ದಾವಣಗೆರೆ ನಗರದಲ್ಲಿ ಶಾಸಕರು ವೈಯಕ್ತಿಕವಾಗಿ ನಾಗರಿಕರಿಗೆ ಉಚಿತ ಲಸಿಕೆ ನೀಡುತ್ತಿರುವ ಸುದ್ದಿ ದೇಶಾದ್ಯಂತ ಚರ್ಚೆಯಾಗುತ್ತಿದೆ, ನಗರದ ನಾಗರಿಕರು ಶಾಸಕರು ವೈಯಕ್ತಿಕವಾಗಿ ಉಚಿತ ಲಸಿಕೆ ನೀಡುತ್ತಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಇದನ್ನು ಸಹಿಸಿಕೊಳ್ಳಲಾಗದ ವಿರೋಧಪಕ್ಷದ ನಾಯಕರುಗಳು ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯವೆನಿಸಿದೇ ಇರದು.
ನಿನ್ನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಡಿಎಚ್ಒ ಮತ್ತು ಆರ್ ಸಿ ಎಚ್ ಗಳಿಗೆ ಸರ್ಕಾರದ ಲಸಿಕೆಗಳನ್ನು ವೈಯಕ್ತಿಕವಾಗಿ ಹಂಚುತೀರವ ಶಾಮನೂರು ಕುಟುಂಬಕ್ಕೆ ನೀಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾನ್ಯ ಸಂಸದರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸರಿಯಾಗಿ ಮಾಹಿತಿಯೇ ಇಲ್ಲ, ಅವರು ಕೇವಲ ತಮ್ಮ ಪಕ್ಷದ ನಾಯಕರುಗಳು ಹೇಳುವ ಮಾತುಗಳನ್ನು ಕೇಳುವುದು ಅಷ್ಟೆ ಎಂಬುದು ಇದರಿಂದ ಅರ್ಥವಾಗುತ್ತಿದೆ.
ಶಾಮನೂರು ಕುಟುಂಬದವರು ನೀಡುತ್ತಿರುವ ಉಚಿತ ಲಸಿಕೆ ಶಿಬಿರದಲ್ಲಿ, ಅವರ ಬ್ಯಾನರ್ ನಡಿ ಒಂದು ಕಡೆ ಲಸಿಕೆ ನೀಡುತ್ತಾರೆ. ಸರ್ಕಾರದಿಂದ ಒದಗಿಸುತ್ತಿರುವ ಲಸಿಕೆಗಳನ್ನು ಇನ್ನೊಂದು ಕಡೆ ನೀಡುತ್ತಿದ್ದು, ಇತರ ಬಗ್ಗೆ ಮಾಹಿತಿ ಇಲ್ಲದೆ ಸಚಿವರು ಮತ್ತು ಸಂಸದರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ಅವರು ಎಷ್ಟು ಭ್ರಮನಿರಸರಾಗಿದ್ದಾರೆ ಎಂಬುದು ಅರ್ಥವಾಗುತ್ತದೆ.
ಆರ್ಥಿಕವಾಗಿ ಸಬಲರಾಗಿರುವ ನಿಮ್ಮಗಳಿಗೂ ವೈಯಕ್ತಿಕವಾಗಿ ಉಚಿತ ಲಸಿಕೆ ಜನರಿಗೆ ನೀಡುವ ಶಕ್ತಿ ಇದ್ದರೂ, ನೀಡುವ ಮನಶಕ್ತಿ ಇಲ್ಲದಿರಬಹುದು, ಆದರೆ ನೀಡುವವರ ಬಗ್ಗೆ ಸುಳ್ಳು ಪ್ರಚಾರ ಗಳನ್ನು ಮಾಡುತ್ತಾ ಜನಗಳು ನಿಮಗೆ ನೀಡುತ್ತಿರುವ ಅಲ್ಪ ಸ್ವಲ್ಪ ಗೌರವ ಕಳೆದುಕೊಳ್ಳಬೇಡಿ.
ಕೋವಿಡ್ ಸಮಯದಲ್ಲಿ ಜನರಿಗೆ ನೆರವಾಗುವ ಬದಲು, ಜನರ ಜೊತೆ ನಿಂತು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ನಿಮ್ಮ ದರ್ಪ ನಿಲ್ಲಿಸಿ, ವೈಯಕ್ತಿಕವಾಗಿ ಉಚಿತ ನೀಡುತ್ತಿರುವ ಅಂತಹ ಕಾರ್ಯಕ್ಕೆ ನಿಮಗೆ ಬೆಂಬಲ ನೀಡಲು ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ ಈ ತರಹದ ನಡವಳಿಕೆ ಸರಿಯಲ್ಲ.
ಕೆ.ಎಲ್.ಹರೀಶ್ ಬಸಾಪುರ
ರಾಜ್ಯ ಕಾರ್ಯದರ್ಶಿ
ಕೆಪಿಸಿಸಿ ಸಾಮಾಜಿಕ ಜಾಲತಾಣ.