಿ
ಜಾಸ್ತಿಯಾಗುತ್ತಿದೆ. ಕಛೇರಿಗಳ ಕಿಟಕಿಗಳ
ಸುತ್ತ ಮುತ್ತ ಜನ ಒಬ್ಬರ ಮೇಲೊಬ್ಬರು
ಬಿದ್ದು, ಗಂಟೆಗಟ್ಟಲೇ ನಿಂತು ಕೆಲಸ
ಮಾಡಿಸಿಕೊಳ್ಳುತ್ತಿದ್ದಾರೆ. ಬ್ಯಾಂಕ್‍ಗಳಲ್ಲೂ

ಜನಸಂದಣಿ ಜಾಸ್ತಿಯಾಗುತ್ತಿದೆ.
ಬಸ್‍ಗಳನ್ನ ಹತ್ತಲೂ ಜನರು ನೂಕು
ನುಗ್ಗಲು ಮಾಡಿಕೊಳ್ಳುತ್ತಿದ್ದಾರೆ. ಇದು
ಮತ್ತೊಮ್ಮೆ ಕರೋನ ಹರಡಲು
ಸಹಾಯಕವಾಗುತ್ತಿದೆ ಎಂದರು.
ಮಾರುಕಟ್ಟೆಗಳಲ್ಲೂ ಸಾಮಾಜಿಕ
ಅಂತರ ಮರೆತು ವ್ಯಾಪಾರದಲ್ಲಿ ಜನರು
ತೊಡಗಿದ್ದಾರೆ. ಮನೆಗೆ ಹೋದಾಗ
ಮಕ್ಕಳ ಜೊತೆ ಬೇರೆಯುತ್ತಿದ್ದಾರೆ.
ಮನೆಗಳಲ್ಲಿ ಸಹ ಪೋಷಕರು ಮಾಸ್ಕ್
ಧರಿಸಿ ಮಕ್ಕಳ ಜೊತೆ
ವ್ಯವಹರಿಸಬೇಕಾಗುತ್ತದೆ. ಅದಕ್ಕಾಗಿ
ಹೆಚ್ಚು ಜನಜಾಗೃತಿ ಕಾರ್ಯಗಳು
ನೆಡೆಯಬೇಕಾಗಿದೆ. ಮಕ್ಕಳನ್ನ ನಾವು
ಜೋಪಾನವಾಗಿ ನೋಡಿಕೊಳ್ಳಲು
ಸಿದ್ಧರಾಗಬೇಕಾಗಿದೆ. ಶಾಲೆಗಳು ಸಹಾ
ಸದ್ಯದಲ್ಲಿ ಪ್ರಾರಂಭವಾಗುವುದರಲ್ಲಿದೆ.
ಅಲ್ಲಿ ಮಕ್ಕಳನ್ನ ಸರಿಯಾಗಿ
ನೋಡಿಕೊಳ್ಳಲು ಶಾಲಾ ಸಿಬ್ಬಂಧಿಗಳು ಸಹ
ಸಿದ್ಧರಾಗಿರಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಿಪಿಇ ಕಿಟ್ಟ್ ಧರಿಸಿದ
ಮಕ್ಕಳು, ಕರೋನ ಮುಖವಾಡ ಧರಿಸಿ,
ಮಕ್ಕಳ ಗೊಂಬೆಗಳನ್ನ
ಜೋಕಾಲಿಗಳಲ್ಲಿ ತೂಗಿ, ಹಾಡಿನ ಮೂಲಕ
ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಜಾನವಿ,
ಶ್ರೀನಿವಾಸ, ಶಶಿ ಅಂಶುಲ್, ಹೆಚ್.ಎಸ್.ರಚನ,
ಹೆಚ್.ಎಸ್. ಪ್ರೇರಣ, ವೇನಿಲಾ, ಹಾಜರಿದ್ದರು.

Leave a Reply

Your email address will not be published. Required fields are marked *