ರಾಜ್ಯ ಸರ್ಕಾರಿ ನೌಕರರ ಶತಮಾನೋತ್ಸವ ಭವನ ಹಾಗೂ ವಸತಿಗೃಹಗಳ ಲೋಕಾರ್ಪಣೆ

     ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 1920ರಲ್ಲಿ ಸ್ಥಾಪನೆಗೊಂಡು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 6.00 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಹಾಗೂ ರಾಷ್ಟ್ರದಲ್ಲೇ ಮಾದರಿ ಸಂಘಟನೆಯಾಗಿದ್ದು, ಹಲವು ವೃಂದ ಸಂಘಗಳಿಗೆ ಸಂಯೋಜನೆ ನೀಡಿರುತ್ತದೆ. ಸಂಘವು 2020ಕ್ಕೆ ನೂರು ವರ್ಷಗಳ ಶತಮಾನೋತ್ಸವ ಆಚರಣೆಗೆ ಸನ್ನದ್ಧವಾಗಿದ್ದು ಈ ಹಿನ್ನೆಲೆಯಲ್ಲಿ ನೌಕರರ ಭವನವನ್ನು ಆಧುನಿಕ ಮಾದರಿಯಲ್ಲಿ ನವೀಕರಿಸಲು ಸರ್ಕಾರವು ರೂ. 12.00 ಕೋಟಿಗಳ ಅನುದಾನವನ್ನು ಮಂಜೂರು ಮಾಡಿತ್ತು, ಭವನದ ನವೀಕರಣ ಕಾಮಗಾರಿಗಳು 2020ನೇ ಜನವರಿಯಲ್ಲಿ ಪ್ರಾರಂಭಗೊಂಡು ಪ್ರಸ್ತುತ ಪೂರ್ಣಗೊಂಡಿರುವ ಭವ್ಯ ಹಾಗೂ ಅಲಂಕೃತ ಭವನವು ಈ ಕೆಳಕಂಡ ಸವಲತ್ತುಗಳನ್ನು ಹೊಂದಿರುತ್ತದೆ.
  1. ಸುಸಜ್ಜಿತ ವಿಶಾಲವಾದ ಕಾರ್ಯಾಲಯ.
  2. ಕಾನೂನು ಸಲಹಾ ಕೇಂದ್ರ.
  3. ಬೋರ್ಡ್ ಹಾಲ್.
  4. ಅತ್ಯಾಧುನಿಕ ಮಾದರಿಯ ಮೀಟಿಂಗ್ ಹಾಲ್.
  5. ಸುಸಜ್ಜಿತವಾದ ಸುಮಾರು 350 ಆಸನವುಳ್ಳ ಸಭಾಂಗಣ.
  6. 08 ಹವಾ ನಿಯಂತ್ರಿತ ವಿ.ವಿ.ಐ.ಪಿ. ಕೊಠಡಿಗಳು.
  7. 40 ಸುಸಜ್ಜಿತ ವಸತಿಗೃಹ.
  8. ವಿಶಾಲವಾದ ವಾಹನ ನಿಲುಗಡೆ ಪ್ರದೇಶ.
  9. ವಿಶಾಲವಾದ ಪ್ರಾಂಗಣ. ..2

-2-

   ಆಧುನಿಕ ಮಾದರಿಯಲ್ಲಿ ಸುಸಜ್ಜಿತಗೊಂಡಿರುವ ಭವನವು ದಿನಾಂಕ: 01-07-2021 ರಂದು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಿ.ಎಸ್. ಯಡಿಯೂರಪ್ಪ ರವರಿಂದ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಶ್ರೀ ಗೋವಿಂದ ಎಂ.ಕಾರಜೋಳ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಪಿ. ರವಿಕುಮಾರ್ ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳು, ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *