ಎಸ್.ಎಸ್.ನಾರಾಯಣಹಾರ್ಟ್ ಸೆಂಟರ್‍ಕರ್ನಾಟಕದದಾವಣಗೆರೆಯಲ್ಲಿರುವತನ್ನಆಸ್ಪತ್ರೆಆವರಣದಲ್ಲಿ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸಾ ವಿಭಾಗ ಆರಂಭಿಸಿದೆ. ಮಿನಿಮಲ್ ಇನ್‍ವೇಸಿವ್ ಕಾರ್ಡಿಯಾಕ್ ಸರ್ಜರಿಅಥವಾ ಕೀ ಹೋಲ್ ಹೃದಯ ಶಸ್ತ್ರಚಿಕಿತ್ಸೆ ಹೃದಯ ರೋಗಗಳಿಗೆ ಚಿಕಿತ್ಸೆ ನೀಡುವ ವಿನೂತನಅನುಶೋಧನೆಯಾಗಿದೆ. ಇದಕ್ಕಾಗಿಯೇ ವಿಶೇಷ ವಿಭಾಗವನ್ನುತೆರೆಯಲಾಗಿದ್ದು, ಇದುಅತ್ಯಾಧುನಿಕ ಹಾಗೂ ತೀರಾಅತ್ಯುನ್ನತ ಸಲಕರಣೆಗಳು ಮತ್ತು ವ್ಯಾಪಕಅನುಭವಇರುವತಂಡವನ್ನು ಒಳಗೊಂಡಿದೆ.
ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆ ಹೃದ್ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ಬಹಳಷ್ಟು ಪ್ರಯೋಜನಕಾರಿ. ಕೆಲ ಬಗೆಯ ಹೃದ್ರೋಗಗಳಿಗೆ ಕನಿಷ್ಠ ಗಾಯದ ಶಸ್ತ್ರಚಿಕಿತ್ಸೆಯೇಅತ್ಯಂತ ಸೂಕ್ತವಾಗಿದೆ. ಇಲ್ಲಿ ಶಸ್ತ್ರಚಿಕಿತ್ಸೆಯನ್ನುರೋಗಿಯದೇಹದಲ್ಲಿ ಸಣ್ಣಗಾತ್ರದರಂಧ್ರ ಮಾಡಲಾಗುತ್ತದೆ (ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲಿ ಮಾಡುವದೊಡ್ಡ ಪ್ರಮಾಣದಛೇದನಅಥವಾಗಾಯದ ಬದಲಾಗಿ). ಈ ಸಣ್ಣಗಾತ್ರದ ರಂಧ್ರಗಳನ್ನು ವಿಶೇಷ ಸರ್ಜಿಕಲ್ ಸಾಧನಗಳನ್ನು ಬಳಸಿಕೊಂಡು ಮಾಡಲಾಗುತ್ತದೆ. ಕನಿಷ್ಠ ಗಾಯದ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ಮಾಡುವಛೇದನ ಸುಮಾರುಎರಡರಿಂದ ಮೂರು ಇಂಚು ಮಾತ್ರಆಗಿರುತ್ತದೆ. ಆದರೆಸಾಮಾನ್ಯವಿಧಾನದಲ್ಲಿಆರರಿಂದಎಂಟು ಇಂಚು ಉದ್ದದಗಾಯ ಮಾಡಬೇಕಾಗುತ್ತದೆ. ಹೀಗೆ ಈ ಗಾಯ ವಾಸಿಯಾಗಲು ಬೇಕಾಗುವ ಸಮಯತೀರಾಕಡಿಮೆ.
ದಾವಣಗೆರೆತಂಡದಲ್ಲಿಇಂಥ ಶಸ್ತ್ರಚಿಕಿತ್ಸೆಯನ್ನು ಹೃದ್ರೋಗ ಶಸ್ತ್ರಚಿಕಿತ್ಸಾ ಸಲಹಾತಜ್ಞಡಾ|| ಮುರಳೀಬಾಬು, ಡಾ||ರವಿವರ್ಮ ಪಾಟೀಲ್, ಹೃದ್ರೋಗ ಅರಿವಳಿಕೆತಜ್ಞಡಾ.ಪ್ರಶಾಂತ್‍ಹಾಗೂ ಡಾ.ಸುಜಿತ್‍ಎಚ್.ಎಂ. ಅವರನ್ನು ಒಳಗೊಂಡ ತಂಡ ನಿರ್ವಹಿಸುತ್ತದೆ.
ಹೊಸ ಸೌಲಭ್ಯದ ಬಗ್ಗೆ ವಿವರಗಳನ್ನು ನೀಡಿದವ್ಯವಸ್ಥಾಪಕ ನಿರ್ದೇಶಕ ಶ್ರೀ ಶಶಿಕುಮಾರ್ ಪಟ್ಟಣಶೆಟ್ಟಿ “ಭಾರತದಲ್ಲಿ ಕೇವಲ ದೊಡ್ಡನಗರಗಳಲ್ಲಿ ಮಾತ್ರವಲ್ಲದೇದೇಶಾದ್ಯಂತ ಹೃದ್ರೋಗ ಹೆಚ್ಚುತ್ತಿದೆ. ಪ್ರತಿಯೊಂದು ಬಗೆಯ ಹೃದ್ರೋಗಗಳಿಗೂ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಬೇಕಾಗುವುದಿಲ್ಲ. ಈ ವಿಶೇಷ ಶಸ್ತ್ರಚಿಕಿತ್ಸಾ ವಿಧಾನದಮೂಲಕ ನಾವು ನಾರಾಯಣ ಹೆಲ್ತ್‍ನಲ್ಲಿರುವಕ್ಲಿನಿಕಲ್ ಪರಿಣತಿಯನ್ನು ನಗರಗಳಿಂದಾಚೆಗೂ ವಿಸ್ತರಿಸುತ್ತಿದ್ದೇವೆ. ಈ ವಿಶೇಷ ವಿಭಾಗವುದಾವಣಗೆರೆ ಮತ್ತು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಉತ್ತಮ ವೈದ್ಯಕೀಯಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲುದೊಡ್ಡ ನಗರಗಳಿಗೆ ಪ್ರಯಾಣಿಸುವುದನ್ನುತಪ್ಪಿಸುತ್ತದೆ” ಎಂದು ಹೇಳಿದರು.
ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆಯ ಲಾಭಗಳು
- ಉತ್ತಮ ಸೌಂದರ್ಯ, ಎದೆಯಎದುರುಗಾಯದ ಕಲೆ ಇಲ್ಲ
- ಸ್ಟೆರ್ನಂ (ಎದೆಯ ಎಲುಬು) ಕತ್ತರಿಸುವುದಿಲ್ಲ
- ಕಡಿಮೆ ನೋವು
- ರಕ್ತದಕಡಿಮೆಅಗತ್ಯತೆ
* ಶೀಘ್ರ ಗುಣಮುಖ
ನಾರಾಯಣ ಹೆಲ್ತ್ ಬಗ್ಗೆ
ವೈದ್ಯಕೀಯಜಗತ್ತುಒದಗಿಸಬಹುದಾದಎಲ್ಲತೃತೀಯ ಹಂತದಆರೈಕೆ ಸೌಲಭ್ಯಗಳನ್ನು ಹೊಂದಿರುವ ನಾರಾಯಣ ಹೆಲ್ತ್, ಎಲ್ಲರಿಗೂಒಂದೇ ನಿಲುಗಡೆಯಆರೋಗ್ಯಸೇವಾಗಮ್ಯತಾಣವಾಗಿದೆ. ಡಾ.ದೇವಿಶೆಟ್ಟಿಯವರು ಆರಂಭಿಸಿದ ನಾರಾಯಣ ಹೆಲ್ತ್‍ಗ್ರೂಪ್ ಬೆಂಗಳೂರಿನಲ್ಲಿ ಕೇಂದ್ರಕಚೇರಿ ಹೊಂದಿದ್ದು, ಕಾರ್ಯಾಚರಣೆಯಲ್ಲಿರುವ ಹಾಸಿಗೆ ಸಂಖ್ಯೆಆಧಾರದಲ್ಲಿಇಡೀದೇಶದಲ್ಲೇಎರಡನೇಅತಿದೊಡ್ಡಆರೋಗ್ಯಸೇವಾ ಸಂಸ್ಥೆಯಾಗಿದೆ. ಮೊದಲ ಸೌಲಭ್ಯವನ್ನು 2000ನೇ ಇಸ್ವಿಯಲ್ಲಿ ಅಂದಾಜು 225 ಕಾರ್ಯಾಚರಣೆ ಬೆಡ್‍ಗಳೊಂದಿಗೆ ಎನ್‍ಎಚ್ ಹೆಲ್ತ್ ಸಿಟಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ಕಂಪನಿ ಇಂದು ಮಲ್ಟಿಸ್ಪೆಷಾಲಿಟಿತೃತೀಯ ಹಂತದ ಮತ್ತು ಪ್ರಾಥಮಿಕಆರೋಗ್ಯಸೇವಾ ಸೌಲಭ್ಯಗಳನ್ನು ಒದಗಿಸುವ ಸರಣಿಯಾಗಿ ಬೆಳೆದಿದ್ದು, ಭಾರತದಲ್ಲಿ 23 ಆಸ್ಪತ್ರೆ ಮತ್ತು 7 ಹೃದ್ರೋಗಚಿಕಿತ್ಸಾ ಕೇಂದ್ರಗಳನ್ನು ಹೊಂದಿದೆ. ಏಕೈಕ ಸಾಗರೋತ್ತರಆಸ್ಪತ್ರೆಕೇಮನ್ ದ್ವೀಪದಲ್ಲಿದೆ. ಒಟ್ಟು 5900 ಕಾರ್ಯಾಚರಣೆ ಬೆಡ್‍ಗಳು ಎಲ್ಲ ಕೇಂದ್ರಗಳಲ್ಲಿವೆ. ಜತೆಗೆ 6800 ಹಾಸಿಗೆಗಳಿಗೆ ವಿಸ್ತರಿಸುವ ಸಾಮಥ್ರ್ಯವನ್ನು ಹೊಂದಿದೆ. (ವಿವರಗಳಿಗೆ ಭೇಟಿ ನೀಡಿ:
ಹೆಚ್ಚಿನ ಮಾಹಿತಿಗಾಗಿಕರೆಮಾಡಿ : 9901662045
9980571756