ಇಂದು ನಗರದ ಮಿಲ್ಲತ್ ಕಾಲೇಜ್ ಆವರಣದಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಉಚಿತ ಕೊರೊನ ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ಸಹ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಮಿಲ್ಲತ್ ಕಾಲೇಜಿನ ಆಡಳಿತಾಧಿಕಾರಿ ಸೈಯದ್ ಅಲಿ, ಡಾ. ಜಾಕಿರ್ ಹುಸೇನ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಖುಸ್ತರಿ ಬೇಗಂ,ಸೈಯದ್ ಇರ್ಫಾನ್ ಜೀಲಾನಿ,ಸೈಯದ್ ತಾಜ್,ಖಾಸಿಫ್ ಉಲ್ಲಾ,ಇರ್ಫಾನ್,ಮಹಬೂಬ್ ಬಾಷಾ,ಜಬಿ, ಹಸೇನ್, ಹುಸೇನ್, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಇದೇ ಸಂಧರ್ಭದಲ್ಲಿ ಉಚಿತ ಲಸಿಕೆಯನ್ನು ಹಾಕಲಾಯಿತು.