ನಿಟುವಳ್ಳಿಯ ಜಯನಗರದಲ್ಲಿ
ಲಸಿಕೆ
ದಾವಣಗೆರೆ: ಶಾಸಕ ಡಾ|| ಶಾಮನೂರು
ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್
ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು ನಗರದ
ನಿಟುವಳ್ಳಿಯ ಜಯನಗರದಲ್ಲಿ ನಡೆಯಿತು.
ಲಸಿಕಾ ಕೇಂದ್ರಕ್ಕೆ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್
ಅವರು ಭೇಟಿ ನೀಡಿ ಲಸಿಕೆ ಪಡೆದ ಕಾಂಗ್ರೆಸ್ ಕಾರ್ಯಕರ್ತರ
ಆರೋಗ್ಯ ವಿಚಾರಿಸಿ ನಿಟುವಳ್ಳಿಯ ಜಯನಗರದ ಎಲ್ಲಾ
ನಾಗರೀಕರಿಗೂ ಜಾತಿ-ಧರ್ಮ, ಪಕ್ಷ ಬೇಧ ಮಾಡದೇ
ಪ್ರತಿಯೊಬ್ಬರಿಗೂ ಲಸಿಕೆ ನೀಡುವಂತೆ ಗಮನ ಹರಿಸಿ ಎಂದು
ಸ್ಥಳೀಯ ಮುಖಂಡರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಆರ್.ಎಸ್.ಶೇಖರಪ್ಪ, ಆರ್.ಹೆಚ್.
ನಾಗಭೂಷಣ್, ಡಾ|| ರಮೇಶ್, ಪ್ರವೀಣ್ ಹುಲ್ಲುಮನೆ,
ಆರ್.ಎಸ್.ರಾಕೇಶ್, ಪ್ರಶಾಂತ್(ಪಚ್ಚಿ), ಶ್ಯಾಮ್ ಪೈಲ್ವಾನ್
ಮತ್ತಿತರರು ಉಪಸ್ಥಿತರಿದ್ದರು.