ಶೀಘ್ರದಲ್ಲೇ ಸರ್ಕಾರಿ ಮಡಿಕಲ್ ಕಾಲೇಜಿಗೆ ಶಂಕು ಸ್ಥಾಪನೆ : ಬಿ.ಎ

ಬಸವರಾಜ್.

ದಾವಣಗೆರೆ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡಲು
ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದು, ಪಿಪಿಪಿ ಮಾದರಿಯಲ್ಲಿ
ಶೀಘ್ರದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಗುದ್ದಲಿ
ಪೂಜೆಯನ್ನು ನೆರವೇರಿಸಲಾಗುವುದು ಎಂದು ನಗರಾಭಿವೃದ್ಧಿ
ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಇಂದು ಬೆಳಗ್ಗೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ವೀಕ್ಷಣೆ
 ಮಾಡಿದ ಸಚಿವರು, ದಾವಣಗೆರೆ ಜಿಲ್ಲೆಯಲ್ಲಿ ಸಾರ್ವಜನಿಕರ ಬಹುದಿನಗಳ
ಬೇಡಿಕೆಯಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡವನ್ನು ಜಿಲ್ಲಾ
ಆಸ್ಪತ್ರೆಯ ಪಕ್ಕದಲ್ಲಿಯೇ ನಿರ್ಮಿಸುವ ಸಂಬಂಧ ಯೋಜನೆಯನ್ನು
ಸಿದ್ದಪಡಿಸಿದ್ದು, ಬಹುದಿನಗಳ ಮೆಡಿಕಲ್ ಕಾಲೇಜಿನ ನಿರೀಕ್ಷೆ ಸಾಕಾರವಾಗಲಿದೆ
ಎಂದರು.
ನಂತರ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ
ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದ ಸಚಿವರು, ಕಾಮಗಾರಿಯು
ತ್ವರಿತಗತಿಯಲ್ಲಿ ಸಾಗಬೇಕು, ಕೊರೋನಾ ಹಿನ್ನಲೆಯಲ್ಲಿ
ಕಾಮಗಾರಿಗಳು ನಿಂತಿದ್ದು, ಈ ಕಾಮಗಾರಿಯು 120 ರೂ. ಕೋಟಿಯ
ವೆಚ್ಚದ್ದಾಗಿದ್ದು, ಇನ್ನು ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಂಡಿಲ್ಲ,
ಕಾಮಗಾರಿಗೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಮತ್ತು
ಪರಿಕರಗಳನ್ನು ಬಳಸಿಕೊಂಡು ದಿನಕ್ಕೆ 2 ಪಾಳಿಯಂತೆ ಕೆಲಸ ನಡೆಸಿ,
ಇನ್ನು ಒಂದು ವರ್ಷದ ಒಳಗಾಗಿ ಎಲ್ಲಾ ಕೆಲಸಗಳು
ಪೂರ್ಣಗೊಳ್ಳಬೇಕು. ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಪ್ರಕಾರ
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಿಗ್ ಬಜಾರ್, ಮಲ್ಟಿಪ್ಲೆಕ್ಸ್, ಮಾಲ್ ಮತ್ತು ಎಲ್ಲಾ
ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತವಾದ
 ತಂಗುದಾಣವಾಗಿ ನಿರ್ಮಾಣವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ
ನೀಡಿದರು.
ಖಾಸಗಿ ಬಸ್ ನಿಲ್ದಾಣ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು,
ಇನ್ನೂ ಪೂರ್ಣಗೊಂಡಿಲ.್ಲ ಈ ನಿಲ್ದಾಣದಲ್ಲಿ 2 ಎಲಿವೇಟರ್, 3 ಲಿಫ್ಟ್‍ಗಳನ್ನು

ಒಳಗೊಂಡಂತಹ ಸುಂದರವಾದ ಖಾಸಗಿ ಬಸ್ ನಿಲ್ದಾಣವಾಗಿ
ನಿರ್ಮಾಣವಾಗಬೇಕಾಗಿದ್ದು, ಇನ್ನು 6 ತಿಂಗಳ ಒಳಗಾಗಿ ಕಾಮಗಾರಿ
ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಂಚಾರ ಮಾಡಲು ಅನುಕೂಲವಾಗುವಂತೆ
ವ್ಯವಸ್ಥಿತವಾದ ನಿಲ್ದಾಣ ನಿರ್ಮಿಸÀಬೇಕು ಎಂದರು.
ನಗರದ ಜಯದೇವ ಸರ್ಕಲ್‍ಗೆ ಭೇಟಿ ನೀಡಿ ಅಲ್ಲಿನ ಪಾದಚಾರಿಗಳಿಗೆ
ಓಡಾಡಲು ವ್ಯವಸ್ಥಿತವಾದ ಫುಟ್‍ಪಾತ್ ನಿರ್ಮಾಣ ನಿಧಾನಗತಿಯಲ್ಲಿ
ಸಾಗುತ್ತಿದ್ದು, ಸಾರ್ವಜನಿಕರು ಓಡಾಡಲು ಸ್ಥಳವಕಾಶ ಕಿರಿದಾಗಿದ್ದು,
ವಾಹನಗಳ ಸಂಚಾರಕ್ಕೂ ಅಡೆತಡೆ ಉಂಟಾಗುತಿದೆ. ಜನರು ಫುಟ್‍ಪಾತ್
ಗಳ ಮೇಲೆ ಬೀದಿ ಬದಿ ವ್ಯಾಪಾರ ಮಾಡುತ್ತಾರೆ, ಇದರಿಂದಾಗಿ ಜನರು ಹೆಚ್ಚಿನ
ಸಂಖ್ಯೆಯಲ್ಲಿ ಗುಂಪು ಸೇರುವುದರಿಂದ ವಾಹನಗಳ ಸಂಚಾರಕ್ಕೆ
ತೊಂದರೆಯಾಗುತ್ತದೆ. ಹೀಗಾಗಿ ಫುಟ್‍ಪಾತ್ ಕಾಮಗಾರಿಯನ್ನು
ತೀವ್ರಗತಿಯಲ್ಲಿ ಮುಗಿಸುವ ಕಾರ್ಯವಾಗಬೇಕು ಎಂದರು.
ನಗರದ ಗುಂಡಿ ಸರ್ಕಲ್‍ಗೆ ಭೇಟಿ ನೀಡಿದ ಸಚಿವರು, ಅಲ್ಲಿನ
ಸ್ವಚ್ಚತೆಯನ್ನು ವೀಕ್ಷಿಸಿ ಪೌರ ಕಾರ್ಮಿಕರನ್ನು ಮಾತನಾಡಿಸಿ, ಅವರಿಗೆ
ಸುರಕ್ಷಿತ ಪರಿಕರಗಳನ್ನು ಬಳಸಿದಿರುವುದನ್ನು ಕಂಡು ಅವರಿಗೆ
ಸೂಕ್ತ ಪರಿಕರಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು, ನಿಮ್ಮ
ಆರೋಗ್ಯದ ಕಾಳಜಿ ವಹಿಸಿ ಎಂದು ತಿಳಿ ಹೇಳಿದರು.
ನಂತರ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಸಮುದಾಯ
ಭವನದ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಪಾದಚಾರಿ ರಸ್ತೆಗಳು,
ವೃತ್ತಗಳು, ಹಾಗೂ ಒಳಚರಂಡಿ ಕಾಮಗಾರಿಗಳು ಅಪೂರ್ಣಗೊಂಡಿವೆ.
ಇದರಿಂದ ಮಳೆಗಾಲದಲ್ಲಿ ಜನರಿಗೆ ಓಡಾಡಲು ಮತ್ತು ವಾಹನ ಸಂಚಾರಕ್ಕೆ
ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಶೀಘ್ರವಾಗಿ ನಡೆಸಿ
ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  
ಕುಂದುವಾಡ ಕೆರೆಯ ಬಳಿಯ ರುದ್ರಭೂಮಿಗೆ ಭೇಟಿ ನೀಡಿ, ಅಲ್ಲಿ
ನೂತನವಾಗಿ ನಿರ್ಮಾಣವಾಗುತ್ತಿರುವ ವಿದ್ಯುತ್ ಚಿತಾಗಾರದಲ್ಲಿ ಈಗಾಗಲೇ
ಒಂದು ಎಲೆಕ್ಟ್ರಿಕಲ್ ಬರ್ನಿಂಗ್ ಮಷಿನ್ ಇದ್ದು,  ಇನ್ನೂ ಎರಡು ಬರ್ನಿಂಗ್
ಮಷಿನ್‍ಗಳನ್ನು ಅಳವಡಿಸಲು ಸೂಚಿಸಿದರು. ಕರೋನಾ ಸಂದರ್ಭದಲ್ಲಿ
ಶವಗಳÀನ್ನು ಸುಡಲು ಜನರು ಧೀರ್ಘ ಸಮಯದವರೆಗೆ
ಕಾಯುವ ಅವಶ್ಯಕತೆಯಿಲ್ಲ. ಎಲೆಕ್ಟ್ರಿಕಲ್ ಮಷಿನ್ ಅಳವಡಿಸುವಿಕೆಯಿಂದ
ಒಂದೂವರೆಗಂಟೆಗೆ  ಒಂದು ಶವವನ್ನು ಸಂಪೂರ್ಣವಾಗಿ ಸುಟ್ಟು
ಬೂದಿಯನ್ನು ಹೊರಹಾಕುವಂತಹ ವ್ಯವಸ್ಥೆಯುಳ್ಳ ಕಟ್ಟಡ ಇನ್ನೂ
ಒಂದೂವರೆ ತಿಂಗಳಲ್ಲಿ ಲೋಕಾರ್ಪಾಣೆಯಾಗಲಿದೆ ಎಂದು ತಿಳಿಸಿದರು.
ಕುಂದವಾಡ ಕೆರೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಸಚಿವರು,
ಎನ್‍ಜಿಒ ಸಂಸ್ಥೆಯೊಂದು ಕಾಮಗಾರಿ ಅಭಿವೃದ್ಧಿಯನ್ನು ನಿಲ್ಲಿಸುವಂತಹ
ಕೆಲಸವನ್ನು ಮಾಡಿದ್ದರು, ಅದಕ್ಕೆ ಜಿಲ್ಲಾಧಿಕಾರಿ, ಎಲ್ಲಾ ಅಧಿಕಾರಿಗಳು
ಸಮಗ್ರ ದಾಖಲಾತಿಗಳು ಮತ್ತು ಮಾಹಿತಿಗಳನ್ನು ನ್ಯಾಯಾಲಯಕ್ಕೆ
ಒದಗಿಸಿದ ಪರಿಣಾಮವಾಗಿ, ಸರ್ಕಾರದ ಪರ ಆದೇಶ ಬಂದಿದೆ. ಈ ಹಿನ್ನಲೆಯಲ್ಲಿ
ಅಧಿಕಾರಿಗಳಿಗೆ ಅಭಿವೃದ್ಧಿ ಕಾರ್ಯಗಳನ್ನು
ಚುರುಕುಗೊಳಿಸುವಂತೆ ಸೂಚನೆ ನೀಡಿ ಮತ್ತೆ 15-20 ದಿನಗಳು
ಕಳೆದ ಮೇಲೆ ಮತ್ತೊಮ್ಮೆ ಕಾಮಗಾರಿ ವೀಕ್ಷಣೆ ಮಾಡುತ್ತೇನೆ
ಎಂದರು.
ಈ ಸಂದರ್ಭದಲ್ಲಿ  ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಮಹಾನಗರಪಾಲಿಕೆ
ಮಹಾಪೌರ ಎಸ್.ಟಿ ವಿರೇಶ್,  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸ್ಮಾರ್ಟ್ ಸಿಟಿ
ವ್ಯವಸ್ಥಾಪಕ ನಿದೇರ್ಶಕ ರವೀಂದ್ರ ಮಲ್ಲಾಪುರ, ಸೇರಿದಂತೆ ವಿವಿಧ
ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *