ನಗರದ ಪೆಸಿಟ್ ಕಾಲೇಜಿನಲ್ಲಿ 2 ವರ್ಷ ಕಾಲ
ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಇದೀಗ ಬ್ರಹ್ಮಾವರ ವಿದ್ಯಾಲಕ್ಷ್ಮಿ
ಕಾಲೇಜಿನಲ್ಲಿ ಬಿಬಿಎ+ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ
ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿರುವ ಶಿವಮೊಗ್ಗದ ಎಸ್.
ಅಭಿಷೇಕ್ ಈಗ ನವಣೆ ಕಾಳು ಎಣಿಕೆಯಲ್ಲಿ ದಾಖಲೆ ಸ್ಥಾಪಿಸಿ
ಭಾರತೀಯ ವಲ್ರ್ಡ್ ರೆಕಾರ್ಡ್ನಲ್ಲಿ ಸಾಧನೆ ಮೆರೆದಿದ್ದಾನೆ.
ಜೆಮ್ಷೆಡ್ಪುರದ ಐಡಬ್ಲ್ಯುಆರ್ ಫೌಂಡೇಷನ್ ಏರ್ಪಡಿಸಿದ್ದ
ಅಖಿಲ ಭಾರತ ಮಟ್ಟದ ನವಣೆಕಾಳು ಎಣಿಕೆ ಸ್ಪರ್ಧೆಯಲ್ಲಿ ಈ
ಪ್ರತಿಭಾನ್ವಿತ ಒಂದು ಕೆ.ಜಿ. ನವಣೆ ಅಕ್ಕಿ ಕಾಳುಗಳನ್ನು 87
ಗಂಟೆ 35 ನಿಮಿಷದಲ್ಲಿ ಎಣಿಸುವ ಮೂಲಕ ಇಂಡಿಯಾ ರೆಕಾರ್ಡ್
ಮಾಡಿದ್ದಾನೆ. ಈ ಅವಧಿಯಲ್ಲಿ ಈತ ಒಟ್ಟಾರೆ 4.04882 ನವಣೆ
ಕಾಳುಗಳನ್ನು ಎಣಿಸಿ ಅಗ್ರಸ್ಥಾನ ಗಳಿಸಿದ್ದಾನೆ.
ಈ ಪ್ರತಿಭಾನ್ವಿತ ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ
ಕಾಳಿಕಾ ಪರಮೇಶ್ವರಿ ಸೊಸೈಟಿಯ ಮಾಜಿ ಅಧ್ಯಕ್ಷರು, ಹಾಲಿ
ಸದಸ್ಯರು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರೂ ಆದ
ಎ. ಸತೀಶ್ ಮತ್ತು ಶ್ರೀಮತಿ ಸುನೀತಾ ದಂಪತಿಗಳ
ಸುಪುತ್ರ.
ಅಭಿಷೇಕ್ ಸಾಧನೆಗೆ ವಿಶ್ವಕರ್ಮ ಸಮಾಜದ ಗಣ್ಯರಾದ ಎಸ್.
ರಮೇಶ್, ಡಿ.ಸಿ. ನಿರಂಜನ್, ಪೆÇ್ರ| ಡಿ. ಸತ್ಯನಾರಾಯಣ್ ಹಾಗೂ
ಪ್ರಮುಖರಾದ ವಿ.ಕೆ. ಜೈನ್ ಇನ್ನಿತರರು ಅಭಿನಂದನೆ
ಸಲ್ಲಿಸಿದ್ದಾರೆ.