ಶ್ರೀ ಕ್ಷೆತ್ರ ಧರ್ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ವಲಯದ ರಾಂಪೂರದ ಶ್ರೀ ಹಾಲಸ್ವಾಮಿ ಮಠದ ಆವರಣದಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ ಮಾಡುವುದರ ಮೂಲಕ 100 ಸಸಿಗಳನ್ನು ನಾಟಿ ಮಾಡಿಸಲಾಯಿತು.ಮಠದ ಪಿಠಾಧ್ಯಕ್ಷರಾದ ಶ್ರೀ ಹಾಲಸ್ವಾಮಿ ಸ್ವಾಮಿಜಿಗಳು ಕಾರ್ಯಕ್ರಮ ಉಧ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ಮೂಲಕ ಅನೆಕ ಸಮಾಜಮುಖಿ ಕಾರ್ಯಕ್ರಮ ಮಾಡುತಿದ್ದು ಮಹಿಳೆಯರಲ್ಲಿ ಆರ್ಥಿಕ ಸಬಲಿಕರಣ ಬೆಳೆಸುವುದರ ಮೂಲಕ ಬ್ಯಾಂಕಿಂಗ್ ವ್ಯಹಾರದ ಜ್ಞಾನ ತುಂಬಿಸಿ ಆರ್ಥಿಕ ಸಬಲಿಕರಣ ಮಾಡುತ್ತಿದ್ದಾರೆ, ಅದಲ್ಲದೆ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಯೋಜನಾಧಿಕಾರಿ ಶ್ರೀ ಬಸವರಾಜ್ ಆರ್ ರವರು ಪೂಜ್ಯ ಖಾವಂದರ ಆಶಯದಂತೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು,ಹತ್ತು ಕಡೆಗಳಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ ಮಾಡುವುದರ ಮೂಲಕ ಸಸಿ ನಾಟಿ ಮಾಡಿಸಿ ಜನರಲ್ಲಿ ಪರಿಸರ ಕಾಳಜಿ ಮೂಡಿಸಲಾಗುತ್ತಿದೆ ಎಂದರು ಗ್ರಾಮ ಪಂಚಾಯತ ಸದಸ್ಯ ಶ್ರೀ ಶ್ರೀನಿವಾಸ, ಒಕ್ಕೂಟದ ಉಪಾಧ್ಯಕ್ಷೆ ಮಮತಾ ಭಾಗವಹಿಸಿದ್ದರು. ಮೆಲ್ವಿಚಾರಕ ನಾಗರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಸೇವಾಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು. 100 ಅರಣ್ಯದ ಸಸಿ ನಾಟಿ ಮಾಡಲಾಯಿತು.