ಕೋವಿಡ್‍ನಿಂದ ಮರಣ ಹೊಂದಿದವರ ಪಟ್ಟಿ ಶೀಘ್ರ ಸಲ್ಲಿಸಿ- ಬಿ.ಎ.
ಬಸವರಾಜ
ಕೋವಿಡ್‍ನಿಂದ ಮರಣ ಹೊಂದಿದ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ
ಸೌಲಭ್ಯ ಕಲ್ಪಿಸುವ ಯೋಜನೆಗಾಗಿ ಚನ್ನಗಿರಿ ತಾಲ್ಲೂಕಿನಲ್ಲಿ ಕೋವಿಡ್‍ನಿಂದ
ಮರಣ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಪಟ್ಟಿಯನ್ನು ಸಿದ್ಧಪಡಿಸಿ,
ಶೀಘ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ನಗರಾಭಿವೃದ್ದಿ
ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ ಅವರು ತಾಲ್ಲೂಕು
ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚನ್ನಗಿರಿಯ ಮೌದ್ಗಲ್ ಆಂಜನೇಯ ಸ್ವಾಮಿ ಕಲ್ಯಾಣ ಮಂದಿರದಲ್ಲಿ
ಸೋಮವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ
ಪ್ರಗತಿ ಪರಿಶೀಲನೆ ಹಾಗೂ ಕೋವಿಡ್-19 ನಿಯಂತ್ರಣ ಕುರಿತು ಪರಿಶೀಲನಾ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್‍ನಿಂದ ಮರಣ ಹೊಂದಿದ ಬಡ ಕುಟುಂಬಗಳಿಗೆ ಸರ್ಕಾರದಿಂದ
ಪರಿಹಾರ ಸೌಲಭ್ಯ ನೀಡಲು ಉದ್ದೇಶಿಸಲಾಗಿದ್ದು, ಹೀಗಾಗಿ, ತಾಲ್ಲೂಕಿನಲ್ಲಿ
ಕೋವಿಡ್‍ನಿಂದ ಎಷ್ಟು ಜನ ಮೃತಪಟ್ಟಿದ್ದಾರೆ, ಎಂಬ ಅಂಕಿ-ಅಂಶಗಳನ್ನು
ಸಮರ್ಪಕವಾಗಿ ಸಂಗ್ರಹಿಸಿ, ಮೃತಪಟ್ಟಿರುವವರ ಹೆಸರು, ವಿಳಾಸ,
ಕೋವಿಡ್ ಪಾಸಿಟೀವ್ ರಾಜ್ಯ ಮಟ್ಟದ ಗುರುತು ಸಂಖ್ಯೆಯುಳ್ಳ ಮಾಹಿತಿಯ
ವಿವರವಾದ ಪಟ್ಟಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿಗೆ
ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಪಟ್ಟಿಯಲ್ಲಿ ಯಾವುದೇ ಅರ್ಹ
ಕುಟುಂಬಗಳ ಹೆಸರು ಬಿಟ್ಟುಹೋಗಬಾರದು ಎಂದು ತಾಲ್ಲೂಕು
ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭು ಮಾತನಾಡಿ, ತಾಲ್ಲೂಕಿನಲ್ಲಿ
ಒಟ್ಟು 3551 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 59 ಜನ ಕೋವಿಡ್‍ನಿಂದ
ಮರಣ ಹೊಂದಿದ್ದಾರೆ. ತಾಲ್ಲೂಕಿನಲ್ಲಿ 05 ಕೋವಿಡ್ ಕೇರ್ ಸೆಂಟರ್‍ಗಳನ್ನು
ಪ್ರಾರಂಭಿಸಲಾಗಿದ್ದು, 1544 ಜನರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಆರೈಕೆ
ಪಡೆದುಕೊಂಡಿದ್ದಾರೆ ಎಂದರು.
ತಹಶೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ, ಸರ್ಕಾರದ ಲಾಕ್‍ಡೌನ್
ಮಾರ್ಗಸೂಚಿಯಂತೆ ತಾಲ್ಲೂಕಿನಲ್ಲಿ ಎಲ್ಲಾ ಅಂಗಡಿಗಳಿಗೆ ನಿಗದಿತ
ಸಮಯದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ನಿಯಮ
ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಮಾಸ್ಕ್ ಹಾಕದ ಪ್ರಕರಣದಲ್ಲಿ
ರೂ. 19500 ದಂಡ ವಿಧಿಸಲಾಗಿದೆ. ಲಸಿಕೆ ಕುರಿತು ಜನರಲ್ಲಿ ಜಾಗೃತಿ
ಮೂಡಿಸುತ್ತಿದ್ದು, ಹೆಚ್ಚು ಜನರು ಲಸಿಕೆ ಪಡೆದುಕೊಳ್ಳಲು ಮುಂದೆ
ಬರುತ್ತಿದ್ದಾರೆ. ಪಟ್ಟಣದ 23 ವಾರ್ಡ್‍ಗಳಲ್ಲಿ ಸೋಂಕು ನಿವಾರಕ
ಸಿಂಪಡಿಸಲಾಗಿದ್ದು, ಪ್ರತಿನಿತ್ಯ ತಹಶೀಲ್ದಾರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್
ಸಮಿತಿ ನಡೆಸುತ್ತಿದ್ದೇವೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಮಾತನಾಡಿ, ಈ ವರ್ಷ ತಾಲ್ಲೂಕಿನಲ್ಲಿ
ವಾಡಿಕೆಗಿಂತ ಶೇ. 25 ರಷ್ಟು ಹೆಚ್ಚು ಮಳೆಯಾಗಿದೆ. 674 ಮಿಮೀ ಸರಾಸರಿ
ಮಳೆಯಾಗಿದ್ದು, ಜೂ.5 ರವರೆಗೆ 187 ಮಿಮೀ ವಾಡಿಕೆಗೆ 141 ಮಿಮೀ
ಮಳೆಯಾಗಿದೆ. ತಾಲ್ಲೂಕಿನಲ್ಲಿ 44 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ
ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಹತ್ತಿ
ಬಿತ್ತನೆ ಮಾಡುವ ಗುರಿ ಇದ್ದು ಈಗಾಗಲೆ 22 ಸಾವಿರ ಹೆಕ್ಟೇರ್
ಬಿತ್ತನೆಯಾಗಿದೆ, ಅಲ್ಲದೆ ಸದ್ಯ ಭತ್ತದ ಕೊಯ್ಲು ನಡೆಯುತ್ತಿದ್ದು,
ಬಳಿಕ ಈ ಕ್ಷೇತ್ರದಲ್ಲಿಯೂ ಬಿತ್ತನೆಯಾಗಲಿದೆ. ಈ ವರ್ಷ 4000 ಹೆಕ್ಟರ್
ಪ್ರದೇಶದಲ್ಲಿ ತೊಗರಿಯನ್ನು ಅಂತರಬೆಳೆಯಾಗಿ ಬೆಳೆಯುವ
ಮೂಲಕ ಸುಮಾರು 16000 ಕ್ವಿಂ ತೊಗರಿ ಉತ್ಪಾದನೆಯನ್ನು ಹೆಚ್ಚಿಸುವ
ಗುರಿ ಹೊಂದಲಾಗಿದೆ. ತಾಲ್ಲೂಕಿನಲ್ಲಿ ಬಿತ್ತನೆ ಬೀಜ ಹಾಗೂ
ರಸಗೊಬ್ಬರಗಳ ಯಾವುದೇ ಕೊರತೆ ಇಲ್ಲ ಎಂದರು. ತೋಟಗಾರಿಕೆ
ಹಿರಿಯ ಸಹಾಯಕ ನಿರ್ದೇಶಕ ಮಾತನಾಡಿ, ಹವಾಮಾನ ಆಧಾರಿತ ಬೆಳೆ
ವಿಮೆಗೆ ಜೂ. 30 ರವರೆಗೆ ನೊಂದಣಿ ಮಾಡಿಕೊಳ್ಳಲು ಅವಕಾಶವಿದ್ದು,
ಅಡಿಕೆಗೆ ಹೆಚ್ಚಿನ ರೈತರು ಆಸಕ್ತಿ ತೋರುತ್ತಿದ್ದಾರೆ ಎಂದರು. ಜಿಲ್ಲಾ
ಉಸ್ತುವಾರಿ ಸಚಿವರು ಮಾತನಾಡಿ, ತಾಲ್ಲೂಕಿನಲ್ಲಿ ಬಿತ್ತನೆ ಬೀಜ ಹಾಗೂ
ರಸಗೊಬ್ಬರದ ಯಾವುದೇ ಕೊರತೆಯಾಗಬಾರದು, ಯಾವುದೇ
ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು
ಎಂದರು.
ಶಿಕ್ಷಣ ಇಲಾಖೆ ಕುರಿತು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಮಾತನಾಡಿ, 2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 23 ಪರೀಕ್ಷಾ
ಕೇಂದ್ರದಲ್ಲಿ ಒಟ್ಟು 3698 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ
ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಪ್ರತಿ ತಿಂಗಳು
ಸಹನಿರ್ದೇಶಕರ ಅಧ್ಯಕ್ಷತೆಯಲ್ಲಿ ಮುಖ್ಯಶಿಕ್ಷಕರ ಸಭೆ
ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1059 ಶಿಕ್ಷಕರು ಕೋವಿಡ್ ಲಸಿಕೆ
ಪಡೆದಿದ್ದು, ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳುತ್ತಾರೆ. ಜಿಲ್ಲಾ ಶಿಕ್ಷಣ
ಮತ್ತು ತರಬೇತಿ ಸಂಸ್ಥೆಯಿಂದ ಪ್ರೌಢಶಾಲಾ ಶಿಕ್ಷಕರಿಗೆ ವೆಬಿನಾರ್
ಮೂಲಕ ಸಭೆ ನಡೆಸಿ ಶೈಕ್ಷಣಿಕ ಮಾರ್ಗದರ್ಶನ ನೀಡಲಾಗಿದೆ.
ಜೂ.21 ರಿಂದ ಶಾಲೆಗಳನ್ನು ಪ್ರಾರಂಭ ಮಾಡಲಾಗಿದ್ದು, ಶಿಕ್ಷಕರಿಗೆ
ಆನ್‍ಲೈನ್ ಮೂಲಕ ಸಭೆ ನಡೆಸಿ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ
ನೀಡಲಾಗಿದೆ. ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳನ್ನು ಈಗಾಗಲೇ
ಪ್ರಾರಂಭಿಸಿದ್ದಾರೆ. ತಾಲ್ಲೂಕಿನಲ್ಲಿ ತೀವ್ರತರಹದ ಖಾಯಿಲೆಯಲ್ಲಿ 64
ವಿದ್ಯಾರ್ಥಿಗಳಿದ್ದು ಅವರ ಪೋಷಕರಿಗೆ ಲಸಿಕೆ ಹಾಕಿಕೊಳ್ಳಲು ಕ್ರಮ
ವಹಿಸಲಾಗಿದೆ. 367 ವಿಕಲಚೇತನ ಮಕ್ಕಳಿದ್ದು ಅವರ ಪೋಷಕರಿಗೆ ಲಸಿಕೆ
ಹಾಕಿಸಿಕೊಳ್ಳಲು ಕ್ರಮವಹಿಸಲಾಗಿದೆ.
18 ವರ್ಷದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ಪಡೆಯುವುದು
ಕಡ್ಡಾಯ ಮಾಡಲಾಗಿದೆ. ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ
ವಿದ್ಯಾರ್ಥಿಗಳಿಗೆ ಒಟ್ಟು 80 ಲಕ್ಷ ರೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಎಸ್.ಎಸ್.ಎಲ್.ಸಿ ಮೇಲ್ಪಟ್ಟು ಪದವಿ, ಸ್ನಾತಕ ಹಾಗೂ ಡಿಪ್ಲೋಮದಿಂದ ಒಟ್ಟು 1757
ವಿದ್ಯಾರ್ಥಿಗಳು ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಾತನಾಡಿ, 2020-21 ನೇ ಸಾಲಿನಲ್ಲಿ
ಅಂತರ್‍ಜಾತಿ ವಿವಾಹಕ್ಕೆ 62.50 ಲಕ್ಷ ರೂ ಅನುದಾನ ಮಂಜೂರಾಗಿದ್ದು, 28
ಅರ್ಜಿಗಳು ಮಂಜೂರಾತಿ ಮಾಡಬೇಕಾಗಿದೆ. ಒಟ್ಟು 56 ದಂಪತಿಗಳು
ಅಂತರ್‍ಜಾತಿ ವಿವಾಹವಾಗಿದ್ದು, ಇನ್ನೂ 26 ಅರ್ಜಿಗಳು ಮಂಜೂರಾತಿ ಮಾಡಲು
ಬಾಕಿ ಇದೆ. ಒಟ್ಟು 74 ಲಕ್ಷ ರೂ ಅನುದಾನ ಬಾಕಿ ಇದೆ ಎಂದು ಮಾಹಿತಿ ನೀಡಿದರು.
96 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ : ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.
ಬಸವರಾಜ ಅವರು ಮಾತನಾಡಿ, ಚನ್ನಗಿರಿ ತಾಲ್ಲೂಕಿಗೆ ಒಳಚರಂಡಿ
ವ್ಯವಸ್ಥೆಗಾಗಿ ರೂ.96 ಕೋಟಿ ಮಂಜೂರಾಗಿದ್ದು, ಟೆಂಡರ್
ಪ್ರಕ್ರಿಯೆಯಲ್ಲಿದೆ. ಕಾಮಗಾರಿ ಪ್ರಾರಂಭಕ್ಕೆ ಆದಷ್ಟು ಬೇಗ ಗುದ್ದಲಿ
ಪೂಜೆ ನೆರವೇರಿಸಲಿದ್ದೇವೆ ಎಂದರು.
ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ, ತಾಲ್ಲೂಕಿನಲ್ಲಿ
ಈಗಾಗಲೆ ಕೋವಿಡ್ ನ ಮೊದಲನೆ ಮತ್ತು ಎರಡನೆ ಅಲೆಯನ್ನು
ಸಮರ್ಪಕವಾಗಿ ನಿರ್ವಹಿಸಿದ್ದೇವೆ, ತಜ್ಞರ ಅಭಿಪ್ರಾಯದಂತೆ ಕೋವಿಡ್‍ನ
ಮೂರನೆ ಅಲೆ ಬರುವ ಸಾಧ್ಯತೆಗಳಿದ್ದು, ಮಕ್ಕಳ ಮೇಲೆ ಪರಿಣಾಮ
ಬೀರುವ ಸಂಭವವಿದೆ ಎಂದಿದ್ದಾರೆ. ಹೀಗಾಗಿ ಜನರ ಪ್ರಾಣ ರಕ್ಷಣೆಗೆ ನಾವು
ಆದ್ಯತೆ ನೀಡಬೇಕಿದ್ದು, ಮೂರನೆ ಅಲೆ ತಾಲ್ಲೂಕಿಗೆ ಬಾರದಂತೆ
ಅಧಿಕಾರಿಗಳು ಶ್ರಮವಹಿಸಿ ಎಚ್ಚರಿಕೆ ಕ್ರಮಗಳನ್ನು
ತೆಗೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಪುರಸಭೆ
ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ
ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್,
ಡಿಹೆಚ್‍ಒ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಸೇರಿದಂತೆ
ಇನ್ನುಳಿದ ತಾಲ್ಲೂಕು ಅಧಿಕಾರಿಗಳು ಇದ್ದರು.