ಶಿವಮೊಗ್ಗ: ತಾಲೂಕಿನ ಹಸೂಡಿ ಜಿಪಂ ಕ್ಷೇತ್ರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳನ್ನು ನಿರಂತರವಾಗಿ ಒತ್ತುವರಿ ಮಾಡಲಾಗುತ್ತಿದ್ದು, ಈ ಒತ್ತುವರಿಯನ್ನು ತಡೆಗಟ್ಟಬೇಕು ಹಾಗೂ ಈ ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಸ್ಮಶಾನಕ್ಕೆ ಜಾಗ ಕಲ್ಪಿಸಬೇಕೆಂದು ಕೆಪಿಸಿಸಿ ಸದಸ್ಯ ಆರ್.ಮೋಹನ್ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ.
ಕೆರೆ-ಕಟ್ಟೆಗಳು ಜನರ ಬದುಕಿನ ಜೀವ ನಾಡಿಯಾಗಿದ್ದು, ಪ್ರಮುಖ ಜಲ ಸಂಪನ್ಮೂಲ ಕೇಂದ್ರಗಳಾಗಿವೆ.
ಆದರೆ ಎಲ್ಲೆಡೆ ಕೆರೆಗಳ ಒತ್ತುವರಿ ಸಾಮಾನ್ಯವಾಗಿದೆ. ಸರ್ಕಾರ ಕೆರೆಗಳನ್ನು ಮನಶ್ವೇತನಗೊಳಿಸಿ ಸಂರಕ್ಷಿಸಲು
ಒತ್ತುವರಿಯ ಸರ್ವೇ ಹಾಗೂ ತೆರವು ಕಾರ್ಯ ಕೈಗೊಂಡಿದ್ದರೂ ಸಹ ಇದು ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ.
ಕಾರ್ಯಗತವಾಗುತ್ತಿಲ್ಲ.
ಸಚಿವ ಕೆ.ಎಸ್.ಈಶ್ವರಪ್ಪನವರು ಇತ್ತೀಚಿಗೆ ಹಸೂಡಿ ಗ್ರಾಪಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕ ಕೆ.ಬಿ.ಅಶೋಕ್, ನಾಯ್ಕ, ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಈ ಜಗದ ಕೆರೆ ಒತ್ತುವರಿ ಬಗ್ಗೆ ಗಮನ ಸೆಳೆಯಲಾಗಿತ್ತು. ಆಗ ಸಚಿವರು ಪೊಲೀಸರ ಸಹಕಾರದೊಂದಿಗೆ ಒತ್ತುವರಿ ತೆರವುಗಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಜಿಪಂ ಸಿಇಓ ಹಾಗೂ ತಾಪಂ ಇಓ ಅವರಿಗೆ ಸೂಚಿಸಿದ್ದರು. ಆದರೆ ಈವರೆಗೂ ಕೆರೆ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆಡೆ ಮಾಡಿ ಕೊಡುತ್ತಿದೆ.
ಸಚಿವರನ್ನು ಕಟ್ಟುನಿಟ್ಟಿನ ಸೂಚನೆಯೋ ಅಥವಾ ಕಾಟಾಚಾರದ ಸೂಚನೆಯೋ ಎರಬ ಶಂಕೆ ವ್ಯಕ್ತವಾಗುತ್ತಿದೆ ಮೊಗಳ್ಳರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಕರೆಗಳ ಕಬಳಿಕೆಗೆ ಕಡಿವಾಣ ಇಲ್ಲದಂತಾಗುತ್ತದೆ. ಆದ್ದರಿಂದ ಯಾವುದೇ ಒತ್ತಡ ಹಾಗೂ ಪ್ರಭಾವಕ್ಕೆ ಒಳಗಾಗದೆ ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಸಂರಕ್ಷಿಸಬೇಕು.
ಕೆರೆಗಳು ಸಂರಕ್ಷಣೆಗೊಂಡಲ್ಲಿ ನರಹ ಯೋಜನೆ ಅಡಿ ಕೆರೆಗಳ ಅಭಿವೃದ್ಧಿಗೆ ಜಾಮೃತ ಯೋಜನೆ ಮಾರಿಗೊಂಡಿರುವುದರಿಂದ ನರೇಗಾ ಕಾರ್ಮಿಕರಿಗೆ ಕೆಲಸ ಸಿಕ್ಕಂತಾಗುತ್ತಿದೆ. ಕೆರೆಗಳಿಂದ ಹೆಚ್ಚಳಗೊಂಡು ನೀರಿನ ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ತಪ್ಪುತ್ತದೆ.
ಅಲ್ಲದೆ ಹಸೂಡಿ ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸರಾನವೇ ಇಲ್ಲ. ಇದರಿಂದಾಗಿ ಅಂತ್ಯಕ್ರಿಯೆಗೆ ಕಾಗಕ್ಕಾಗಿ ಹಣಗಾಡಬೇ: ಆಗಿದೆ. ಇದನ್ನು ತಪ್ಪಿಸಲು ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲೂ ಸಹಾನಕ್ಕೆ ಮಾಗ ಕಲ್ಪಿಸಬೇಕೆಂದು ಮೋಹನ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.