ಭಾರತೀಯ ಸನಾತನ ಪರಂಪರೆ ತನ್ನ ನಿಗೂಢತೆಯನ್ನು ತೆರೆದಿಡುತ್ತಲೇ ಇರುತ್ತದೆ ಆದರೆ ಅದರತ್ತ ಚಿತ್ತವರಿಸದೇ ಮತ್ತೊಂದು ಮರೆಗುಳಿಯ ತಾತ್ಸಾರತೆಗೆ ನೇತು ಬಿದ್ದು ಪ್ರಬುದ್ದತೆಯೊಳಗಿನ ಅಪ್ರಬುದ್ದರಾಗಿ ಬಿಡುತ್ತೇವೆ, ಹೌದು ಬಹುತೇಕರಿಗೆ ಹರಟೆಗೆ ಸಮಯವಿದೆ, ಜಿಜ್ಞಾಸೆ, ಅಸೂಯೇ, ಅಸಹನೆಗಳ ಬಿತ್ತು ಕುಹಕಿಸುವುದಕ್ಕೆ ಸಮಯವಿದೆ, ಅವರೊಳಗೆ ಅವರಿಳಿದು ಸಾಗುವುದಕ್ಕೆ ಎಂದಿಗೂ ಸಮಯವಿಲ್ಲ ಅಲ್ವ..!
ಇಂತಹದೊಂದು ಅಂತರ್ಮುಖಿಯ ಪಯಣ ಕುರಿತಾಗಿ ಹಾಗೂ ಲೌಕಿಕ ಜಗತ್ತಿನ ಅರಿವಿನೊಂದಿಗೆ ಅಲೌಕಿಕ ಮಾರ್ಗಿಯಾಗುವುದು ಸ್ವಲ್ಪ ಕ್ಲಿಷ್ಟಕರ ಎನಿಸಿದರು ನಡೆದಾಗ ಮಾತ್ರವೇ ಅದರ ಅನುಭವ-ಅನಭೂತಿಯಾಗಲು ಸಾಧ್ಯ..! ಹೀಗೊಂದು ಟಿಪ್ಪಣಿಯನ್ನು ತಮ್ಮ ಮುಂದಿಟ್ಟು ಅಲೌಕಿಕದತ್ತ ನಿರ್ಭಯವಾಗಿ ಪಯಣಿಸಿದ ಸಾಮಾನ್ಯ ಮಹಿಳೆಯೋರ್ವರು ನೂರಾರು ಸಂಖ್ಯೆಯಲ್ಲಿ “ಮಾನಸಿಕ ಖಿನ್ನತೆ”ಗೆ ಒಳಗಾದವರಿಗೆ ಯಾವುದೇ ಔಷದಗಳಿಲ್ಲದೆ “ಆತ್ಮಚಿಕಿತ್ಸೆ” ಮುಖೇನ ಮರುಜೀವನ ಕಲ್ಪಿಸುತ್ತಿರುವುದು ಈ ಧ್ಯಾನ ಮಾರ್ಗದಿಂದಲೇ ಎನ್ನುವುದು ಅಚ್ಚರಿಯಾಗುತ್ತದೆ.
ಶಿವಮೊಗ್ಗದ ಗಾಂಧಿನಗರದ ಅನಕೃ ರಸ್ತೆಯಲ್ಲಿರುವ “ರೇಣು ಪೆಟ್ ಸೆಂಟರ್”ನ ಮಾಲೀಕರಾದ ಕುಮಾರಸ್ವಾಮಿಯವರ ಪತ್ನಿಯಾದ ಮಹಾಲಕ್ಷ್ಮಿಯವರೇ ಈ ಲೇಖನದ ಮುಖ್ಯ ಭೂಮಿಕೆಯಾಗಿದ್ದಾರೆ. ನಾವು ಕೂಡ ಗಮನಿಸುತ್ತಿದ್ದ ಹಾಗೆಯೇ ಅವರೊಬ್ಬರು ಸಾಮಾನ್ಯ ಮಹಿಳೆಯಾಗಿಯೇ ಕಂಡು ಬಂದರು ಇತ್ತೀಚಿನ ವರುಷಗಳಲ್ಲಿ ಒಂದಿಷ್ಟು ಬದಲಾವಣೆಗಳು ಆದ್ಯಾತ್ಮದ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿದ್ದನ್ನು ಕೇಳಿ ಉತ್ಸುಕತೆ ಶುರುವಾಯಿತು ಈ ಬಗ್ಗೆ ಕುಮಾರಸ್ವಾಮಿಯವರು ಕೂಡ ಹೇಳುತ್ತಿದ್ದರು.
ಹೀಗಾಗಿ ಮಹಾಲಕ್ಷ್ಮಿಯವರನ್ನು ಸೂರ್ಯಗಗನ ಕನ್ನಡ ದಿನ ಪತ್ರಿಕಾ ಕಛೇರಿಗೆ ಆಹ್ವಾನಿಸಿ ಒಂದಿಷ್ಟು ಮಾತನಾಡಿಸಿದ ವಿಸ್ತೃತ ಮಾಹಿತಿಯನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ.
ಮಹಾಲಕ್ಷ್ಮಿಯವರು “ದೈವಿ ಪಾರಾಯಣ” ಆಧ್ಯಾತ್ಮಿಕ ಚಿಂತನೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರವೀಣ, ವಾಸ್ತು ಶಾಸ್ತ್ರ, ಪ್ರಶ್ನಾ ಶಾಸ್ತ್ರ, ನಂತರ “ಸಿದ್ದ ಸಮಾಧಿ ಯೋಗ”ದ (SSY) ಮುಖೇನ ಧ್ಯಾನ ಕಲಿಕೆ, ಹಲವು ಥರೆಪಿ ಕಲಿಕೆಗಾಗಿ ಶಿಭಿರಗಳಲ್ಲಿ ಭಾಗವಹಿಸುವಿಕೆ, ಪಿಎಂಸಿ ಚಾನೆಲ್ ವೀಕ್ಷಣೆಯ ಮೂಲಕ ಹಲವಾರು ಗುರೂಜೀ ವರ್ಯರ ಬೇಟಿ, ಪಿಎಂಸಿ ಧ್ಯಾನದಲ್ಲಿ ಅಗಾಧವಾದ ತಲ್ಲೀನತೆ, ಕ್ರಿಯಾ ಯೋಗಿಗಳ ಸಂಧಿಸುವಿಕೆ, ಅವರುಗಳು ಹೇಳಿಕೊಟ್ಟ ಮಾರ್ಗದಲ್ಲಿ ಅಧ್ಯಯನ, ಹಲವು ಧ್ಯಾನ-ಜ್ಞಾನ ಹೊತ್ತಿಗೆಗಳ ಜಾಡು ಹಿಡಿದು ಅಭ್ಯಾಸ, ಓದುವಿಕೆಯಲ್ಲಿ ತೊಡಗಿಸಿಕೊಂಡು ಆತ್ಮವನ್ನೇ ಪುನಶ್ಚೇತನಗೊಳಿಸುವ ವಿಶಿಷ್ಠ ಸಾಧನೆ ಮೆರೆದು ಅದನ್ನು ಉಚಿತವಾಗಿ ಅನ್ಯರಿಗೂ ಅನುಭವಕ್ಕೆ ತಂದು ಶ್ರೀಲಕ್ಷ್ಮಿಯಾಗಿ ಪರಿವರ್ತನೆಯಾದ ಅಸಾಮಾನ್ಯ ಸ್ಥಿತಿಯನ್ನು ಕೇಳಿದರೆ ಎಂತಹವರಿಗೂ ನಿಬ್ಬೆರಗು ಆಗಲಾರದೇ ಇರದು.
ತಾತ ಕಾಳೇ ಗೌಡ, ಅಜ್ಜಿ ಲಕ್ಷ್ಮಮ್ಮನವರುಗಳು ಕೂಡ ಇಂತಹದೊಂದು ಸಾಧನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಅವರು ಕೂಡ ಭಕ್ತಿ-ಶ್ರಧ್ದೆಗಳಿಂದ ದೈವಿ ಪಾರಾಯಾಣ ಮಾಡುತ್ತಿದ್ದರು ಇದನ್ನು ಶ್ರೀಲಕ್ಷ್ಮಿಯವರ ಸೊದರತ್ತೆ ಆಗಾಗ್ಗೆ ಬಾಲ್ಯದಲ್ಲಿಯೇ ತಿಳಿಸುತ್ತಾ ಬಂದಿದ್ದರು ಎನ್ನುವ ಇವರು ಮೂಲತಃ ಬೇಲೂರಿನವರು ತಂದೆ ಮುದ್ದುಕೃಷ್ಣ, ತಾಯಿ ಕಮಲಮ್ಮ, ಮಧ್ಯಮ ವರ್ಗದ ದಂಪತಿಗಳ ಪುತ್ರಿಯಾಗಿರುವ ಶ್ರೀಲಕ್ಷ್ಮಿ ಪ್ರಾಥಮಿಕ, ಪ್ರೌಡಶಿಕ್ಷಣ, ಹಾಗೂ ಪದವಿಯನ್ನು ಹಿರಿಯೂರಿನಲ್ಲಿ ಮುಗಿಸುತ್ತಾರೆ 2000ನೇ ಇಸವಿಯಲ್ಲಿ ಶಿವಮೊಗ್ಗದ ಕುಮಾರಸ್ವಾಮಿಯವರೊಂದಿಗೆ ವಿವಾಹವಾಗಿ ಇದೀಗ ಎರಡು ಗಂಡು ಮಕ್ಕಳ ತಾಯಿಯಾಗಿ ಮಾತೃವಾತ್ಸಲ್ಯದ ಮಡಿಲಾಗಿ ಸುಖೀ ಜೀವನ ನಡೆಸುತ್ತಿರುವ ಇವರಿಗೆ ಪೂರ್ವಿಕರು ಗುರುದೀಕ್ಷೆ ಹೊಂದಿ ದೈವಿ ಪಾರಾಯಾಣ ಮಾಡುತ್ತಿದ್ದ ದಿಕ್ಕಿನತ್ತ ಚಿತ್ತವರಿಸಿ ಅದರಲ್ಲಿ ಮಗ್ನರಾಗುತ್ತಾರೆ, ಬರಬರುತ್ತಾ ಆದ್ಯಾತ್ಮದ ಮೊದಲ ಎಳೆ ಸೆಳೆದು ಬಿಡುತ್ತದೆ,
ಆದ್ಯಾತ್ಮ ಎನ್ನುವುದೇ ಒಂದು ಆತ್ಮದ ಚಿಂತನೆ, ಇಲ್ಲಿ ಅಂತರ್ಮುಖಿಯಾಗಿ ಪಯಣಿಸಬೇಕು, ಸಾಧಿಸಬೇಕು ಅದಾಗಲೇ ಮಾತ್ರ ಆಧ್ಯಾತ್ಮದ ಸ್ವಾದ ಸ್ವಾದಿಸಲು ಸಾಧ್ಯವಾಗುತ್ತದೆ,
ಆಧ್ಯಾತ್ಮದ ಹಾದಿ ಅಗೋಚರತೆಗಳನ್ನು ಕಟ್ಟಿಕೊಂಡಿದೆ, ಇಲ್ಲಿ ಅಕಾರಗಳಿರುವುದಿಲ್ಲ, ಎಲ್ಲವು ನಿರಾಕಾರವೇ ಆಗಿರುತ್ತದೆ, ನಿಸರ್ಗಮಯವೂ ಆಗಿರುತ್ತದೆ, ಆತಂಕ-ಭಯಮುಕ್ತವಾಗಿರುತ್ತದೆ, ಯಾವ ಜಾತಿ-ಮತ-ಪಂಥಗಳ ಬೇದಗಳಿಲ್ಲ, ಉದಾಹರಣೆಗೆ Like a Tree ಇದ್ದಂತೆ ಒಂದು ಮರದ ನೆರಳು ಹೇಗೆ ಬಂದು ನಿಂತವರಿಗೆಲ್ಲಾ ನೆರಳು ನೀಡುತ್ತದೋ.. ಅದರಂತೆ ಅಧ್ಯಾತ್ಮವೂ ಎಲ್ಲರನ್ನು ಅಪ್ಪಿಕೊಳ್ಳುತ್ತದೆ, ಆದರೆ ಮೌಡ್ಯ -ಕಂದಾಚಾರದ ಮನಸುಗಳು ಮಾತ್ರ ತಮ್ಮಗಳ ಸ್ವ ಹಿತಾಸಕ್ತಿಗಾಗಿ “ಆಧ್ಯಾತ್ಮ”ವನ್ನು ಅನುಸರಿಸಲು ಬಿಡುವುದಿಲ್ಲ, ಇದರ ಬಗ್ಗೆ ಅಸಡ್ಡೆಯ ಮನೋಭಾವತೆಯನ್ನು ತುಂಬಿ ಸರಿದು ಬಿಡುತ್ತಾರೆ, ಇದನ್ನು ಮೀರಿ “ಅಧ್ಯಾತ್ಮ” ನೋಡಿದವರು ಸಾಧನೆಗೈದವರು ಧ್ಯಾನದ ಸುಖಿಯನ್ನು ಅನುಭವಿಸುತ್ತಿದ್ದಾರೆ ಅಲ್ಲದೆ ಅದೇ ಧ್ಯಾನದ ಮೂಲಕ ಜ್ಞಾನವನ್ನು ವೃದ್ದಿಸಿಕೊಂಡು ಇತರರಿಗೂ ತಿಳಿಸುತ್ತಿರುವುದು ಪ್ರಸ್ತುತ ಬೆಳವಣಿಗೆಯಲ್ಲಿ ನಾವುಗಳು ನೊಡಬಹುದಾಗಿದೆ,
ಇಂತಹ ಸಾಲಿನಲ್ಲಿ ಶ್ರೀಲಕ್ಷ್ಮಿಯವರು ಇಂದು ದರ್ಶಿಸಿಕೊಳ್ಳುತ್ತಿದ್ದಾರೆ, ಮತ್ತಷ್ಟು, ಮತ್ತಷ್ಟು ಆಧ್ಯಾತ್ಮದ ಚಿಂತನೆಗಳು ಇವರಲ್ಲಿ ಆಹ್ವಾನೆಯಾಗುವ ಮೊದಲು ( Astrology ) ಜ್ಯೋತಿಷ್ಯ ಶಾಸ್ತ್ರ, ಪ್ರಶ್ನಾ ಶಾಸ್ತ್ರ ಹಾಗೂ ವಾಸ್ತು ಕಲಿಯಬೇಕು ಎಂದೆನಿಸುತ್ತದೆ, ಅದರಂತೆ ಬೆಂಗಳೂರು, ಮೈಸೂರಿನಲ್ಲಿ ನಡೆಸಲಾಗುತ್ತಿದ್ದ ಕ್ಲಾಸ್ ಗೆ ಸೇರಿಕೊಳ್ಳುತ್ತಾರೆ, ಇದರ ಬಗ್ಗೆ ಒಂದಿಷ್ಟು ಅಧ್ಯಯನ ಶುರುವಾಗುತ್ತಿದ್ದಂತೆ “ಸಿದ್ದ ಸಮಾದಿ ಯೋಗ” ದಿಂದ “ಸುಪ್ತ ಮನಸ್ಸಿನ ಅಧ್ಬುತ ಯಶಸ್ಸು” ಎನ್ನುವ ಧ್ಯಾನ ತರಬೇತಿಯನ್ನು ಪಡೆದು ಮನೆಯಲ್ಲಿಯೇ ಧ್ಯಾನ ಮಾರ್ಗಿಗಳಾಗಿ ಮೊದಲು ಅಭ್ಯಾಸಿಗಳಾಗುತ್ತಾರೆ.
ನಂತರ ರಾಮಚಂದ್ರ ಗುರೂಜೀಯವರ ಸಾನಿಧ್ಯದಲ್ಲಿ Past life Regression Meditation Therapy, Cyco Therapy, Ipno Therapy, ಗಳನ್ನು ಬೆಂಗಳೂರಿನ ಈಗಲ್ ಟನ್ ರೆಸಾರ್ಟ್ ನಲ್ಲಿ ಹತ್ತು ದಿನಗಳ ಕೋರ್ಸ್ ಪಡೆದು ಅಧ್ಯಯನ ನಡೆಸುತ್ತಾರೆ,
ಇದಾದ ಬಳಿಕವೇ ಶ್ರೀಲಕ್ಷ್ಮಿಯವರಿಗೆ ಅವರ ಸ್ನೇಹಿತರೋರ್ವರು ಕಳುಹಿಸಿದ ಪಿಎಂಸಿ ( Pyramid Meditation Channel ) ಲಿಂಕ್ ಸಿಗುತ್ತದೆ ಇಲ್ಲಿಂದ ಪಿರಮಿಡ್ ಧ್ಯಾನ ಒಳ ಹರಿವು ಅರಿವಿಗೆ ಬರುತ್ತದೆ ಇದನ್ನು ಮಾಡಬೇಕೆಂದುಕೊಂಡು ಧ್ಯಾನಸಕ್ತರಾಗಿ ಅದರೊಳಗೆ ಮಿಂದು ಬಿಡುತ್ತಾರೆ, ಮೊದಲು ಆರಂಭಗೊಂಡಿದ್ದು 15 ನಿಮಿಷಗಳ ಧ್ಯಾನ ನಂತರ ಪಿರಮಿಡ್ ಧ್ಯಾನದಿಂದ ಗೊತ್ತಾಗಿದ್ದು ಧ್ಯಾನಕ್ಕೆ ಯಾವುದೇ ಕನಿಷ್ಠ ಸಮಯಗಳಿಲ್ಲ ಗರಿಷ್ಠ ಸಮಯದವರೆಗೂ ಧ್ಯಾನದಲ್ಲಿ ತಲ್ಲೀನತೆ ಹೊಂದಬಹುದು ಎಂದು ಶ್ರೀಲಕ್ಷ್ಮಿಯವರು ಇದನ್ನು ಮನದಟ್ಟು ಮಾಡಿಕೊಂಡು ನಿರಂತರವಾಗಿ ದಿನದಲ್ಲಿ ಸಿಕ್ಕ ಸಮಯವನ್ನೆಲ್ಲಾ ಧ್ಯಾನಕ್ಕೆ ಮೀಸಲಿರಿಸುತ್ತಾರೆ.
ಹೀಗೆ ಅವರು ಧ್ಯಾನದಲ್ಲಿ ಮುಂದುವರೆದಂತೆಲ್ಲಾ ಅಲೌಕಿಕ ಮಾರ್ಗದ ಬಾಗಿಲು ತರೆದಿಡುತ್ತದೆ, ಅಗೋಚರತೆಗಳು ಅರಿವಾಗುತ್ತದೆ,* ಇದೊಂದು “ಆತ್ಮದ ಶೋದನೆ” ಯಾಗಿದ್ದು ಧ್ಯಾನದಲ್ಲಿ ಅಪಾರವಾದ ಶಕ್ತಿ ಇದೆ, ಭಯ-ಆತಂಕಗಳನ್ನು ದೂರಗೊಳಿಸುತ್ತದೆ ಎನ್ನುವ ಕೊನೆಯ ತೀರ್ಮಾನಕ್ಕೆ ಬಂದು ಬಿಡುತ್ತಾರೆ ಶ್ರೀಲಕ್ಷ್ಮಿ.
ಅವರನ್ನು ಪ್ರಶ್ನಿಸುತ್ತಲೇ ಇರುವ ಸಂದರ್ಭದಲ್ಲಿ ಅವರು ಹೇಳುತ್ತಿದ್ದ ಪ್ರತಿ ಮಾತುಗಳು ಅಕ್ಷರಶಃ ಬೇರೊಂದು ಲೋಕದಲ್ಲಿ ವಿಹರಿಸುವಂತೆ ಮಾಡಿತ್ತು, ನಮ್ಮ ಜೀವನ ನಮ್ಮ ಕೈಲಿದೆ, ನಮ್ಮೊಳಗಿನ ಭಾವನೆಗಳು ಬದಲಾಗದಿದ್ದರೆ ಎಂದಿಗೂ ಬದುಕು ಬದಲಾಗುವುದಿಲ್ಲ ಎಂದು ಅವರು ನಿರರ್ಗಳತೆಯಿಂದ ನುಡಿಯುತ್ತಾರೆ,
ಕಷ್ಟಗಳು ಸಾಮಾನ್ಯ ಇದಕ್ಕೆ ಹೊಣೆಗಾರರು ಅನ್ಯರಲ್ಲ ನಾವೇ ಹೊಣೆಗಾರರು ಎನ್ನುವುದನ್ನು ಅವಲೋಕಿಸಿದರೆ ತಿಳಿಯುತ್ತದೆ, ಈ ಅವಲೋಕನಕ್ಕೂ ಏಕಾಗ್ರತೆ ಅಗತ್ಯ ಇದು ಸಾಧಿಸಬೇಕೆಂದರೆ ಧ್ಯಾನ ಮುಖ್ಯ, ಧ್ಯಾನ ಮುಂದುವರೆದರೆ ಜ್ಞಾನ ಲಭಿಸುತ್ತದೆ, ಏಕಾಗ್ರತೆ ಇಲ್ಲದೆ ಜ್ಞಾನವೂ ಅಪ್ರಯೋಜನವಾಗುತ್ತದೆ ಹೀಗಾಗಿ ಧ್ಯಾನ ಬಹುಮುಖ್ಯವಾಗಿ ಅಳವಡಿಸಿಕೊಂಡರೆ ಮಾತ್ರ ಅಂತರಜ್ಞಾನವು ವೃದ್ದಿಸಿ ಪ್ರಯೋಜನವಾಗುತ್ತದ ಎನ್ನುತ್ತಾರೆ ಶ್ರೀಲಕ್ಷ್ಮಿ.
ಹೀಗೆ ನಿರರ್ಗಳತೆಯಿಂದ ಆಧ್ಯಾತ್ಮವನ್ನು ಕುರಿತಾಗಿ ಬಣ್ಣಿಸುವ ಹಾಗೂ ವಿಶ್ಲೇಷಿಸುವ “ಪಿರಮಿಡ್ ಧ್ಯಾನ ಶಿಕ್ಷಕಿ” ಯಾಗಿರುವ ಇವರು ದಿನದ 24 ಗಂಟೆಗಳಲ್ಲಿ ಐದು ಗಂಟೆಗಳಾದರೂ ಅಭ್ಯಾಸಿಗಳಾಗುತ್ತಾರೆ, ಅಲ್ಲದೆ ತಮ್ಮಲ್ಲಿರುವ ಧ್ಯಾನ ಪುಸ್ತಗಳನ್ನು ಓದಿ ಮನನ ಮಾಡಿಕೊಂಡು ಸಾಗರದ ತಳದಿ ಶೋಧಿಸುವಂತೆ ಆತ್ಮದೊಳಗೆ ಪಯಣಿಸುತ್ತಲಿ ಜೀವಿತದ ಅಂಧಕಾರವನ್ನು ತೊಳೆದು ಹಾಕುವ ಧ್ಯಾನ ಕೃಷಿಯಲ್ಲಿ ಸಾಗುತ್ತಿರುವುದು ವಿಶೇಷವೆನಿಸಿದೆ,
ಸಾಕಷ್ಟು ಗೃಹಿಣಿಯರು ಹೇಳಿಕೊಳ್ಳುವಂತೆ ಸಾಂಸಾರಿಕ ಜವಾಬ್ದಾರಿಗಳಿಗೆ ಸಮಯ ಸಾಕೋಗಲ್ಲ, ಇನ್ನೂ ಈ ಧ್ಯಾನ-ಆಧ್ಯಾತ್ಮ ಕಡೆ ನಾವೆಲ್ಲಿ ಗಮನಹರಿಸುವುದಕ್ಕೆ ಸಾಧ್ಯವೆಂದು ನೆರೆ-ಹೊರೆಯ ಜಗುಲಿಕಟ್ಟೆಗಳಲ್ಲಿ ಅಥವಾ ಸರಣಿ ಧಾರವಾಹಿ ವೀಕ್ಷಣೆಯಲ್ಲಿ ಚಿತ್ತವರಿಸುವುದಕ್ಕೆ ತಮ್ಮ ಸಮಯವನ್ನು ಕಾಯ್ಸಿರಿಸಿಕೊಳ್ಳುತ್ತಾರೆ, ಇಂತಹವರಿಗೆ ಶ್ರೀಲಕ್ಷ್ಮೀ ಮಾದರಿಯಾಗಿ ಬಿಡುತ್ತಾರೆ.
“ಮನಸ್ಸಿದ್ದರೆ ಮಾರ್ಗ” ಎನ್ನುವಂತೆ ಆಧ್ಯಾತ್ಮದ ಮಡಿಲಿನಲ್ಲಿರುವ ಇಂತಿವರೇ ಹೇಳುವಂತೆ “ಆತ್ಮಶಕ್ತಿ ಜಾಗೃತಿ” ಯಾದರೆ ಎಲ್ಲವನ್ನು ನಿಯಂತ್ರಿಸಲು ಸಾಧ್ಯ ಹಾಗೂ ನಮ್ಮಲ್ಲಿರುವ ಆಲೋಚನೆಗಳೇ ನಮ್ಮ ಜೀವನದ ತೀರ್ಪುಗಳನ್ನು ತಳೆದು ಅಂತಹ ಆಲೋಚನೆಗಳಿಗೆ ಸಿಲುಕಿ ಬಿಡುತ್ತೇವೆ ಎನ್ನುವ ಶ್ರೀಲಕ್ಷ್ಮಿ ನಾವುಗಳು “ಸಾವನ್ನು ಕೂಡ ಒಪ್ಪಿಕೊಳ್ಳದೇ (Agree) ಹೋದರೆ ಅದೆಂದಿಗೂ ಸಂಭವಿಸಲಾರದು, ಯಾವಾಗ ಇನ್ನೇನು ಸಾವು ಖಂಡಿತ ಎಂದು ಒಪ್ಪಿದಾಗ ಮಾತ್ರವೇ ಅದು ಸಂಭವಿಸುತ್ತದೆ, ಹೀಗಾಗಿ ನಮ್ಮಲ್ಲಿರುವ ಆಲೋಚನೆಗಳಿಗೂ ಒಂದು ಸುಪ್ತ ಶಕ್ತಿ ಇದೆ ಎನ್ನುವುದು ತಿಳಿಯುವುದು ಧ್ಯಾನ ಹಾಗೂ ಜ್ಞಾನ ಮಾರ್ಗದಿಂದಲೇ ಆಗಿದೆ.
ಸಮಾಜಕ್ಕೆ ಏನು ಕೊಡುತ್ತೇವೋ..? ಅದು ವಾಪಾಸ್ಸು ಯಾವ ಮಾರ್ಗದಲ್ಲಾದರೂ ಬಂದು ಬಿಡುತ್ತದೆ ಎನ್ನುವ ಸತ್ಯದ ಅರಿವು ನಮ್ಮಗಳಿರಲೇಬೇಕು ಸಮಚಿತ್ತ ಭಾವವೇ ಆಗಲಿ, ಸಂತೋಷ-ಆನಂದಮಯವೇ ಆಗಿರಲಿ ಲಭಿಸಬೇಕೆಂದರೆ ಭಾವಗಳು ಎಂದಿಗೂ ಅಚಂಚಲತೆಯಿಂದ ಕೂಡಿರಕೂಡದು ಎಂದು ಉಪನ್ಯಾಸ ಮಾಲಿಕೆಯಂತೆ ಒಂದರ ಹಿಂದೊಂದರಂತೆ ವಿವರಿಸುವ ಶ್ರೀಲಕ್ಷ್ಮಿಯವರು ಓರ್ವ ಸಾಧನಾಶೀಲ ಮಹಿಳೆಯಾಗಿ ಬದಲುಗೊಂಡಿರುವುದು ಆಚ್ಚರಿ ತರಿಸಬಲ್ಲದು.
ಹಿರಿಯರು ಹೇಳಿದಂತೆ ಕಲಿತಿದ್ದನ್ನು ಕಲಿಸುಬಿಡು, ಬೆಳೆದು ಬೆಳೆಸಿಬಿಡು ಎನ್ನುವ ಮಾತಿನಂತೆ ಆಧ್ಯಾತ್ಮದ ತಳಹದಿಯಲ್ಲಿ ಕಲಿತಿರುವ ಎಲ್ಲಾ ಮಾರ್ಗಗಳನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿರುವ ಶ್ರೀಲಕ್ಷ್ಮೀ ಯವರು ಈ ದಿನಮಾನದ ಕೋವಿಡ್-19 ನ ಸಂಧಿಗ್ದತೆಯನ್ನು ಅರಿತು ಜನಸಾಮಾನ್ಯರ ಭಯ-ಆತಂಕವನ್ನು ದೂರಗೊಳಿಸಲು ಬೇಟಿಯಾದ ಎಲ್ಲರಿಗೂ ಧ್ಯಾನ ಮಾರ್ಗೋಪಾಯಗಳನ್ನು ಹೇಳಿಕೊಡುತ್ತಿದ್ದಾರೆ, ಅದಲ್ಲದೆ “ಸಾವಿತ್ರಿ ಭಾಯಿ ಪುಲೆ ಶಿಕ್ಷಕಿಯರ ಸಂಘ”ದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗಾಗಿ ನಿರಂತರವಾದ 41 ದಿನಗಳ ಕಾಲ ಆನ್ ಲೈನ್ ಧ್ಯಾನ ಶಿಭಿರವನ್ನು ಆಯೋಜಿಸಿ, ಪಿರಮಿಡ್ ಧ್ಯಾನದ ಹಾಗೂ ಧ್ಯಾನ ಕುರಿತಾದ ಜ್ಞಾನದ ಬಗ್ಗೆ ಪಿರಮಿಡ್ ಧ್ಯಾನ ಶಿಕ್ಷಕಿಯಾಗಿ ತರಬೇತಿ ನೀಡಿದ್ದಾರೆ.
“ಸಂಜೀವಿನಿ ಆಧ್ಯಾತ್ಮ ಚಿಕಿತ್ಸಾ ಕೇಂದ್ರ” ತೆರೆದು ಧ್ಯಾನವನ್ನು ಉಚಿತವಾಗಿ ಹೇಳಿಕೊಡುತ್ತಿರುವುದು ಅಲ್ಲದೆ “ಮಾನಸಿಕ ಖಿನ್ನತೆ” ಗೆ ಒಳಗಾಗಿರುವವರಿಗೆ ಯಾವ ಔಷದೋಪಚಾರಗಳಿಲ್ಲದೆ ಹಲವು ಥೆರಪಿ, ಕೌನ್ಸಿಲಿಂಗ್, ಹಾಗೂ ಧ್ಯಾನದ ಮಾರ್ಗಗಳಿಂದಲೇ ಯಥಾಸ್ಥಿತಿಗೊಳಿಸಿ ಆರೋಗ್ಯವಂತರನ್ನಾಗಿ ಪರಿವರ್ತಿಸುತ್ತಿರುವ ಶ್ರೀಲಕ್ಷ್ಮೀಯವರು ನಿಜಕ್ಕೂ ಸಾಧನಶೀಲ ಮಹಿಳೆಯಾಗಿ ಮಲೆನಾಡಿನಲ್ಲಿ ಸದ್ದಿಲ್ಲದೆ ಆದ್ಯಾತ್ಮ ಸೇವೆಯನ್ನು ಮಾಡುತ್ತಿದ್ದಾರೆ.
ಧ್ಯಾನದ ಬಹು ಅಭ್ಯಾಸಿಯಿಂದಾಗಿ ನಿಸರ್ಗದೊಂದಿಗೆ ಸಮಾಲೋಚನೆಗಳು ನಡೆಸಬಹುದು, ಆರೋಗ್ಯಕರ ಸಮಾಜವನ್ನು ನೋಡಬಹುದು, ಸ್ವತಃ ಶಾಂತತೆ ತೃಪ್ತಿ-ಪ್ರೇಮ ಭಾವದಿಂದ ನೋಡಬಹುದಾಗಿದೆ. ಏಕಾಗೃತೆಯನ್ನು ಸಾದಿಸಿ ಜ್ಞಾನವನ್ನು ವೃದ್ದಿಸಿಕೊಂಡು ಸುಂದರ ಸಮಾಜ ನಿರ್ಮಾಣಕ್ಕೆ ಧ್ಯಾನಶಿಲ್ಷಿಗಳಾಗಬಹುದು ಎನ್ನುವ ಶ್ರೀಲಕ್ಷ್ಮೀಯವರ ಬದುಕು ಬದಲಾಗಿದೆ, ಆಧ್ಯಾತ್ಮದ ಶೋಧನೆಯಲ್ಲಿ ತೊಡಗಿಸಿಕೊಂಡಿರುವುದು ದೈವ ಸಂಕಲ್ಪವೇ ..? ಎನ್ನುವುದು ಅವರಲ್ಲಿನ ಪ್ರಶ್ನಾರ್ಹವಾಗಿದೆ.
ಇಂತಹದೊಂದು ಸಾಧನೆಯಲ್ಲಿರುವ ಶ್ರೀಲಕ್ಷ್ಮೀಯವರು ಒಮ್ಮೆ ಅವರ ಸಂಬಂಧಿಗಳ ಮನೆಯ ನಾಮಕರಣದ ಕಾರ್ಯಕ್ರಮಕ್ಕಾಗಿ ಹೊಸಪೇಟೆಗೆ ತೆರಳಿರುತ್ತಾರೆ, ಅಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದ್ದ ಮನೆಯ ಮಹಡಿಯ ಮೇಲಿಂದ ಅಚಾನಕ್ ಆಗಿ ಕೆಳಗೆ ಉರುಳಿ ಬೀಳುತ್ತಾರೆ, ಎಲ್ಲರೂ ಧಾವಂತದಿಂದ ಓಡಿ ಬಂದು ಹದಿನಾಲ್ಕು ಅಡಿ ಎತ್ತರದಿಂದ ಬಿದ್ದ ಶ್ರೀಲಕ್ಷ್ಮೀಯವರನ್ನು ಸಾವಧಾನಿಸುತ್ತಾರೆ, ಒಂದಿಷ್ಟು ತರಚಿದ ನೋವಿನಲ್ಲಿ ಒಮ್ಮೆಲೆ ಎದ್ದು ಎಲ್ಲರನ್ನು ನಗಿಸುತ್ತಲೇ ಮಾತಾಡಿ ಸಾಮಾನ್ಯವಾಗಿ ನಡೆದುಕೊಂಡು ಮನೆಯೊಳಗೆ ಸಾಗುತ್ತಾರೆ, ಇದನ್ನು ನೋಡಿದಾಗ ಎಲ್ಲರೂ ಮೂಕ ವಿಸ್ಮಿತಗೊಂಡು, ಈ ಘಟಿತ ಘಟನೆಯನ್ನು ಮೆಲುಕು ಹಾಕುತ್ತಾರೆ, ಏನೋ ಅನಾಹುತ ಸಂಭವಿಸಿ ಬಿಡ್ತು ಎನ್ನುವಾಗಲೇ ಶ್ರೀಲಕ್ಷ್ಮೀ ಅನಾಯಾಸವಾಗಿರುವುದನ್ನು ಕಂಡು ಹೇಗೆ ಎಂದು ಪ್ರಶ್ನಿಸುವುದಕ್ಕೆ ಶುರು ಮಾಡುವ ಅನೇಕರಿಗೆ ಉತ್ತರಿಸುತ್ತಾ ಇದಕ್ಕೆ ಭಯಮುಕ್ತವೇ ಕಾರಣ ಎನ್ನುತ್ತಾರೆ, ನನಗೆ ಮೇಲಿಂದ ಬೀಳುವಾಗಲು ಭಯ ಎದುರುಗಾಣಲಿಲ್ಲ ಹೀಗಾಗಿ ನನಗೇನು ಆಗಲಿಲ್ಲವಷ್ಟೆ ಎಂದು ಹೆಳುವ ಶ್ರೀಲಕ್ಷ್ಮೀಯವರಿಗಿರುವ ಧ್ಯಾನದ ಒಳ ಅನಾವರಣದ ಮತ್ತೊಂದು ರೂಪ ಗೊತ್ತಾಗುತ್ತದೆ.
ಇಂತಹ ಅನೇಕತೆಗಳಲ್ಲಿ ಆತ್ಮವನ್ನು ಜಾಗೃತಗೊಳಿಸಿ, ಅಧ್ಯಾತ್ಮದ ಹೊತ್ತಿಗೆಗಳನ್ನು ಓದಿ, ಸಂಪೂರ್ಣ ಧ್ಯಾನಮಾರ್ಗಿಯಾಗಿರುವ ಶ್ರೀಲಕ್ಷ್ಮೀ ಬದಲಾದ ಬದುಕಿನಲ್ಲಿ ಅಧ್ಯಾತ್ಮದ ಶ್ರೇಷ್ಟತೆಯನ್ನು ಸಾದಿಸಿ ಮಲೆನಾಡಿನಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ
-ಗಾರಾ.ಶ್ರೀನಿವಾಸ್