ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಎರಡನೇ ಸಾಮಾನ್ಯ ಸಭೆಯು ಕೊವಿಡ್ ಇರುವ ಕಾರಣ ತುರ್ತಾಗಿ ಸಭೆಯು ಅಧ್ಯಕ್ಷರು ಮತ್ತು ಉಪಾಧ್ಯಕ್ಷ ರು ಹಾಗೂ PDO ನೇತೃತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ಚರ್ಚೆಯಾದ ವಿಷಯಗಳು 7 ಗ್ರಾಮಗಳಿಗೆ ಅನುಕೂಲವಾಗಲೆಂದು ಸ್ವಚ್ಛತೆಯ ದೃಷ್ಟಿ ಇಟ್ಟುಕೊಂಡು

  1. ಮೂರು ಗಾಲಿಯ ಜೆಸಿಬಿ ಬದಲಾಗಿ ನಾಲ್ಕು ಗಾಲಿಯ ಜೆಸಿಬಿ ತರುವ ಬಗ್ಗೆ ಚರ್ಚಿಸಲಾಯಿತು
  2. 10 ಗುಂಟೆ ಜಾಗದಲ್ಲಿ ಕಸ ವಿಲೇವಾರಿ ಜಾಗವನ್ನು ಗುರುತಿಸುವ ಬಗ್ಗೆ ಪಿಡಿಓ ರವರು ಸದಸ್ಯರು ಸಭೆಗೆ ತಂದರು ಈ ಕಸವಿಲೇವಾರಿ ಜಾಗವು ಚಟ್ನಳ್ಳಿ ಗ್ರಾಮದ ಸಂಬಂದ ಜಾಗದ ಪಕ್ಕದಲ್ಲಿ ಮಾಡಿ ಎಂದು ಸರ್ಕಾರ ಗುರುತಿಸಿದೆ ಎಂದು ಹೇಳಿದರು PDO ರವರ ಪ್ರಶ್ನೆಗೆ ಉತ್ತರವಾಗಿ ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಮುಸ್ಸೇನಾಳ್ ಮಾತನಾಡಿ ಚಟ್ನಳ್ಳಿ ಗ್ರಾಮದ ಗಡಿಯಲ್ಲಿ ಕಸವಿಲೇವಾರಿ ಮಾಡಲಿಕ್ಕೆ ನಾವು ಬಿಡುವುದಿಲ್ಲ ನಮ್ಮ ಪಂಚಾಯತ್ ಕೇಂದ್ರಸ್ಥಾನದ ವ್ಯಾಪ್ತಿಯಲ್ಲಿಯೇ ಮಾಡಬೇಕು ಎಂದು ಪ್ರಕಾಶ್ ನಾಯ್ಕರವರಿಗೆ ಧ್ವನಿ ಸೇರಿಸಿ ಗೋವಿಂದರಾಜ ಸದಸ್ಯರು ಬೆಂಬಲವಾಗಿ ಸರ್ವೆ ನಂಬರ್ 12ರಲ್ಲಿ 84 ಎಕರೆ ಜಾಗವಿದ್ದು ಹರಮಘಟ್ಟ ಗಡಿಭಾಗದಲ್ಲಿ ಅದರಲ್ಲಿ ಎರಡು ಎಕ್ಕರೆಯ ಜಮೀನಿನನ್ನು ಕಸವಿಲೇವಾರಿ ಘಟಕಕ್ಕೆ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ EEO ಮತ್ತು ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತನಾಡಿ ಕ್ರಮಕೈಗೊಳ್ಳಲಾಗುವುದು ಎಂದರು.
  1. NRIG ಯೋಜನೆಯನ್ನು ಮುಸ್ಸೇನಾಳ್ ಗ್ರಾಮಕ್ಕೆ ಅನುಮೋದನೆಯನ್ನು ನಾವು ಮಾಡಿದ್ದರೂ ಸಹ ಇದಕ್ಕೆ ಸಂಬಂಧಪಟ್ಟ ನಾಗರಾಜ ಎಂಬ ಇಂಜಿನಿಯರ್ ಎಸ್ಟಿಮೆಂಟ್ ಮಾಡುತ್ತಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ರವರು ಪಿ ಡಿ ಓರವರಿಗೆ ತರಾಟೆಯನ್ನು ತೆಗೆದುಕೊಂಡರು ನಂತರ ಪಿಡಿ ಓ ಇಂಜಿನಿಯರಗೆ ಪೋನ್ ಮಾಡಿ ಅವರನ್ನು ಕರಿಸುತ್ತೇನೆ ಎಂದು ಹೇಳಿದರು.
  2. 2017 – 18 ನೇ ಸಾಲಿನ ಮಂಜೂರಾದ ಮನೆಗಳಿಗೆ ಬಿಲ್ಲುಗಳನ್ನು ಹಾಕಿಲ್ಲ ಎಂದು ಕೇಳಿದ ಪ್ರಶ್ನೆಗೆ 1700 ಕೋಟಿ ಹಣವನ್ನು ರಾಜ್ಯ ಸರ್ಕಾರ ಪ್ರಕೃತಿ ವಿಕೋಪಕ್ಕೆ ಕೊಡಲಾಗಿದೆ ಎಂದು ಪಿ ಡಿ ಓ ಹೇಳಿದರು.
  3. ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2010ರ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಸುಳ್ಳು ಘೋಷಣೆಯನ್ನು ಮಾಡಿ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ಕೊಟ್ಟು ಈಗ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಶೌಚಾಲಯ ಅವಶ್ಯಕತೆ ಇದೆ ಎಂದುಇನ್ನೂ ಅನೇಕ ವಿಷಯದ ಬಗ್ಗೆ ಚರ್ಚೆ ಮಾಡಿದರು. ಉಪಸ್ಥಿತಿಯಲ್ಲಿ:- ಅಧ್ಯಕ್ಷರಾದ ಶ್ರೀಮತಿ ಅನಿತಾ ರವರು, ಉಪಾಧ್ಯಕ್ಷರಾದ ಪ್ರವೀಣ್ ಪಿಆರ್ ,ಪಿಡಿಒ ವಿಜಯ್ ಕುಮಾರ್ ,ಕಾರ್ಯದರ್ಶಿ ಷಣ್ಮುಖಚಾರ್ಯ , ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯ್ಕ್ ಮುಸ್ಸೇನಾಳ್,ಜಯಶ್ರೀ, ಶ್ರೀಮತಿ ನೇತ್ರಮ್ಮ, ಗೊವಿಂದರಾಜ್ ಎಂ.ಸಿ, ನಾಗೇಶ್ ನಾಯ್ಕ್, ಶಕುಂತಲಾಬಾಯಿ, ನಟರಾಜ್ ಪ್ಪ ,ಪ್ರೀತಿ ಎಂಕೆ ,ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *