ಶ್ರೀ ಕ್ಷೆತ್ರ ಧರ್ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊನ್ನಾಳಿ ತಾಲೂಕಿನ ಮಾಸಡಿ ವಲಯದ ಅರಕೆರೆಯ ಜೆ ಎಸ್ ಎಸ್ ಪ್ರೌಢಶಾಲೆ ಆವರಣದಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ ಮಾಡುವುದರ ಮೂಲಕ 100 ಸಸಿಗಳನ್ನು ನಾಟಿ ಮಾಡಿಸಲಾಯಿತು. ಕಾರ್ಯಕ್ರಮದ ಬಗ್ಗೆ ಮಾಹಿತಿ ನಿಡುತ್ತ ಪರಿಸರ ಸಂರಕ್ಷಣೆ ಇಂದು ಅನಿರ್ವಾವಾಗಿದೆ ಜನ ಜೀವನ ಆರೋಗ್ಯದ ದೃಷ್ಟಿಯಿಂದ ಎಲ್ಲರು ಗಿಡ ನಾಟಿ ಮಾಡುವುದರ ಜೊತೆಗೆ ರಕ್ಷಣೆಯನ್ನು ಮಾಡಬೆಕೆಂದು ಯೋಜನಾಧಿಕಾರಿ ಶ್ರೀ ಬಸವರಾಜ್ ಹೆಳಿದರು
. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ A.B.ರಂಗನಾಥ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬೆನಕಪ್ಪ ಗೌಡ್ರು, ಪಿಡಿಓ ಹನುಮಂತಮ್ಮ, ಶಿಕ್ಷಕರಾದ ವೆಂಕಟೇಶ್sir, ಒಕ್ಕೂಟದ ಅಧ್ಯಕ್ಷರಾದ ಶಂಕ್ರಮ್ಮ, ಸೇವಾಪ್ರತಿನಿಧಿ ಶಿಲ್ಪಾ, ಹಾಗೂ ಮೇಲ್ವಿಚಾರಕರಾದ ನಾಗರಾಜ್ s.ರವರು ಉಪಸ್ಥಿತರಿದ್ದರು. ಸ್ವಸಹಾಯ ಸಂಘಗಳ ಸದಸ್ಯರು ಗಿಡಗಳನ್ನು ನಾಟಿ ಮಾಡಿ ಉಳಿಸಿ ಬೆಳೆಸಿ ಪರಿಸರ ಸಂರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಸಂಕಲ್ಪವನ್ನು ಮಾಡಿದರು.