ದಿನ ಬಾಕಿ

ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಲಾದ  ಹವಾಮಾನ ಆಧಾರಿತ
ಬೆಳೆ ವಿಮಾ ಯೋಜನೆಯಡಿ ( ಆರ್-ಡಬ್ಲೂಬಿಸಿಐಎಸ್) ತೋಟಗಾರಿಕೆ ಬೆಳೆಗಳಾದ
ಅಡಿಕೆ, ದಾಳಿಂಬೆ, ವೀಳ್ಯದೆಲೆ, ಕಾಳುಮೆಣಸು ಬೆಳೆಗಳಿಗೆ ಪ್ರಸಕ್ತ
ಮುಂಗಾರು ಹಂಗಾಮಿನ ಬೆಳೆಗಳ ಸಂಯೋಜನೆಗಳನ್ನು
ಅಧಿಸೂಚಿಸಲಾಗಿದ್ದು, ವಿಮೆ ನೋಂದಣಿ ಮಾಡಿಸಲು ಜೂ. 30 ಕೊನೆಯ
ದಿನವಾಗಿದೆ.
ಅಡಿಕೆ, ದಾಳಿಂಬೆ, ವೀಳ್ಯದೆಲೆ, ಕಾಳುಮೆಣಸು ಬೆಳೆಗಳ ವಿಮೆ
ನೊಂದಾಯಿಸಲು ಕೇವಲ 5 ದಿನಗಳು ಬಾಕಿ ಇದ್ದು, ರೈತ ಬಾಂಧವರು
ಹೆಚ್ಚಿನ ರೀತಿಯಲ್ಲಿ ನೋಂದಣಿ ಮಾಡಿಸಬೇಕು ಹಾಗೂ ತಾಲ್ಲೂಕು
ಮತ್ತು ಹೋಬಳಿ ಮಟ್ಟದ ಗ್ರಾಹಕರ ಸೇವಾ ಕೇಂದ್ರದಲ್ಲಿ ನೋಂದಾಣಿ
ಪ್ರಕ್ರಿಯೆ ಲಭ್ಯವಿದ್ದು, ಈ ಯೋಜನೆಯ ಸದುಪಯೋಗವನ್ನು
ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಉಪನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *