ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕಾಕರಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ಹಂಚಿಕೆಯಾದ ಲಸಿಕೆಯನ್ನು ಕೋವಿಡ್-19 ವಾರಿಯರ್ಗಳಿಗೆ ಕಾಲಮಿತಿಯಂತೆ ಒಂದು ಮತ್ತು ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ನಿಗದಿಪಡಿಸಿದ ಅವಧಿ ಪೂರ್ಣಗೊಂಡ ನಂತರ ಎರಡನೇ ನೀಡುವಲ್ಲಿ ಕ್ರಮವಹಿಸಲಾಗುತ್ತಿದೆ. ಹಾಗೂ ಕಾಲಕಾಲಕ್ಕೆ ಸ್ವೀಕೃತವಾಗುವ ಸರ್ಕಾರದ ನಿರ್ದೇಶನಗಳಂತೆ ಲಸಿಕಾಕರಣ ನಡೆಸಲಾಗುತ್ತಿದ್ದು ಒಂದು ಲಸಿಕಾ ಮೇಳವನ್ನು ಈಗಾಗಲೇ ನಡೆಸಲಾಗಿದೆ.
ಸರ್ಕಾರದಿಂದ ಹಂಚಿಕೆಯಾದ ಲಸಿಕೆಗಳನ್ನು, ಲಸಿಕಾಕರಣವನ್ನು ಬ್ಯಾನರ್ನಡಿ ಆಯೋಜಿಸಲು ಮಾರ್ಗಸೂಚಿಯಲ್ಲಿ ಅವಕಾಶವಿರುವುದಿಲ್ಲ. ಲಸಿಕಾಕರಣ ನಡೆಸುವ ವಿಷಯದಲ್ಲಿ ಜಿಲ್ಲಾಡಳಿತಕ್ಕಾಗಲಿ ಅಥವಾ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗಾಗಲಿ ಯಾವುದೇ ರೀತಿಯ ಒತ್ತಡವಾಗಲಿ ಅಥವಾ ಶಿಫಾರಸ್ಸು ಬಂದಿರುವುದಿಲ್ಲ.
ಜಿಲ್ಲಾಡಳಿತವು ಮುಂಬರುವ ದಿನಗಳಲ್ಲಿ ಜಿಲ್ಲೆಯ ಲಸಿಕೆ ಬೇಡಿಕೆಯಂತೆ ಸರ್ಕಾರದ ನ್ಯಾಯಸಮ್ಮತವಾಗಿ ನಡೆಸಲಾಗುವುದು. ಆದ್ದರಿಂದ ಸಾರ್ವಜನಿಕ ಸೇವೆ ಕಾರ್ಯಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ನಾಗರೀಕರು ಜಿಲ್ಲಾಡಳಿತಕ್ಕೆ ಸಹಕರಿಸಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಸಿಕಾರಣ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.