ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್‍ಕಿಟ್‍ಗಳನ್ನು ನೀಡಲಾಗಿದ್ದು, ಶುಕ್ರವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್ ಕಿಟ್‍ಗಳನ್ನು ವಿತರಿಸಿದರು.
ನಂತರ ಕೆಲಸಗಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಅನೇಕ ಸೌಲತ್ತುಗಳನ್ನು ನೀಡುತ್ತಿದ್ದು, ಕಾರ್ಮಿಕರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿ ಶೀಘ್ರದಲ್ಲೇ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ಕೆ.ಚಮನ್ ಸಾಬ್, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಕಾರ್ಮಿಕ ನಿರಿಕ್ಷಕರುಗಳಾದ ರಾಜಶೇಖರ್ ಹಿರೇಮಠ್, ಟಿ. ರಾಜಪ್ಪ, ಆರ್.ನಾಗೇಶ್, ದೀಪಿಕಾ, ಆಶಾ, ದೇವಿಕಾ,ಮುಖಂಡ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.