ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರೂ ಮತ್ತು ಮಾಜಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೂ ಆಗಿರುವ ಹೆಚ್. ಎ. ಉಮಾಪತಿಯವರು ತಮ್ಮ ತಂದೆ-ತಾಯಿಯವರಾದ ದಿವಂಗತ ಶ್ರೀಮತಿ ಗಂಗಮ್ಮ ಎಚ್. ಎ.ಹಳದಪ್ಪ ಇವರ ಹೆಸರಿನಲ್ಲಿ ದತ್ತಿ ನಿಧಿಗೆ 50000 ರೂಗಳ ಚೆಕ್ ನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮತ್ತು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಕಾಲೇಜಿನ ವತಿಯಿಂದ ಎಚ್.ಎ.ಉಮಾಪತಿ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಪಿ.ಎಂ. ವಿಜಯಾನಂದಸ್ವಾಮಿ, ಎಚ್.ಆರ್. ಬಸವರಾಜಪ್ಪ, ಎಚ್. ಬಿ. ಮೋಹನ್, ಪ್ರೇಮ್ ಕುಮಾರ್ ಭಂಡಿಗಡಿ, ಅವಿನಾಶ್ ಬಂತಿ, ಹಳದಪ್ಪ, ಗೋವಿಂದಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಎಚ್. ಎಸ್. ರಂಜಿತ್, ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗಳು, ಪಟ್ಟಣದ ಪತ್ರಕರ್ತರು ಉಪಸ್ಥಿತರಿದ್ದರು.