ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ
ಗ್ರಂಥಾಲಯಗಳನ್ನು ತೆರೆಯಲು ಸರ್ಕಾರ ಅನುಮತಿಸಿದ್ದು,
ವಾರಾಂತ್ಯದ ದಿನಗಳು ಹಾಗೂ ಸಾರ್ವತ್ರಿಕ ರಜೆ ದಿನಗಳನ್ನು
ಹೊರತುಪಡಿಸಿ ಪ್ರತಿ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01
ಗಂಟೆಯವರೆಗೆ ಸಾರ್ವಜನಿಕರಿಗಾಗಿ ಗ್ರಂಥಾಲಯಗಳು ಲಭ್ಯವಿರಲಿದೆ.
ಕೋವಿಡ್-19 ವೈರಾಣು ಹರಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ
ಕ್ರಮವಾಗಿ ಜಿಲ್ಲೆಯಲ್ಲಿ ಮುಚ್ಚಲಾಗಿದ್ದ ಗ್ರಂಥಾಲಯಗಳನ್ನು
ತೆರೆಯಲು ಸರ್ಕಾರ ಅನುಮತಿ ನೀಡಿದೆ. ಪ್ರತಿ ದಿನ ಸಂಜೆ 7 ರಿಂದ ಬೆಳಿಗ್ಗೆ 5
ಗಂಟೆವರೆಗೆ ನೈಟ್ ಕಫ್ರ್ಯೂ ಹಾಗೂ ವಾರದ ಕಫ್ರ್ಯೂ ಶುಕ್ರವಾರ
ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಇರುವುದರಿಂದ,
ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ತಾತ್ಕಾಲಿಕವಾಗಿ ಆಯಾ
ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗ್ರಂಥಾಲಯಗಳನ್ನು
ತೆರೆದು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅನುಮತಿ ನೀಡಿದೆ. ಹಾಗೂ ಈ
ಆದೇಶವು ಜುಲೈ 5 ರವರೆಗೆ ಜಾರಿಯಲ್ಲಿರುತ್ತದೆ.
ಜಿಲ್ಲೆಯಲ್ಲಿರುವ ಎಲ್ಲಾ ಗ್ರಂಥಾಲಯಗಳ ಸೇವೆಯನ್ನು
ಕೋವಿಡ್-19 ಮಾರ್ಗಸೂಚಿಯನ್ವಯ ಮಾಸ್ಕ್ ಧರಿಸುವುದು, ಸ್ವಚ್ಛತೆ
ಕಾಪಾಡುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಹಾಗೂ
ಇನ್ನಿತರೆ ಮಾರ್ಗಸೂಚಿಗಳ ಮುನ್ನೆಚ್ಚರಿಕೆ ಕ್ರಮಗಳನ್ನು
ಪಾಲಿಸುವ ಷರತ್ತುಗಳಿಗೆ ಒಳಪಟ್ಟು, ಗ್ರಂಥಾಲಯಗಳ ಸೇವೆ
ಒದಗಿಸಲು ನಿರ್ಧರಿಸಲಾಗಿದೆ.
ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಗರ ಕೇಂದ್ರ
ಗ್ರಂಥಾಲಯ, ಶಾಖಾ ಗ್ರಂಥಾಲಯ, ಕೊಳಚೆ ಪ್ರದೇಶ ಹಾಗೂ
ಅಲೆಮಾರಿ ಗ್ರಂಥಾಲಯ, ಮಕ್ಕಳ ಸಮುದಾಯ ಕೇಂದ್ರ ಮತ್ತು
ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಸೋಮವಾರದಿಂದ
ಶನಿವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ
ಓದುಗರಿಗೆ ಗ್ರಂಥಾಲಯಗಳು ಲಭ್ಯವಿರಲಿದೆ ಎಂದು ಮುಖ್ಯ
ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.