ಆಹ್ಲ್ ಸುನ್ನತ್ ಅಲ್ ಉಳ್ಳಾಲ ಜಮಾತ್ ನ ಏಕತೆ -ಐಕ್ಯತೆ -ಒಗ್ಗಟ್ಟು – ಹಾಗೂ ಉಳ್ಳಾಲದ ಶಾಂತಿ -ಸೌಹಾರ್ದತೆಗೆ ಸಾಕ್ಷಿಯಾದ ಐದು ವರ್ಷಕೊಮ್ಮೆ ಆಚರಿಸಿ ಕೊಂಡು ಬರುತ್ತಿರುವ ಸೈಯದ್ ಮೊಹಮ್ಮದ್ ಶರೀಪುಲ್ ಮದನಿ(ಖ. ಸ ) ರ ಉರೂಸು ಕಾರ್ಯಕ್ರಮ ವನ್ನು ಮುಂದಿನ ಬಾರಿ ಆಚರಿಸುವಾಗ ಎಂದಿನಂತೆ ಜಮಾತ್ ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು.. ಎಲ್ಲರೂ ಈ ಕಾರ್ಯಕ್ರಮ ದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಆಹ್ಲ್ ಸುನ್ನತ್ ಅಲ್ ಉಳ್ಳಾಲ ಜಮಾತ್ ನ ಮನವಿ ಯೊ0ದನ್ನು ದರ್ಗಾ ಹಾಗೂ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಗೆ ಇಂದು ಅರ್ಪಿಸಲಾಗಿದೆ
_ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಮೀದ್ ಉಳ್ಳಾಲ್ ಹಾಗೂ ದ. ಕ. ಜಿಲ್ಲಾ ಕ್ರೀಡಾ. ಅಕಾಡೆಮಿಯ ಮಾಜಿ ನಿರ್ದೇಶಕ – ಕ್ರೀಡಾ ತರಬೇತುದಾರ ಸಾಜಿದ್ ಉಳ್ಳಾಲ ರಿಂದ ಮನವಿ ಸ್ವೀಕರಿಸಿದ ದರ್ಗಾ ಆಡಳಿತ ಸಮಿತಿ ಅಧ್ಯಕ್ಷ ರಶೀದ್ ಹಾಜಿ ಯವರು.
ಉರೂಸು ಕಾರ್ಯಕ್ರಮ ವನ್ನು ನಿರೂಪಿಸುವಾಗ ತಮ್ಮ ಮನವಿ ಯ ವಿಷಯ ವನ್ನು ಗಂಭೀರವಾಗಿ ಪರಿಗಣಿಸಲಾಗುವೂದೆ0ದು ಅಧ್ಯಕ್ಷರು ಅರ್ಜಿದಾರರಿಗೆ ಭರವಸೆ ಕೊಟ್ಟಿದ್ದಾರೆ