ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿ
ಕೈಗೊಂಡಿರುವ ನಿರಂತರ ಕುಡಿಯುವ ನೀರು ಸರಬರಾಜು (24/7)
ಯೋಜನೆಯಡಿ ಪ್ರತಿ ಮನೆಗಳಿಗೂ ಕುಡಿಯುವ ನೀರಿನ ನಳ
ಸಂಪರ್ಕವನ್ನು ಜೋಡಣೆ ಮಾಡಿ ಮೀಟರ್ ಅಳವಡಿಸಲಾಗಿದ್ದು, ಕೆಲವು
ಮನೆಯ ಮಾಲೀಕರು ಇದುವರೆಗೂ ಕುಡಿಯುವ ನೀರಿನ ನಳ
ಸಂಪರ್ಕದ ಪರವಾನಿಗೆ ಪಡೆಯದೇ ಅನಧಿಕೃತ ಸಂಪರ್ಕ
ಪಡೆದಿರುವುದು ಕಂಡು ಬಂದಿದೆ.
ಇಂತಹ ಮನೆಯ ಮಾಲೀಕರು ಕೂಡಲೇ ನಳ ಸಂರ್ಪಕವನ್ನು
ಪಡೆದುಕೊಂಡು ಸಕ್ರಮಗೊಳಿಸಿಕೊಳ್ಳಬೇಕು. ಪರವಾನಿಗೆ
ಪಡೆಯದೆ ನಳ ಸಂಪರ್ಕ ಹೊಂದಿರುವವರ ನಳ ಸಂಪರ್ಕವನ್ನು
ಕಡಿತಗೊಳಿಸಲಾಗುವುದು ಎಂದು ಹರಿಹರ ನಗರಸಭೆ
ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.