ಹೊನ್ನಾಳಿ ಹಿರೇಕಲ್ಮಠ ದಲ್ಲಿ ಇಂದು ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ರಾಜ್ಯ ಉಪಾಧ್ಯಕ್ಷರಾದ ಹೆಚ್ ಎ ಉಮಾಪತಿಯವರು 61ನೇ ಹುಟ್ಟು ಹಬ್ಬದ ಆಚರಣೆಯ ಜೊತೆಗೆ 25ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಹೊನ್ನಾಳಿ ಟೌನ್ ನ ಪತ್ರಿಕಾ ವಿತರಕರಿಗೆ 25 ಆಹಾರ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು.
ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ ಹೆಚ್ ಎ ಉಮಾಪತಿಯವರು ಅರ್ಥಪೂರ್ಣವಾಗಿ 61 ಹುಟ್ಟುಹಬ್ಬ ಮತ್ತು25ನೇ ವಿವಾಹ ಮಹೋತ್ಸವವನ್ನು ವಿಶಿಷ್ಟವಾಗಿ ಪತ್ರಿಕಾ ವಿತರಕರಿಗೆ ಆಹಾರ ಕಿಟ್ಟುಗಳನ್ನು ಕೊಡುತ್ತಿರುವುದು ಶ್ಲಾಘನೀಯ. ಶ್ರೀ ಚನ್ನಪ್ಪಸ್ವಾಮಿ ಹೆಚ್ ಎ ಉಮಾಪತಿ ಅವರ ಕುಟುಂಬಕ್ಕೆ ಆಯಸ್ಸು, ಆರೋಗ್ಯ ,ಅಭಿವೃದ್ಧಿ ಮತ್ತು ರಾಜಕೀಯ ಜೀವನದಲ್ಲಿ ಜನರ ಸೇವೆ ಮಾಡಲೆಂದು ಅವರಿಗೆ ಆಶೀರ್ವದಿಸಿದರು.
ಹೆಚ್ ಎ ಉಮಾಪತಿಯವರು ಮಾತನಾಡಿ ನನ್ನ 61ನೇ ಹುಟ್ಟು ಹಬ್ಬವನ್ನು ಮತ್ತು 25ನೇ ವರ್ಷದ ವಿವಾಹ ಮಹೋತ್ಸವವನ್ನು ಸರಳವಾಗಿ ಆಚರಿಸ ಬೇಕಾಗಿತ್ತು ಆದರೆ ನನ್ನ ಮನಸ್ಸಿಗೆ ಬಂದದ್ದು 4:00 ಗಂಟೆಗೆ ಎದ್ದು ಈ ಕಷ್ಟ ಕಾಲದಲ್ಲಿ ರೋಗವನ್ನು ಲೆಕ್ಕಿಸದೆ ಪತ್ರಿಕೆ ವಿತರಣೆ ಮಾಡುವವರಿಗೆ ಆಹಾರ ಕಿಟ್ಟುಗಳನ್ನು ಕೊಟ್ಟರೆ ಅವರಿಗೆ ಸಹಾಯವಾಗುತ್ತದೆ ಎಂದು ಮನಗೊಂಡು ಇಂದಿನ ದಿವಸ ಅವರುಗಳಿಗೆ ಆಹಾರದ ಕಿಟ್ಟು ಗಳನ್ನು ಕೊಡುವಂತಾಯಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುನೀತಾ ಉಮಾಪತಿ,ಹೆಚ್ ಎ ಉಮಾಪತಿ, ಶ್ರೀಮತಿ ಸುಧಾ ಬಸವರಾಜ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾದ ರಂಜಿತ್, ಪವನ್, ಗೌತು ಮಂಜು ಬಣ್ಣಜ್ಜಿ,ಎಂಪಿಎಂ ಚನ್ನಬಸಯ್ಯ, ಪತ್ರಿಕಾ ಸಂಘದ ಅಧ್ಯಕ್ಷರಾದ ಮೃತ್ಯುಂಜಯ ಪಾಟೀಲ್ ಪತ್ರಿಕಾ ಮಿತ್ರರು ಸಹ ಭಾಗಿಯಾಗಿದ್ದರು.