ಸಾಮಾನ್ಯ ಜನರಿಂದ ಹಿಡಿದು, ದೊಡ್ಡ
ಶ್ರೀಮಂತರು ಮತ್ತು ವಿದ್ಯಾವಂತರು
ಧೂಮಪಾನ, ಮದ್ಯಪಾನ, ತಂಬಾಕು
ಸೇವನೆಯನ್ನ ರೂಡಿಮಾಡಿಕೊಂಡಿದ್ದಾರೆ,
ಅದರಿಂದಾಗುವ ಅನಾಹುತಗಳ ಬಗ್ಗೆ
ಜನಜಾಗೃತಿ ಹೆಚ್ಚಾಗಬೇಕು. ಸಿನಿಮಾ, ದೃಶ್ಯ
ಮಾದ್ಯಮ ಧೂಮಪಾನದ ಬಗ್ಗೆ
ಪ್ರಚಾರಮಾಡುತ್ತಿವೆ, ಇದರ ವಿರುದ್ಧ
ಆರೋಗ್ಯ ಇಲಾಖೆ ಹೋರಾಟ
ಮಾಡಬೇಕಾಗಿದೆ. ಜನರಿಗೆ ವೈಜ್ಞಾನಿಕ
ಜ್ಞಾನವನ್ನ ಹೆಚ್ಚಿಸಿ, ಅವರ ಆರೋಗ್ಯವನ್ನ
ಕಾಪಾಡಬೇಕು ಎಂದು ಕರ್ನಾಟಕ ಜ್ಞಾನ
ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್.
ಸ್ವಾಮಿ ತಿಳಿಸಿದರು.
ಅವರು ನಗರದ ತರಳಬಾಳು
ನಗರದ ಒಂದನೇ ಮುಖ್ಯರಸ್ತೆಯಲ್ಲಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು
ಮಲ್ಲನಕಟ್ಟೆ ಗ್ರಾಮದ
ಸಹಯೋಗದೊಂದಿಗೆ ಆಯೋಜಿಸಿದ್ದ

“ಧೂಮಪಾನ ಮತ್ತು ತಂಬಾಕು ನಿಷೇದ”
ಕಾರ್ಯಕ್ರಮದಲ್ಲಿ ಮಾತನಾಡಿದರು.
ಧೂಮಪಾನದ ಪರಿಣಾಮಗಳು ಕೇವಲ
ಆಸ್ತಮಾ ಮತ್ತು ಕ್ಯಾನ್ಸರ್‍ಗಷ್ಟೇ
ಸೀಮಿತವಾಗಿಲ್ಲ, ದೇಹದ ಎಲ್ಲಾ
ಭಾಗಗಳನ್ನು ಪ್ರಭಾವಿಸುತ್ತದೆ ಹಾಗೂ
ಇದರ ವಿಷ ದೇಹದಲ್ಲಿ
ಉಳಿದುಬಿಡುವುದರಿಂದ ತಲೆಯ
ಕೂದಲುಗಳು ಉದುರುತ್ತವೆ, ಟಾರ್ ಎಂಬ
ಅಂಶ ರಕ್ತದಲ್ಲಿ ಸೇರಿಕೊಂಡು
ಡಿಎನ್‍ಎಯನ್ನು ಘಾಸಿಗೊಳಿಸುವ
ಸಾಧ್ಯತೆಗಳಿವೆ. ಧೂಮಪಾನ ಮಾಡುವ
ವ್ಯಕ್ತಿಯ ತನ್ನ ಜೊತೆಗೆ
ಸುತ್ತಮುತ್ತಲಿರುವ ಜನರಿಗೂ ಸಹ
ದುಷ್ಪರಿಣಾಮಗಳನ್ನ ಬೀರುತ್ತಾರೆ
ಎಂದರು.
ಧೂಮಪಾನ ಜಠರ ಮತ್ತು ಕರುಳಿನ
ಮೇಲೆ ಸರಿಪಡಿಸಲು ಆಗದಂಥ ಪರಿಣಾಮ
ಬೀರುತ್ತದೆ, ಸಿಗರೇಟಿನಲ್ಲಿರುವ
ರಾಸಾಯನಿಕಗಳು, ವಿಷದ ರೂಪದಲ್ಲಿ
ಜಠರದ ಒಳಪದರವನ್ನು ಸವೆಸುತ್ತದೆ,
ಜೀರ್ಣಾಂಗ ಏರುಪೇರಾಗುತ್ತದೆ.
ಧೂಮಪಾನ ನಾಲಿಗೆಯ ಮೇಲಿರುವ ರುಚಿ
ಗ್ರಾಹಕ ಟೇಸ್ಟ್ ಬಡ್‍ಗಳನ್ನು
ನಾಶಮಾಡುತ್ತವೆ. ಧೂಮಪಾನ ದೇಹದ

ದ್ರವ ಸಮತೋಲನದ ಮೇಲೆ ಪ್ರಭಾವ
ಬೀರುತ್ತದೆ, ಧೂಮಪಾನ ಮಾಡುವವರ
ಶ್ವಾಸಕೋಶ ದೇಹಕ್ಕೆ ಸಮರ್ಪಕವಾಗಿ
ಗಾಳಿಯನ್ನು ಒದಗಿಸಲಾಗದೇ ವ್ಯಕ್ತಿ
ಶಕ್ತಿಹೀನತೆಯನ್ನು
ಅನುಭವಿಸಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಬೀಡಿ ಕಟ್ಟುವ ಕೆಲಸದಲ್ಲಿ
ಎರಡೂವರೆ ಲಕ್ಷದಷ್ಟು ಜನರು
ತೊಡಗಿದ್ದಾರೆ, ಅವರಿಗೆ ಪರಿಹಾರ ರೂಪದಲ್ಲಿ
ನಾವು ಬೇರೊಂದು ಹುದ್ದೆಗಳನ್ನ ನೀಡಿ,
ತಂಬಾಕು ಮಾರಾಟ ಮಾಡುವ ಅಂಗಡಿಗಳ
ಮೇಲೆ ನಿಯಂತ್ರಣ ಸಾದಿಸಬೇಕಾಗಿದೆ.
ತಂಬಾಕು ಉತ್ಪನ್ನಗಳ ಮಾರಾಟದ
ಅಂಗಡಿಗಳು ಸಂಖ್ಯೆ ಹೆಚ್ಚಾಗುತ್ತಲೆ ಇವೆ.
ಜನರಲ್ಲಿ ಜಾಗ್ರತಿ ಮೂಡಿಸುವ ಕೆಲಸ
ಸಾಲದಾಗಿದೆ. ಧೂಮಪಾನ ಮುಕ್ತ
ವಾತಾವರಣವನ್ನ ಸೃಷ್ಟಿ ಮಾಡಿ, ಮುಂದಿನ
ಜನಾಂಗವನ್ನ ರಕ್ಷಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಗರೇಟ್‍ನ
ಮಾದರಿಗಳನ್ನ ಮಾಡಿ, ಭಿತ್ತಿಪತ್ರ
ಮುಖಾಂತರ ಧೂಮಪಾನ ಹಾನಿಕಾರಕ
ಎಂಬ ಸಂದೇಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸೈನ್ ಇನ್ ಕಂಪ್ಯೂಟರ್
ಸೆಂಟರ್‍ನ ಸಂತೋಷ್ ಪಟೇಲ್, ಹರೀಷ್,
ವಿದ್ಯಾರ್ಥಿಗಳಾದ ಕಾವ್ಯ. ಜಾನವಿ, ಶ್ರೀನಿವಾಸ,

ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ವೇನಿಲಾ
ಹಾಜರಿದ್ದರು.

Leave a Reply

Your email address will not be published. Required fields are marked *